ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವ ಉದ್ಯೋಗ ಕೈಗೊಳ್ಳಲು ಸಲಹೆ

Last Updated 14 ಏಪ್ರಿಲ್ 2017, 9:44 IST
ಅಕ್ಷರ ಗಾತ್ರ

ಕುಕನೂರು: ಗ್ರಾಮೀಣ ಪ್ರದೇಶದ ಯುವಕ ಯುವತಿಯರನ್ನು ಸ್ವಾವಲಂಬಿ ಗಳಾಗಿಸುವ ನಿಟ್ಟಿನಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಒಂದಾದ ಸ್ವಯಂ ಉದ್ಯೋಗ ಯೋಜನೆ ಹಲವು ನಿರುದ್ಯೋಗಿಗಳಿಗೆ  ವರದಾನವಾಗಿದೆ ಎಂದು ತಾಲ್ಲೂಕು ಪಂಚಾಯಿತ ಸಹಾ ಯಕ ನಿರ್ದೆಶಕ ಬಿ.ಸಿ.ಸತೀಶ ತಿಳಿಸಿದರು.

ಸಮೀಪದ ಬನ್ನಿಕೊಪ್ಪ ಗ್ರಾಮದಲ್ಲಿ ಗುರುವಾರ ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುರುಗೋಡ ಇವರ ಸಂಯುಕ್ತ ಆಶ್ರಯದಲ್ಲಿ ರಾಜೀವ್ ಗಾಂಧಿ ಚೈತನ್ಯ ಯೋಜನೆ ಅಡಿಯಲ್ಲಿ ಯುವ ಜನತೆಗೆ ಉದ್ಯಮ ಶೀಲತಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಿರುದ್ಯೋಗಿಗಳು ಸ್ವಾಭಿಮಾನಿ, ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಗ್ರಾಮ ಪಂಚಾಯಿತಿಗಳಲ್ಲಿ ಆಯ್ದ ವಿದ್ಯಾರ್ಥಿಗ ಳಿಗೆ ರಾಜೀವ್‌ ಗಾಂಧಿ ಚೈತನ್ಯ ಯೋಜನೆ ಅಡಿ  ತರಬೇತಿ ಸಾಲ ಸೌಲಭ್ಯ ನೀಡಲಾಗುತ್ತದೆ ಹಾಗೂ ಸರ್ಕಾರದ ಸಹಾಯಧನ ನೀಡುವ ಮೂಲಕ ಯುವಕರನ್ನು ಸ್ವಯಂ ಉದ್ಯೋಗಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ತರಬೇತಿ ನೀಡುತ್ತಿರುವುದು ಸ್ವಾಗತಾರ್ಹ ಎಂದರು.

ಆರ್‌ಡಿಎಸ್‌ ಮುಖ್ಯಸ್ಥ ಪವನ ಕುಮಾರ ಮಾತನಾಡಿ, ನಿರುದ್ಯೋಗಿ ಯುವಕ ಯುವತಿಯರನ್ನು ಗ್ರಾಮಸಭೆ ಮೂಲಕ ಆಯ್ಕೆ ಮಾಡಿ  ತಮ್ಮ ಆಸಕ್ತಿದಾಯಕ ಕೃಷಿ ಚಟುವಟಿಕೆಗಳು, ಇನ್ನಿತರ ತಾಂತ್ರಿಕ ಕೃಷಿಯೇತರ ಚಟುವಟಿಕೆಗಳ ತರಬೇತಿ ಪಡೆದು ಕೊಳ್ಳಬಹುದಾಗಿದೆ.

ಸಾಲ ಸೌಲಭ್ಯ ಒದಗಿಸುವ ಮೂಲಕ ಸರ್ಕಾರದ ಸಂಘ ಸಂಸ್ಥೆಗಳ ಮಾರ್ಗದ ರ್ಶನದಲ್ಲಿ ಸಹಕಾರಿಯಾಗಿ ಉದ್ಯಮ ಬೆಳೆಸುವುದು ಈ ಯೋಜ ನೆಯ ಉದ್ದೇಶವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT