ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಮಾನವತಾವಾದಿ ಅಂಬೇಡ್ಕರ್ ಸ್ಮರಣೆ

Last Updated 15 ಏಪ್ರಿಲ್ 2017, 9:52 IST
ಅಕ್ಷರ ಗಾತ್ರ

ಹುಣಸಗಿ: ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ  ಸಡಗರ ಸಂಭ್ರ ಮದಿಂದ ಆಚರಿಸಲಾಯಿತು.ಪಟ್ಟಣದ ಡಾ.ಅಂಬೇಡ್ಕರ್ ವೃತ್ತ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತ ಮುಖಂಡ ಮಲ್ಲಣ್ಣ ಕಟ್ಟಿಮನಿ ಮಾತ ನಾಡಿ, ದೇಶದ ಭದ್ರ ಬುನಾದಿ ಸಂವಿಧಾನ ನೀಡುವ ಮೂಲಕ ಅಂಬೇಡ್ಕರ್‌ ಅವರ ದೂರದೃಷ್ಟಿ ಅತ್ಯಂತ ಮಹತ್ವದ್ದು. ಅವರ ಕೊಡುಗೆಯಿಂದ ದೇಶದಲ್ಲಿನ ದೀನ, ದಲಿತ ಹಿಂದುಳಿದವರು  ಸ್ವಾಭಿ ಮಾನದಿಂದ ಬದುಕುತ್ತಿದ್ದಾರೆ ಎಂದರು.

ದಲಿತ ಮುಖಂಡ ಮರಲಿಂಗಪ್ಪ ನಾಟಿಕಾರ ಮಾತನಾಡಿದರು. ಹಮೀದ್‌ ಸಾಬ ಡೆಕ್ಕನ್‌, ಕನಕಪ್ಪ ಸಿದ್ದಾಪುರ, ಪರಶುರಾಮ ದೇವಾಪುರ ಇದ್ದರು.ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಸ್‌.ಎಂ.ಕಿರಣಗಿ, ಬಿ.ಡಿ.ಮರೋಳ, ಸೋಮಶೇಖರ ಪಂಜಗಲ್, ಎಚ್‌.ಬಿ. ದೇವದುರ್ಗ, ಹೇಮಾವತಿ ಬಂಟನೂರ ಇದ್ದರುಹುಣಸಗಿಯ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮುಖಂಡ ಸಂಗಣ್ಣ ವೈಲಿ ಡಾ.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಎಪಿಎಂಸಿ ಸದಸ್ಯ ದೇವಣ್ಣ ಮಲಗಲ ದಿನ್ನಿ, ಗುರುಲಿಂಗಪ್ಪ ಸಜ್ಜನ್, ಅನಂತ ದೇಶಪಾಂಡೆ ಇದ್ದರು.

ವಜ್ಜಲ : ಗ್ರಾಮದ ಗ್ರಾ.ಪಂ ಕಚೇರಿಯಲ್ಲಿ  ಡಾ.ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಅಭಿವೃದ್ಧಿ ಅಧಿಕಾರಿ ಶಿವಕುಮಾರ ಚೌದ್ರಿ, ಡಾ. ಅಂಬೇಡ್ಕರ್‌ ಅವರ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು.ಮುಖಂಡರಾದ ಸಂಗನಗೌಡ ಪಾಟೀಲ, ಕಿಷನ್‌ರಾವ ಕುಲಕರ್ಣಿ, ಶರಣಗೌಡ ಪಾಟೀಲ, ಮಲ್ಲನಗೌಡ ಅಮಲಿಹಾಳ , ಚಂದ್ರಶೇಖರ ಬೋರ ಮಗುಂಡ, ಸಂತೋಷ ಹುಂಡೇಕಾರ, ಕರೆಪ್ಪ ದೊಡ್ಡಮನಿ, ಸಂಗಮೇಶ ಸಾಲ ವಾಡಗಿ, ಮಲ್ಲಿಕಾರ್ಜುನ ದೊಡ್ಡಮನಿ ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT