ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಣೆ

Last Updated 15 ಏಪ್ರಿಲ್ 2017, 9:40 IST
ಅಕ್ಷರ ಗಾತ್ರ

ಬೀದರ್:  ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ  ಸಡಗರದಿಂದ ಆಚರಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಕಚೇರಿ: ನಗರದ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸಂವಿಧಾನ ರಚಿಸುವ ಮೂಲಕ ಡಾ. ಅಂಬೇಡ್ಕರ್ ಅವರು ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಶೋಷಿತರು, ದೀನ ದಲಿತರು, ಬಡವರು ಸೇರಿದಂತೆ ಸರ್ವ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದಾರೆ ಎಂದು ಹೇಳಿದರು.ಅಂಬೇಡ್ಕರ್  ಇಡೀ ದೇಶದ ಆಸ್ತಿಯಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕಾಜಿ ಅರಶದ್ ಅಲಿ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಜಾಗೀರದಾರ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯೆ ರತ್ನಾ ಕುಶನೂರು, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರೋಹಿದಾಸ ಘೋಡೆ, ಬಿಡಿಎ ಸದಸ್ಯ ಶಾಂತಕುಮಾರ ಮುದಾಳೆ, ಮುಖಂಡರಾದ ಚಂದ್ರಸಿಂಗ್, ಪಂಡಿತರಾವ್ ಚಿದ್ರಿ, ಚಂದ್ರಕಾಂತ ಹಿಪ್ಪಳಗಾಂವ್, ಪ್ರದೀಪ ಕುಶನೂರ ಇದ್ದರು.

ಜೆಡಿಎಸ್ ಕಚೇರಿ: ನಗರದ ಜಾತ್ಯತೀತ ಜನತಾ ದಳದ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನಸೀಮುದ್ದೀನ್ ಪಟೇಲ್, ಪ್ರಮುಖರಾದ ರಾಜಶೇಖರ ಜವಳೆ, ರಮೇಶ ಪಾಟೀಲ್ ಸೋಲಪುರ, ಅಶೋಕ ಕೋಡಗೆ, ಮಹಮ್ಮದ್ ಅಸ್ರಫ್ ಅಲಿ, ದತ್ತಾತ್ರಿ ಧತ್ತೂರೆ , ರಾಜು ಚಿಂತಾಮಣಿ, ಮಾರುತಿ ಬೌದ್ಧೆ, ಮಹಮ್ಮದ್ ಫಾರೂಕ್ ಅಲಿ, ಶಿವಪುತ್ರ ಮಾಳಗೆ, ಸೋಮನಾಥ ಕಂದಗೂಳೆ, ಲಕ್ಷ್ಮಣ ಗಾದಗಿ ಹಾಜರಿದ್ದರು.

ಸಿದ್ಧಾರೂಢ ಪಬ್ಲಿಕ್ ಸ್ಕೂಲ್: ನಗರದ ಚಿದಂಬರ ಶಿಕ್ಷಣ ಸಂಸ್ಥೆ ಸಂಚಾಲಿತ ಸಿದ್ಧಾರೂಢ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಾನಂದ ಅವರು ಡಾ. ಅಂಬೇಡ್ಕರ್ ಅವರ ಕುರಿತು ಉಪನ್ಯಾಸ ನೀಡಿದರು.ಪ್ರಾಚಾರ್ಯ ಮಲ್ಲಿನಾಥ ಮಠಪತಿ, ಶ್ರೀಲತಾ, ಶಿವಶಂಕರ ಪಾಟೀಲ, ಶಿಕ್ಷಕರಾದ ವಿದ್ಯಾಸಾಗರ, ಪ್ರವೀಣ, ಸಾಗರ, ವಿಕಾಸ ಇದ್ದರು.

ತೋಟಗಾರಿಕೆ ಕಾಲೇಜು: ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡೀನ್ ಡಾ. ರವೀಂದ್ರ ಮೂಲಗೆ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಡಾ. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಮೇಲೆ ಬೆಳಕು ಚೆಲ್ಲಿದರು.\ಡಾ. ಮಹಮ್ಮದ್ ಫಾರೂಕ್, ವಿದ್ಯಾರ್ಥಿಗಳ ವಸತಿ ನಿಲಯದ ಪಾಲಕ ಡಾ. ಅಶೋಕ ಸೂರ್ಯವಂಶಿ, ಎನ್‍ಎಸ್‍ಎಸ್ ಘಟಕದ ಸಂಯೋಜಕ ಡಾ. ಎಸ್.ಜಿ. ಪ್ರವೀಣಕುಮಾರ ಉಪಸ್ಥಿತರಿದ್ದರು. ಭೀಮಶಾ ಚೀನಕೇರಿ ನಿರೂಪಿಸಿದರು.

ಆರ್‍ಆರ್‌ಕೆ ಸಮಿತಿ: ಆರ್‍ಆರ್‌ಕೆ ಸಮಿತಿ ಸಂಚಾಲಿತ ನಗರದ ಆರ್.ಆರ್.ಕೆ. ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಕಾಶಿನಾಥರಾವ್ ಬೇಲೂರೆ ಸ್ವತಂತ್ರ ಪದವಿಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಅಂಬೇಡ್ಕರ್ ಅವರು ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ಸಂವಿಧಾನವನ್ನು ರಚಿಸಿದ್ದಾರೆ. ಅವರ ತತ್ವಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಆರ್‍ಆರ್‌ಕೆ ಸಮಿತಿಯ ಅಧ್ಯಕ್ಷ ರಮೇಶಕುಮಾರ ಪಾಂಡೆ ನುಡಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ದೇಶಮುಖ, ಕಾರ್ಯದರ್ಶಿ ಧನರಾಜ ತಾಂಡೂರೆ, ಖಜಾಂಚಿ ಹಣಮಂತರಾವ್ ಬರ್ಗೆ, ಪದವಿ ಕಾಲೇಜು ಪ್ರಾಚಾರ್ಯ ಡಾ. ಬಂಡಯ್ಯಾ ಸ್ವಾಮಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದಿನಕರ ಪಂಚಾಳ ಉಪಸ್ಥಿತರಿದ್ದರು. ಪ್ರಭಾರ ಪ್ರಾಚಾರ್ಯ ಬಂಡೆಪ್ಪ ಬಿರಾದಾರ ನಿರೂಪಿಸಿದರು. ಸಂಗಯ್ಯ ಸ್ವಾಮಿ ವಂದಿಸಿದರು.

ಕಾರ್ಮಿಕರ ಸಂಘ:  ನಗರದ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್‌  ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸ್ವಾಮಿದಾಸ ದೊಡ್ಡೆ, ಉಪಾಧ್ಯಕ್ಷ ಧನರಾಜ ದೊಡ್ಡೆ, ಪ್ರಮುಖರಾದ ಬಾಬುರಾವ್‌ ವೈದ್ಯ, ಶಾಂತಕುಮಾರ ದೊಡ್ಡೆ, ರಾಜಕುಮಾರ ಮಾಳಗೆ, ಸುರೇಶ ನಾವದಗೇರಿ, ದೇವೇಂದ್ರ ಹಲಗೆ, ಶಿವಕುಮಾರ ನಾವದಗೇರಿ, ಅಮರ ಲಾಧಾ, ಪ್ರಕಾಶ ಗುಮ್ಮೆ, ಲಖನ್ ಹಲಗೆ, ಆನಂದ ಖಾನಾಪೂರೆ ಪಾಲ್ಗೊಂಡಿದ್ದರು.

ಬಂಜಾರ ಸಮಾಜ: ಡಾ. ಬಿ.ಆರ್‌. ಅಂಬೇಡ್ಕರ್‌  ಜಯಂತಿ ಆಚರಣೆ ಕಾರ್ಯಕ್ರಮ  ನಗರದ ಜಿಲ್ಲಾ ಬಂಜಾರ ಸಮಾಜ ಭವನದ ಸಮೀಪ ನಡೆಯಿತು. ಎಐಬಿಎಸ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ  ಗೋವರ್ಧ ರಾಠೋಡ, ಸಮಾಜದ ಅಧ್ಯಕ್ಷ ಬಸವರಾಜ ಪವಾರ, ಪ್ರಮುಖರಾದ ಗೋಪಾಲಸಿಂಗ್ ರಾಠೋಡ, ಪ್ರೇಮಸಿಂಗ್ ಪವಾರ, ಪರಶುರಾಮ ಜಾಧವ, ಡಾ. ಪಟವರ್ಧನ್ ರಾಠೋಡ, ಬಳವಂತರಾವ್‌ ರಾಠೋಡ್, ಸಂತೋಷ ನಾಯಕ, ಸುರೇಶ ನಾಯಕ, ಗುರುನಾಥ ರಾಠೋಡ, ವಿಕಾಸ ಪವಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT