ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಇಂದಿನಿಂದ ಕೆಸಿಎಲ್‌ ಕಲರವ

Last Updated 15 ಏಪ್ರಿಲ್ 2017, 4:56 IST
ಅಕ್ಷರ ಗಾತ್ರ

ವಿರಾಜಪೇಟೆ: ಜಿಲ್ಲೆಯ ಕ್ರಿಕೆಟ್‌ ಪ್ರೇಮಿ ಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಎರಡನೇ ವರ್ಷದ ಕೊಡಗು ಕ್ರಿಕೆಟ್‌ ಲೀಗ್‌ (ಕೆಸಿಎಲ್)  ತಾಲ್ಲೂಕಿನ ಸಿದ್ದಾಪುರದಲ್ಲಿ ಇಂದು (ಏ.15) ಆರಂಭಗೊಳ್ಳಲಿದೆ.ಸಿದ್ದಾಪುರದ ಸಿಟಿ ಬಾಯ್ಸ್‌ ಸಂಘ ಆಯೋಜಿಸುತ್ತಿರುವ ಐಪಿಎಲ್‌ ಮಾದ ರಿಯ ಜಿಲ್ಲಾ ಮಟ್ಟದ ಕೆಸಿಎಲ್‌ ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ.

ಎಲ್ಲ ಪಂದ್ಯಗಳು ಸಿದ್ದಾಪುರ ಪ್ರೌಢಶಾಲೆಯ ಮೈದಾನದಲ್ಲಿ ನಡೆಯಲಿದ್ದು, ಒಟ್ಟು ಆರು ದಿನಗಳ ಕಾಲ ನಡೆಯುವ ಟೂರ್ನಿಯ ಅಂತಿಮ ಪಂದ್ಯ ಏ. 20 ರಂದು ನಡೆಯಲಿದೆ. ಜಿಲ್ಲಾ ಮಟ್ಟದ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಗೆ ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ.

14  ಪ್ರಾಂಚೈಸಿಗಳು ಈಗಾಗಲೇ ಆಟಗಾರರ ಬಿಡ್ಡಿಂಗ್‌ನಲ್ಲಿ ಭಾಗವಹಿಸಿ ತಲಾ 15 ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಹರಾಜು ಪ್ರಕ್ರಿಯೆಗೆ ಜಿಲ್ಲೆಯ ವಿವಿಧೆಡೆಗಳ 280 ಉತ್ತಮ ಆಟಗಾರರನ್ನು ಸಮಿತಿ ಆಯ್ಕೆ ಮಾಡಿತ್ತು. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 210 ಆಟಗಾರರನ್ನು ಅಂತಿಮವಾಗಿ 14 ಪ್ರಾಂಚೈಸಿಗಳು ಆಯ್ಕೆಮಾಡಿಕೊಂಡಿವೆ.

14 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಟೂರ್ನಿ ಲೀಗ್‌ ಮಾದರಿಯಲ್ಲಿರುತ್ತದೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ  ಎರಡು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಲಿದೆ. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಎರಡು ತಂಡಗಳು ಮೊದಲ ಕ್ವಾಲಿಫೈಯರ್‌ ಪಂದ್ಯವನ್ನಾಡಲಿದ್ದು ವಿಜೇತ ತಂಡ ಫೈನಲ್ಸ್‌ ಪ್ರವೇಶಿಸಲಿದೆ. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ಎರಡನೆ ಸ್ಥಾನ ಪಡೆದ ಎರಡು ತಂಡಗಳು ಎಲಿಮಿನೇಟರ್‌ ಪಂದ್ಯವನ್ನಾಡಲಿದ್ದು ಸೋತ ತಂಡ ಟೂರ್ನಿಯಿಂದ ನಿರ್ಗಮಿಸಲಿದೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್‌ನಲ್ಲಿ ಗೆದ್ದ ತಂಡ ಎರಡನೆ ಕ್ವಾಲಿಫೈಯರ್‌ ಪಂದ್ಯವ ನ್ನಾಡಲಿದ್ದು ಇದರಲ್ಲಿ ಗೆದ್ದ ತಂಡ ಫೈನಲ್ಸ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದೆ.ಸೆಮಿಫೈನಲ್ಸ್‌ ಪಂದ್ಯಗಳ ಬದಲಿಗೆ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್‌ ಮಾದರಿಯನ್ನು ಅಳವಡಿಸಿಕೊಂಡಿರು ವುದರಿಂದ ಸಮರ್ಥ ತಂಡಗಳು ಫೈನಲ್ಸ್‌ ಪ್ರವೇಶಿಸಲಿವೆ ಎಂಬುದು ಆಯೋಜಕರ ಅಭಿಪ್ರಾಯ.

ಕೆಸಿಎಲ್‌ ವಿಜೇತ ತಂಡ ಟ್ರೋಫಿ ಹಾಗೂ ₹1,11,111, ದ್ವಿತೀಯ ಸ್ಥಾನ ಪಡೆಯುವ ತಂಡ ಟ್ರೋಫಿ ಹಾಗೂ ₹55,555 ಪಡೆಯಲಿವೆ.ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸುವ ಆಟಗಾರನಿಗೆ 10 ಸಾವಿರ ಮೌಲ್ಯದ ಮೊಬೈಲ್‌, ಟೂರ್ನಿಯಲ್ಲಿ ಮೊದಲ 50 ರನ್‌ ಗಳಿಸುವ ಆಟಗಾರನಿಗೆ ₹3 ಸಾವಿರ, ಸರಣಿ ಶ್ರೇಷ್ಠ, ಪಂದ್ಯ ಶ್ರೇಷ್ಠ ಹ್ಯಾಟ್ರಿಕ್‌ ಸಿಕ್ಸ್‌, ಹ್ಯಾಟ್ರಿಕ್‌ ವಿಕೆಟ್‌ ಸೇರಿದಂತೆ ಹಲವಾರು ಬಹುಮಾನಗಳನ್ನು ಆಟಗಾರರು ಪಡೆಯಲಿದ್ದಾರೆ.

15ರಂದು ಬೆಳಿಗ್ಗೆ 9 ಗಂಟೆಗೆ ಸಿದ್ದಾಪುರ ಪಟ್ಟಣದಿಂದ 14 ತಂಡಗಳ ಆಟಗಾರರು ಮೆರವಣಿಗೆ ಮೂಲಕ ಟೂರ್ನಿ ನಡೆಯುವ ಮೈದಾನಕ್ಕೆ ತೆರಳಲಿದ್ದಾರೆ. ಈಗಾಗಲೇ ಸಿದ್ದಾಪುರ ಪಟ್ಟಣದ ಪ್ರಮುಖ ಭಾಗದಲ್ಲಿ ಸ್ವಾಗತ ಬೃಹತ್‌ ದ್ವಾರಗಳನ್ನು ಅಳವಡಿಸಲಾ ಗಿದೆ. ಮೆರವಣಿಗೆಯಲ್ಲಿ ಕಲಾ ತಂಡಗಳಾದ ಡೊಳ್ಳುಕುಣಿತ, ಬೊಂಬೆ ಕುಣಿತಗಳೊಂದಿಗೆ ವಾದ್ಯಗೋಷ್ಠಿಯ ತಂಡಗಳು ಭಾಗವಹಿಸಲಿದ್ದು ಮೆರವಣಿಗೆ ಕಳೆಗಟ್ಟುವ ನಿರೀಕ್ಷೆಯಿದೆ.

ಮ್ಯಾರಥಾನ್‌ ಓಟಗಾರ ಹೊಸೊಕ್ಲು ಚಿಣ್ಣಪ್ಪ ಮೈದಾನಕ್ಕೆ ಕ್ರೀಡಾಜ್ಯೋತಿ ಯನ್ನು ತರಲಿದ್ದಾರೆ. ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ಜೆಡಿಎಸ್‌  ಜಿಲ್ಲಾ ಘಟಕದ ಅಧ್ಯಕ್ಷ ಸಂಕೇತ್‌ ಪೂವಯ್ಯ, ರಣಜಿ ಆಟಗಾರ ಕೆ.ಬಿ. ಪವನ್‌ ಮತ್ತಿತರರು ಭಾಗವಹಿಸಲಿದ್ದಾರೆ.

ಕಳೆದ ವರ್ಷದಿಂದಷ್ಟೆ ಆರಂಭಗೊಂಡಿರುವ ಐಪಿಎಲ್‌ ಮಾದರಿಯ ಜಿಲ್ಲೆಯ ಕೆಸಿಎಲ್‌ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಟೂರ್ನಿ ಜಿಲ್ಲೆಯ ಕ್ರಿಕೆಟ್‌ ಹಬ್ಬವಾಗುವತ್ತ ಸಾಗುತ್ತಿದೆ. ಜಿಲ್ಲೆಯ ಎಲ್ಲ ಸಮುದಾಯದ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಲು ಮುಂದಾಗಿರುವ ಸಿಟಿಬಾಯ್ಸ್‌ ಸಂಘ ದಾನಿಗಳ ನೆರವಿನಿಂದ ₹20 ಲಕ್ಷ ವೆಚ್ಚದಲ್ಲಿ ಟೂರ್ನಿ ನಡೆಸುತ್ತಿರುವುದಾಗಿ ಆಯೋಜಕರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT