ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಭಿಕ್ಷೆಯಲ್ಲ, ಶೋಷಿತರ ಹಕ್ಕು

Last Updated 15 ಏಪ್ರಿಲ್ 2017, 6:20 IST
ಅಕ್ಷರ ಗಾತ್ರ

ಮೂಡಿಗೆರೆ: ‘ಮೀಸಲಾತಿಯು ಯಾವುದೇ ವ್ಯಕ್ತಿ ನೀಡುವ ಭಿಕ್ಷೆಯಲ್ಲ. ಅದು ಶೋಷಿತ ವರ್ಗಗಳ ಜನ್ಮಸಿದ್ಧ ಹಕ್ಕಾಗಿದೆ’ ಎಂದು ಹೈಕೋರ್ಟ್‌ ವಕೀಲ ಶ್ರೀಧರ್‌ಪ್ರಭು ಅಭಿಪ್ರಾಯಪಟ್ಟರು.ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ವಿವಿಧ ಮಹನೀಯರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೀಸಲಾತಿಯಿಂದ ದಲಿತರು, ಹಿಂದುಳಿದವರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಬಡ್ತಿ ಯಲ್ಲಿ ಮೀಸಲಾತಿಯನ್ನು ಕಿತ್ತುಕೊಳ್ಳುವ ಮೂಲಕ ಹಕ್ಕನ್ನು ಕಸಿದುಕೊಳ್ಳಲಾಗು ತ್ತಿದೆ. ಇದರ ವಿರುದ್ಧ ಹಿಂದುಳಿದ ವರ್ಗ ದವರು ಜಾಗೃತರಾಗಬೇಕು’ ಎಂದರು.

‘ವಿಶ್ವಮಾನವರಾದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರನ್ನು ಜಾತಿ ಹೆಸರಿನಲ್ಲಿ ಕಟ್ಟಿ ಹಾಕುತ್ತಿರುವುದು ಅವರಿಗೆ ಎಸಗು ತ್ತಿರುವ ಅಪಚಾರವಾಗಿದೆ. ಅಂಬೇಡ್ಕರ್‌ ಅವರು ಯಾವುದೇ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಬದಲಾಗಿ ಶೋಷಿತ ವರ್ಗಗಳ ಪರವಾಗಿ ಇಡೀ ವಿಶ್ವಕ್ಕೆ ಕಣ್ಣು ತೆರೆಸಿದ ಮಹಾನ್‌ ವ್ಯಕ್ತಿ’ ಎಂದರು.

‘ಭಾರತದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಥಾಪಿಸುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದ್ದು, ಅಂಬೇಡ್ಕರ್‌ ಅವರು ದೇಶಕ್ಕೆ ಕಾನೂ ನಿನ ಜತೆಗೆ ಭಾರತದ ಆರ್ಥಿಕತೆಗೂ ಅಪಾರ ಕೊಡುಗೆ ನೀಡಿದ್ದಾರೆ’ ಎಂದರು.

ಹಂಪಿ ವಿವಿ ಪ್ರಾಧ್ಯಾಪಕ ಡಾ.ಪುಟ್ಟಯ್ಯ ಮಾತನಾಡಿ, ಭಾರತದಲ್ಲಿ ಅಂಬೇಡ್ಕರ್‌ ಹಾಗೂ ಬಾಬು ಜಗಜೀ ವನ್‌ರಾಂ ಅವರು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಒಂದೇ ವಿಚಾರಕ್ಕಾಗಿ ಪ್ರತ್ಯೇಕ ಮಾರ್ಗದಲ್ಲಿ ಸಾಗಿದ ವ್ಯಕ್ತಿಯಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾದ ಜಗಜೀವನ್‌ರಾಂ ಭಾರತದ ಹಸಿವು, ಬಡತನಕ್ಕೆ ಔಷಧಿ ನೀಡಿದ ಮಹಾನ್‌ವ್ಯಕ್ತಿ’ ಎಂದ ಅವರು, ‘ಭಾರತದ ರಾಜಕೀಯ ವ್ಯವಸ್ಥೆಯನ್ನು ದುರಸ್ತಿ ಮಾಡುವ ಅಗತ್ಯವಿದೆ. ರಾಜಕೀಯ ವ್ಯವಸ್ಥೆ ದುರಸ್ತಿಯಾಗದ ಹೊರತು ಸಾಮಾಜಿಕ ಸಮಸ್ಯೆ ನಿವಾರಣೆ ಅಸಾಧ್ಯ’ ಎಂದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಚಿಂತಕ ಸುಕುಮಾರ್‌ ಬಳ್ಳಾಲ್‌ ಅವರು ಭಗವಾನ್‌ ಮಹಾವೀರರ ಬಗ್ಗೆ ಮಾತನಾಡಿ, ‘ನಾವು ಬದುಕುವುದ ರೊಂದಿಗೆ ಇತರರ ಬದುಕಿಗೂ ಅವಕಾಶ ಕಲ್ಪಿಸಬೇಕು’ ಎಂದರು.

ಅರಣ್ಯ ವಸತಿ ಹಾಗೂ ವಿಹಾರ ಧಾಮ ನಿಗಮದ ಅಧ್ಯಕ್ಷ ಎ.ಎನ್‌. ಮಹೇಶ್‌ ದೇವರ ದಾಸಿಮಯ್ಯರ ಬಗ್ಗೆ ಮಾತನಾಡಿ, ‘ವಚನ ಸಾಹಿತ್ಯಕ್ಕೆ ದೇವರ ದಾಸಿಮಯ್ಯ ಅವರ ಕೊಡುಗೆ ಅಪಾರ ವಾಗಿದ್ದು, ಮೌಢ್ಯವನ್ನು ತೊಲಗಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಂತಹ ಮಹಾನ್‌ ವಚನಕಾರರನ್ನೂ ಜಾತಿ ಅಡಿಯಲ್ಲಿ ಕಟ್ಟಿಹಾಕುವುದು ಸರಿಯಲ್ಲ’ ಎಂದರು.

ಶಾಸಕ ಬಿ.ಬಿ. ನಿಂಗಯ್ಯ ಮಾತ ನಾಡಿ, ಮಹನೀಯರ ಬದುಕು ನಮಗೆ ಆದರ್ಶವಾಗಬೇಕು. ಸ್ವಾರ್ಥತೆಯನ್ನು ಬಿಟ್ಟು ಬದುಕುವ ಜೀವನ ನಮ್ಮದಾಗಬೇಕು. ಮೀಸಲಾತಿಯ ಸದುಪಯೋಗ ಪಡೆದುಕೊಂಡ ಜನತೆ, ತಮಗಿಂತ ಹಿಂದುಳಿದವರ ಏಳಿಗೆಗೆ ಶ್ರಮಿಸಿದರೆ ಸಮಾಜ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸವಿತಾ ರಮೇಶ್‌್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಮೀಜಾಬಿ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಣಕಲ್‌ ಶ್ಯಾಮಣ್ಣ, ಸದಸ್ಯರಾದ ಅಮಿತಾ ಮು ತ್ತಪ್ಪ, ನಿಖಿಲ್‌ ಚಕ್ರವರ್ತಿ, ತಹಶೀಲ್ದಾರ್‌ ನಂದಕುಮಾರ್‌, ತಾಲ್ಲೂಕು ಪಂಚಾ ಯಿತಿ ಇಒ ಗುರುದತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT