ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ತತ್ವ, ಸಿದ್ಧಾಂತ ಸಾರ್ವಕಾಲಿಕ ಸತ್ಯ

Last Updated 15 ಏಪ್ರಿಲ್ 2017, 5:35 IST
ಅಕ್ಷರ ಗಾತ್ರ

ಹುಣಸೂರು: ಸಮಾಜದಲ್ಲಿ ಅನ್ಯಾಯ ಮಾಡುವವರು ಇತರರಿಗೆ ಸತ್ಯ ಮಾರ್ಗ ದಲ್ಲಿ ನಡೆಯುವ ಸಿದ್ಧಾಂತ ಬೋಧಿಸುವ ಪರಿಸ್ಥಿತಿ ಎದುರಾಗಿರು ವುದು ವಿಪ ರ್ಯಾಸ ಎಂದು ಶಾಸಕ ಮಂಜುನಾಥ್‌ ವಿಷಾದ ವ್ಯಕ್ತಪಡಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ 126ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಥವರು ತಳ ಹಂತದ ಕುಟುಂಬಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಇದರ ವಿರುದ್ಧ ಹೋರಾಡುವವರು ಇಂದಿನ ಸಮಾಜಕ್ಕೆ ಬೇಕಾಗಿದ್ದಾರೆ ಎಂದರು.

ಅಂಬೇಡ್ಕರ್‌ ಸರ್ವಧರ್ಮೀಯರಿಗೂ ಅನುಕೂಲವಾಗುವ ಸಂವಿಧಾನ ಕಲ್ಪಿಸುವ ಮೂಲಕ ವಿಶ್ವಮಾನವರಾಗಿ ದ್ದಾರೆ. ಆದರೆ, ಕೆಲವರು ಬೆಳಕಿನ ಕೆಳಗಿನ ಕತ್ತಲೆಯಲ್ಲೇ ಆಶ್ರಯ ಪಡೆದು ಬೆಳಕನ್ನೇ ತಿನ್ನುವ ಹುನ್ನಾರ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಹರಿಹರ ಆನಂದಸ್ವಾಮಿ ಮಾತ ನಾಡಿ, ಸನ್ಯಾಸಿಗಳಿಗೆ ರಾಜ್ಯದ ಅಧಿಕಾರ ನೀಡುವ ಸಂಪ್ರದಾಯ ಬೆಳೆಯುತ್ತಿದ್ದು, ಇದರಿಂದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿದೆ ಎಂದು ಹೇಳಿದರು.

ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ಅಂಬೇಡ್ಕರ್‌ ಅವರು ದಲಿತರಿಗೆ ರಕ್ಷಣೆ ನೀಡುವ ಕಾಯ್ದೆ ರೂಪಿಸಿದ್ದರೂ ಗ್ರಾಮೀಣ ಭಾಗದಲ್ಲಿ ದಲಿತರ ಶೋಷಣೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಎಎಸ್‌ಪಿ ಹರೀಶ್ ಪಾಂಡೆ, ಉಪವಿಭಾಗಾಧಿಕಾರಿ ಡಾ.ಸೌಜನ್ಯಾ, ಕೆಂಪರಾಜು, ಬಸವರಾಜು, ಪುಟ್ಟಸ್ವಾಮಿ ಮಾತನಾಡಿದರು.

ಜಿ.ಪಂ ಸದಸ್ಯರಾದ ಗೌರಮ್ಮ ಸೊಮ ಶೇಖರ್‌, ಡಾ.ಪುಷ್ಪಾ ಅಮರನಾಥ್‌, ನಗರಸಭಾ ಅಧ್ಯಕ್ಷ ಲಕ್ಷ್ಮಣ್‌, ಸುನೀತಾ ಜಯರಾಮೇಗೌಡ ಮತ್ತು ದಲಿತ ಮುಖಂಡರು ಹಾಜರಿದ್ದರು.ನಗರದ ಶಾಸ್ತ್ರಿ ಪಬ್ಲಿಕ್‌ ಸ್ಕೂಲ್ ಆವರಣದಲ್ಲಿ ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ರಾಧಾಕೃಷ್ಣ, ಅಂಬೇಡ್ಕರ್‌ ದೇಶದ ಪ್ರತಿಯೊಂದು ವರ್ಗದವರಿಗೂ ಸಮಾನ ಹಕ್ಕು ನೀಡಿದ್ದಾರೆ ಎಂದರು.

ಪ್ರಾಂಶುಪಾಲ ರವಿಶಂಕರ್‌, ಮುಖ್ಯಶಿಕ್ಷಕಿ ಸತ್ಯವತಿ, ಶಿಕ್ಷಕರು ಭಾಗವಹಿಸಿದ್ದರು.ಬನ್ನಿಕುಪ್ಪೆಯಲ್ಲಿ ನಡೆದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಡಾ.ಪುಷ್ಪಾ ಅಮರನಾಥ್‌, ಅಂಬೇಡ್ಕರ್ ಪ್ರತಿಯೊಂದು ಸಮುದಾಯಕ್ಕೂ ಸ್ಥಾನ ಕಲ್ಪಿಸಿದ ದೀಮಂತ ನಾಯಕ. ಅವರು ನೀಡಿದ ಮೀಸಲಾತಿಯಿಂದಾಗಿ ಅನೇಕ ಸಮುದಾಯಗಳು ಮುಖ್ಯವಾಹಿನಿಗೆ ಬಂದಿವೆ ಎಂದರು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್‌, ಅಧ್ಯಕ್ಷೆ ಚಿಕ್ಕಸುಜಾತಾ, ಸದಸ್ಯರು ಭಾಗವಹಿಸಿದ್ದರು. ಮೈಸೂರಿನ ಲಕ್ಷ್ಮಿರಾಮ್‌ ಅವರು ಕ್ರಾಂತಿಗೀತೆ ಹಾಡಿದರು.

ಸಂವಿಧಾನ ಶಿಲ್ಪಿಗೆ ಪುಷ್ಪನಮನ

ವರುಣಾ: ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು ಅಧ್ಯಕ್ಷೆ ಕಾಂತಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು.ಚಂದ್ರಶೇಖರ್ ಮಾತನಾಡಿ ಅಂಬೇಡ್ಕರ್ ಅವರ ವಿಚಾರಧಾರೆ ತಿಳಿಸಿಕೊಟ್ಟರು. ಪ್ರಧಾನಮಂತ್ರಿ ಜನಧನ ಯೋಜನೆಯ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಜಯಂತಿ ಅಂಗವಾಗಿ ಕೆಲವು ಫಲಾನುಭವಿಗಳಿಗೆ ಗ್ಯಾಸ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸದಸ್ಯರಾದ ಚಿಕ್ಕದೇವಯ್ಯ, ಮಹೇಶ್, ಸ್ವಾಮಿ, ಗುರುಮೂರ್ತಿ, ದೇವಯ್ಯ, ಪಿಡಿಒ ಬಸವರಾಜು ಇದ್ದರು.

ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ  ರಾಮಕೃಷ್ಣಯ್ಯ, ಸಿದ್ದಪ್ಪ, ರಾಜಲಕ್ಷ್ಮಿ ಇತರರು ಹಾಜರಿದ್ದರು.
ದೇವಲಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಅಧ್ಯಕ್ಷೆ ರಾಜಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನಮಂತ್ರಿ ಜನಧನ ಯೋಜನೆಯ ನೇರ ಪ್ರಸಾರಕ್ಕೆ ಸೆಟ್ಆಪ್ ಬಾಕ್ಸ್ ಇಲ್ಲದ ಕಾರಣ ಕಂಪ್ಯೂಟರ್ ಮೂಲಕ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಸದಸ್ಯರಾದ ರವಿ, ರಘು, ಪಿಡಿಒ ಪುಷ್ಪಾ ಬಾಯಿ ಭಾಗವಹಿಸಿದ್ದರು.

ಬಿಳಿಗೆರೆ ಠಾಣೆಯಲ್ಲಿ ಎಸ್ಐ ಸತೀಶ್ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ದಂಡಿಕರೆ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಪಿ.ಶ್ರೀಧರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಗ್ರಾಮದ ಅಂಬೇಡ್ಕರ್ ಯುವಕ ಸಂಘದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT