ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷೇತ್ರದ ಮತದಾರರಿಗೆ ಗೆಲುವು ಅರ್ಪಣೆ’

ಮೂರನೇ ಯತ್ನದಲ್ಲಿ ಯಶ ಕಂಡ ಕಳಲೆ; ಜನರಿಗೆ ಬೇಕಿರುವುದು ಅಭಿವೃದ್ಧಿಯ ರಾಜಕಾರಣ
Last Updated 14 ಏಪ್ರಿಲ್ 2017, 8:30 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ಮೀಸಲು ಕ್ಷೇತ್ರದ ಉಪಚುನಾವಣೆಯಲ್ಲಿ ಲಭಿಸಿದ ಗೆಲುವನ್ನು ಕ್ಷೇತ್ರದ ಮತದಾರರಿಗೆ ಅರ್ಪಿ ಸುವುದಾಗಿ ವಿಜೇತ ಅಭ್ಯರ್ಥಿ ಕಳಲೆ ಕೇಶವಮೂರ್ತಿ ತಿಳಿಸಿದರು.

ಫಲಿತಾಂಶ ಪ್ರಕಟವಾದ ಬಳಿಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಜನರಿಗೆ ಬೇಕಿರುವುದು ಅಭಿವೃದ್ಧಿಯ ರಾಜಕಾರಣ; ಹುಸಿ ಸ್ವಾಭಿಮಾನದ ರಾಜಕಾರಣವಲ್ಲ’ ಎಂದರು.

‘ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಈ ಪಕ್ಷದ ಪರೋಕ್ಷ ಬೆಂಬಲವೂ ನನ್ನ ಗೆಲುವಿಗೆ ಸಹಾಯ ಮಾಡಿದೆ’ ಎಂದು ನುಡಿದರು.

ಗೆಲ್ಲಬೇಕೆನ್ನುವ ಗುರಿ ಇಟ್ಟು ಕೊಂಡಿದ್ದೆ. ಅಂತರದ ಬಗ್ಗೆ ಯೋಚಿಸಿ ರಲಿಲ್ಲ. 21 ಸಾವಿರ ಮತಗಳ ಅಂತರ ದಿಂದ ಗೆದ್ದಿರುವುದು ಸಹಜವಾಗಿಯೇ ಖುಷಿ ನೀಡಿದೆ. ಶ್ರೀನಿವಾಸಪ್ರಸಾದ್‌ ರಾಜೀನಾಮೆ ಕೊಟ್ಟಿದ್ದು ನನಗೆ ವರದಾನವಾಯಿತು ಎಂದು ಹೇಳಿದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿ ಗೆಂದು ₹ 600 ಕೋಟಿಗೂ ಹೆಚ್ಚು ಅನು ದಾನ ಲಭಿಸಿದೆ. ಅದನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸುವುದು, ಕುಡಿ ಯುವ ನೀರು ಪೂರೈಕೆ, ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದಕ್ಕೆ ಆದ್ಯತೆ ನೀಡು ತ್ತೇನೆ. ಶ್ರೀಕಂಠೇಶ್ವರ ದೇಗಲು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

2008, 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೇಶವಮೂರ್ತಿ ಎರಡೂ ಬಾರಿ ಸೋಲು ಕಂಡಿದ್ದರು. ಉಪಚುನಾ ವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ದ್ದರು. ಅವಿವಾಹಿತರಾಗಿರುವ ಅವರು ಆಟೊಮೊಬೈಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ.

ಗೆಲುವು ಸಾಧಿಸಿದ ಬಳಿಕ ಕೇಶವ ಮೂರ್ತಿ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಆರ್‌.ಧ್ರುವನಾರಾಯಣ ಜೊತೆಗೂಡಿ ಮಾಜಿ ಸಚಿವ ಬೆಂಕಿ ಮಹ ದೇವು ಅವರ ನಿವಾಸಕ್ಕೆ ತೆರಳಿದರು. ಮಹದೇವು ಪತ್ನಿ ಡಿ.ರಾಜಮ್ಮ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು.

‘ಕೇಶವಮೂರ್ತಿ ಅವರನ್ನು ಶಾಸಕರ ನ್ನಾಗಿ ಮಾಡಬೇಕೆಂಬುದು ನಮ್ಮ ಯಜಮಾನರ ಆಸೆಯಾಗಿತ್ತು. ಅವರ ಅಭಿಮಾನಿಗಳು ಹಾಗೂ ಕ್ಷೇತ್ರದ ಜನ ಆ ಕನಸನ್ನು ಈಗ ನಿಜ ಮಾಡಿದ್ದಾರೆ’ ಎಂದು ರಾಜಮ್ಮ ತಿಳಿಸಿದರು.

ಡಾ.ಮಹದೇವಪ್ಪ ಮಾತನಾಡಿ, ಕ್ಷೇತ್ರದಲ್ಲಿ ಮೋದಿ ಅಲೆ, ಯಡಿ ಯೂರಪ್ಪ ಅಲೆ ಇರಲಿಲ್ಲ. ಬದಲಾಗಿ ಅಭಿವೃದ್ಧಿ ಪರವಾದ ಅಲೆ ಇದೆ. ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ್ದವರು ಮೂರೂ ವರೆ ವರ್ಷ ನಿರ್ಲಕ್ಷ್ಯ ವಹಿಸಿದ್ದರು. ಆದರೆ, ಸಿದ್ದರಾಮಯ್ಯ ಸರ್ಕಾರದ ಯೋಜನೆ ಮೆಚ್ಚಿ ಮತ ನೀಡಿದ್ದಾರೆ ಎಂದರು. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ 51.59 ಮತ್ತು ಬಿಜೆಪಿಗೆ ಶೇ 45.37 ಮತಗಳು ಬಂದಿವೆ.

*
ಯಾವುದೇ ಸಮುದಾಯ ಒಬ್ಬ ನಾಯಕನಿಗೆ ಅಥವಾ ಮತ್ತೊ ಬ್ಬರಿಗೆ ಸೀಮಿತವಾಗಿಲ್ಲ. ಕೋಮು ಶಕ್ತಿ ದೂರ ಇಟ್ಟು ಮತದಾರರು ಪ್ರಜಾಪ್ರಭುತ್ವ ಬಲಗೊಳಿಸಿದ್ದಾರೆ.
-ಡಾ.ಎಚ್‌.ಸಿ.ಮಹದೇವಪ್ಪ,
ಜಿಲ್ಲಾ ಉಸ್ತುವಾರಿ ಸಚಿವ

*
ವಿ.ಶ್ರೀನಿವಾಸಪ್ರಸಾದ್‌ ಆರೋಪಕ್ಕೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್‌ಗೆ ಲಭಿಸಿರುವ ಮತಗಳೇ ಪ್ರತಿಕ್ರಿಯೆ ನೀಡಿವೆ ಎಂದು ಅಂದುಕೊಂಡಿದ್ದೇನೆ.
-ಆರ್‌.ಧ್ರುವನಾರಾಯಣ,
ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT