ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ವಿಷಯಗಳಿಗೆ ಒಂದೇ ಆ್ಯಪ್‌

Last Updated 14 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸಾಮಾನ್ಯ ಜ್ಞಾನ, ಸಾಹಿತ್ಯ, ಗಾದೆ, ಭಾವಗೀತೆಗಳು ಹೀಗೆ ಪ್ರತ್ಯೇಕ ವಿಷಯಗಳಿಗೆ ಸಂಬಂಧಿಸಿದ ಕನ್ನಡ ಆ್ಯಪ್‌ಗಳು ಸಾಕಷ್ಟಿವೆ.

ಆದರೆ ಈ ಎಲ್ಲವನ್ನೂ ಒಂದೇ ಆ್ಯಪ್‌ನಲ್ಲಿ ನೋಡಲು ಸಾಧ್ಯವಿರುವುದು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ದೊರಕುವ ‘ವಿಶ್ವಕೋಶ’ (Kannada Vishwakosha) ಆ್ಯಪ್‌ನಲ್ಲಿ.

ಈ ಆ್ಯಪ್‌ನಲ್ಲಿ  ಸಾಹಿತ್ಯ, ಮನರಂಜನೆ, ಸಂಸ್ಕೃತಿ, ಧಾರ್ಮಿಕ, ಆರೋಗ್ಯ, ಜ್ಞಾನವೃದ್ಧಿ ಹೀಗೆ ಹಲವು ವಿಷಯಕ್ಕೆ ಸಂಬಂಧಿಸಿದ ವಿಷಯಗಳು ಲಭ್ಯವಿವೆ. ಪ್ರತ್ಯೇಕ ವಿಷಯಕ್ಕೆ ಸಂಬಂಧಿಸದಂತೆ ಪ್ರತ್ಯೇಕ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಜನರ ಹೊರೆಯನ್ನು ‘ವಿಶ್ವಕೋಶ’ ಆ್ಯಪ್ ತಪ್ಪಿಸಿದೆ.

ಆ್ಯಪ್‌ನಲ್ಲಿ ರಾಜ್ಯದ ಪ್ರಖ್ಯಾತ ಕವಿಗಳ ಕವನಗಳು, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಸೇರಿದಂತೆ ಹಲವು  ಸಣ್ಣಕತೆಗಳು, ಖ್ಯಾತ ವಚನಕಾರರ ವಚನಗಳು, ನಾಣ್ಣುಡಿಗಳು, ಗಾದೆಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು, ಸಾಮಾನ್ಯಜ್ಞಾನ, ಆರೋಗ್ಯ ಮಾಹಿತಿ, ಒಗಟುಗಳು, ಸುಭಾಷಿತ, ನಗೆಹನಿ, ಮಂಕುತಿಮ್ಮನ ಕಗ್ಗ, ಭಕ್ತಿ ಗೀತೆಗಳು, ಪುರಾಣಗಳು, ನೀತಿಕತೆಗಳು ಇನ್ನಿತರೆ ವಿಷಯಗಳನ್ನು ಆ್ಯಪ್‌ ತನ್ನ ಬಳಕೆದಾರರಿಗೆ ಒದಗಿಸುತ್ತದೆ.

ಆ್ಯಪ್‌ನಲ್ಲಿ ರಸಪ್ರಶ್ನೆ ವಿಭಾಗವೂ ಇದೆ. ಬಳಕೆದಾರರು ಆ್ಯಪ್‌ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಬುದ್ಧಿಮತ್ತೆಯನ್ನು ಒರೆಗೆ ಹಚ್ಚಬಹುದು. ಸಾಮಾನ್ಯ ಜ್ಞಾನ ಮೌಲ್ಯಮಾಪನಕ್ಕೂ ಆ್ಯಪ್‌ನಲ್ಲಿ ಅವಕಾಶವಿದೆ.

ಆ್ಯಪ್‌ನಲ್ಲಿ ಪ್ರಸಿದ್ಧ ಸಾಹಿತಿಗಳ, ಚಿಂತಕರ ಅಂಕಣಗಳನ್ನು ನೀಡಲಾಗಿದೆ. ಮಕ್ಕಳ ಆರೋಗ್ಯ, ಶಿಕ್ಷಕರಿಗೆ ಸಲಹೆ, ಪೋಷಕರಿಗೆ ಸಲಹೆ, ಆಧ್ಯಾತ್ಮಿಕ ಬರಹಗಳ ಗುಚ್ಛವೂ ಇದರಲ್ಲಿದೆ.

ಈ ಆ್ಯಪ್‌ ಬಳಸುವುದು ಬಹಳ ಸುಲಭ. ಅಕ್ಷರಗಳ ಫಾಂಟ್‌ ಕೂಡ ಸುಂದರವಾಗಿದೆ. ಓದಲೂ ಸುಲಭ. ಆ್ಯಪ್‌ನಲ್ಲಿನ ಮಾಹಿತಿಯನ್ನು ಪ್ರತಿದಿನ ಅಪ್‌ಡೇಟ್‌ ಮಾಡುವುದಾಗಿ ಆ್ಯಪ್‌ ಅಭಿವೃದ್ಧಿ ತಂಡದ ಹೇಳಿಕೊಂಡಿದೆ.

ಹಿಂದಿನ ಪುಟಕ್ಕೆ ಹೋಗುವಾಗ ಪ್ರತಿ ಬಾರಿ ಎದುರಾಗುವ ಜಾಹಿರಾತು ಪುಟ ಸ್ವಲ್ಪ ಕಿರಿಕಿರಿ ಉಂಟುಮಾಡುತ್ತದೆ.

ಬಬಿತಾ ಎಂಬುವರು ಅಭಿವೃದ್ಧಿಪಡಿಸಿರುವ ಈ ಆ್ಯಪ್‌ ಅನ್ನು ಇಲ್ಲಿಯವರೆಗೆ ಒಂದು ಲಕ್ಷ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಬಳಕೆದಾರರು ಆ್ಯಪ್‌ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT