ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ನೀಡಿದ ಅಂಬೇಡ್ಕರ್’

Last Updated 15 ಏಪ್ರಿಲ್ 2017, 8:57 IST
ಅಕ್ಷರ ಗಾತ್ರ

ಹೊಸನಗರ: ‘ತುಳಿತಕ್ಕೆ ಒಳಗಾದ ವರ್ಗಕ್ಕೆ ಸಾಮಾಜಿಕ, ಆರ್ಥಿಕ ನ್ಯಾಯವನ್ನು ಸಂವಿಧಾನಬದ್ಧವಾಗಿ ನೀಡಿದ ಮಹಾನ್ ವ್ಯಕ್ತಿ ಅಂಬೇಡ್ಕರ್‌’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ವೇತಾ ಬಂಡಿ ತಿಳಿಸಿದರು.ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ  ಬಿ.ಆರ್.ಅಂಬೇಡ್ಕರ್‌ ಅವರ 126ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶ ಕಂಡ ಮಹಾನ್ ನಾಯಕರ ಜಯಂತಿ ಆಚರಣೆ ಕೇವಲ ಹೆಸರಿಗೆ  ಎಂಬಂತೆ ಆಗುತ್ತಿದೆ. ಮಕ್ಕಳಿಗೆ ಅವರ ಜೀವನ ಚರಿತ್ರೆ ಜತೆಗೆ   ಸಿದ್ಧಾಂತವನ್ನು ತಿಳಿಸಿಕೊಡುವ ಕಾರ್ಯ ಆಗಬೇಕು’ ಎಂದು ಆಶಿಸಿದರು.

ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪ ಗೌಡ, ಉಪಾಧ್ಯಕ್ಷೆ ಸುಶೀಲಮ್ಮ, ಮುಖ್ಯಾಧಿಕಾರಿ ರಾಮಚಂದ್ರ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ಸಿಪಿಐ ಮಂಜುನಾಥ ಗೌಡ, ಪ್ರಮುಖರಾದ ಶ್ರೀಧರ ಉಡುಪ, ಅಶೋಕ್ ಗುಳ್ಳೇದ್, ಶ್ರೀನಿವಾಸ್ ಕಾಮತ್ ಹಾಜರಿದ್ದರು.

ಶಿಕ್ಷಕ ಸತ್ಯನಾರಾಯಣ್ ಉಪನ್ಯಾಸ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ನಾಗಭೂಷಣ್ ಸ್ವಾಗತಿಸಿದರು. ಫಯಾಜ್ ವಂದಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ಬಿಜೆಪಿ ಸಹ ಭೋಜನ: ಬಿಜೆಪಿ ಘಟಕ ತಾಲ್ಲೂಕು ಸಮೀಪದ ಯಡಚಿಟ್ಟೆ ಎಸ್ಸಿ ಕಾಲೊನಿಯಲ್ಲಿ ಸಹಭೋಜನ  ಏರ್ಪಡಿಸಿತ್ತು.  ಪ್ರಮುಖರಾದ ಸುರೇಶ್ ಸ್ವಾಮಿರಾವ್, ಎ.ವಿ.ಮಲ್ಲಿಕಾರ್ಜುನ್, ಕೆ.ವಿ.ಕೃಷ್ಣಮೂರ್ತಿ, ರಾಮಣ್ಣ, ಸಣ್ಣಕ್ಕಿ ಮಂಜು, ರಮೇಶ್, ಜಯನಗರ ಪ್ರಹ್ಲಾದ್, ಇಟಾಚಿ ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT