ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

92 ವಿದ್ಯಾರ್ಥಿಗಳಿಗೆ 191 ಸ್ವರ್ಣ ಪದಕಗಳು

Last Updated 15 ಏಪ್ರಿಲ್ 2017, 6:53 IST
ಅಕ್ಷರ ಗಾತ್ರ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ 67ನೇ ವಾರ್ಷಿಕ ಘಟಿಕೋತ್ಸವ ಶನಿವಾರ ಬೆಳಿಗ್ಗೆ ಜರುಗಲಿದ್ದು, 92 ಪ್ರತಿಭಾವಂತ ವಿದ್ಯಾರ್ಥಿಗಳು 191 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ.

ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯಗಳ ಸಹಕುಲಾಧಿಪತಿಯೂ ಆಗಿರುವ ಬಸವರಾಜ ರಾಯರಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕವಿ ವಿ.ಸಿ.ಐರಸಂಗ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುವುದು ಎಂದು ಕವಿವಿ ಪ್ರಕಟಣೆ ತಿಳಿಸಿದೆ.

ಬೆಳಿಗ್ಗೆ 10ಕ್ಕೆ ವಿವಿಯ ಆಡಳಿತ ಭವನದಿಂದ ಗಣ್ಯರು, ಸಿಂಡಿಕೇಟ್‌, ವಿದ್ಯಾವಿಷಯಕ ಪರಿಷತ್‌ ಸದಸ್ಯರು, ರ್‍್ಯಾಂಕ್‌ ವಿಜೇತರು, ಪದವೀಧರರು, ಪಿಎಚ್.ಡಿ. ಪದವೀಧರರು ಘಟಿಕೋತ್ಸವ ಮೆರವಣಿಗೆಯಲ್ಲಿ ಗಾಂಧೀ ಭವನ ತಲುಪಲಿದ್ದಾರೆ. ನಂತರ ಜರುಗುವ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ವಿಷಯಗಳ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ರ್‍ಯಾಂಕ್‌ ವಿಜೇತರಿಗೆ ಚಿನ್ನದ ಪದಕ ಹಾಗೂ ಪಿಎಚ್‌.ಡಿ. ಪದವೀಧರರಿಗೆ ಪದವಿ ಪ್ರಮಾಣಪತ್ರವನ್ನು ಬಸವರಾಜ ರಾಯರಡ್ಡಿ ನೀಡಲಿದ್ದಾರೆ.

ಪ್ರಸಕ್ತ ಸಾಲಿಗೆ ಸ್ನಾತಕೋತ್ತರ ಶಿಕ್ಷಕ ವಿಭಾಗದಲ್ಲಿ ಒಬ್ಬರು ಮಾತ್ರ ಉತ್ತಮ ಸಂಶೋಧನಾ ಶಿಕ್ಷಕ ಸುವರ್ಣ ಪದಕ ಪಡೆಯಲಿದ್ದಾರೆ. 45 ಪಾರಿತೋಷಕಗಳು, 25 ಶಿಷ್ಯವೇತನ, 54 ರ್‍್ಯಾಂಗ್ಲರ್‌ ಡಿ.ಸಿ.ಪಾವಟೆ ವಜ್ರಮಹೋತ್ಸವ ಆಚರಣಾ ಶೀಷ್ಯವೇತನ, ಪದವಿ ಮತ್ತು ಸ್ನಾತಕೋತ್ತರ ಪದವಿಯ 69 ರ್‍್ಯಾಂಕ್‌ ವಿತರಣೆ ಹಾಗೂ ಒಟ್ಟು ವಿವಿಧ ನಿಖಾಯಗಳ 146 ಪಿಎಚ್‌.ಡಿ. ಪದವೀಧರರು ಪ್ರಮಾಣಪತ್ರ ಪಡೆಯಲಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT