ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಕಲೆಗೆ ಪುನಶ್ಚೇತನ ಅಗತ್ಯ: ಹಳ್ಳೂರ

Last Updated 15 ಏಪ್ರಿಲ್ 2017, 10:02 IST
ಅಕ್ಷರ ಗಾತ್ರ

ಹನುಮಸಾಗರ:  ನಶಿಸಿ ಹೋಗುತ್ತಿರುವ ಜನಪದ ಕಲೆಗೆ ಪುನಶ್ಚೇತನ ನೀಡುವುದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಮುಖಂಡ ಬಸವರಾಜ ಹಳ್ಳೂರ ಹೇಳಿದರು.

ಗುರುವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್‌ ಸಾಂಸ್ಕೃತಿಕ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ 2016–17ನೇ ಸಾಲಿನ ಪರಿಶಿಷ್ಟ ಜಾತಿ ಸಂಘ ಸಂಸ್ಥೆಗಳ ಧನಸಹಾಯ ಯೋಜನೆ ಅಡಿ ಹಮ್ಮಿಕೊಳ್ಳಲಾಗಿದ್ದ ಜನಪದ ಸಂಭ್ರಮ ಹಾಗೂ ನಗೆ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಕಲಾವಿದರು ಸಿಕ್ಕ ಅವಕಾಶಗಳನ್ನು ಬಳಕೆ ಮಾಡಿಕೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬೇಕು ಎಂದರು.ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ ಮಾತನಾಡಿ, ಹನು ಮಸಾಗರ ಸಾಂಸ್ಕೃತಿಕ ನಗರಿಯಾಗಿದ್ದು, ಪ್ರತಿನಿತ್ಯ ಒಂದಿಲ್ಲೊಂದು ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿರುವುದು ಸಾಕ್ಷೀಕರಿಸುತ್ತವೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡುತ್ತಿರುವುದು ಪ್ರಶಂಸನಾರ್ಹ ಎಂದರು.

ಜನಪದ ಮತ್ತು ಹಾಸ್ಯ ಕಲಾವಿದ ಜೀವನಸಾಬ ಬಿನ್ನಾಳ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ, ಮೊಬೈಲ್ ಹಾವಳಿಯಿಂದ ಜನಪದ ಕಲೆ ದೂರವಾಗುತ್ತಿದೆ. ಜನಪದ ಸಾಹಿತ್ಯವನ್ನು ಇಂಥ ವೇದಿಕೆಗಳ ಮೂಲಕ ಉಳಿಸಿ ಬೆಳೆಸುವುದು ಅವಶ್ಯವಾಗಿದೆ. ಜನಪದ ಕಲೆ ಅನಾದಿ ಕಾಲದಿಂದಲೂ ಬಂದಿದ್ದು, ಬಾಯಿ ಯಿಂದ ಬಾಯಿಗೆ ಹರಡಿದ ಸಾಹಿತ್ಯ ವಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಶಕೀಲಾ ಆಸೀಫ್ ಡಾಲಾಯತ್ ತಮಟೆ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಭಗತ್ ಸಿಂಗ್ ಯುವಕ ಮಂಡಳಿಯ ಅಧ್ಯಕ್ಷ ಬಸವರಾಜ ಅಪ್ಪಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಮೋಚಿ ಸಮು ದಾಯದ ಅಧ್ಯಕ್ಷ ಶರಣಪ್ಪ ಹುಲ್ಲೂರ, ಅಂಬೇಡ್ಕರ್ ಸಂಸ್ಥೆಯ ಚನ್ನಪ್ಪ ಬಾವಿಮನಿ, ಶ್ರೀನಿವಾಸ ಜಹಗೀರದಾರ, ರವೀಂದ್ರ ಬಾಕಳೆ, ಮಂಜುನಾಥ ಗುಳೇದಗುಡ್ಡ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪುತ್ರಪ್ಪ ಕೋಳೂರ, ರಿಯಾಜ್ ಖಾಜಿ, ಪ್ರಶಾಂತ ಕುಲಕರ್ಣಿ, ಮಂಜುನಾಥ ಹುಲ್ಲೂರ, ವೀರೇಶ ಕಟಗಿ, ಯಮನೂರಪ್ಪ ಬಡಿಗೇರ, ಮೀನಾಕ್ಷಿ ಜೋಷಿ, ಶಿವಾಜಿ, ಬುಡ ನಸಾ ಬ ಗೌಡರ, ಮಲ್ಲನಗೌಡ ಅಗಸಿ ಮುಂದಿನ, ಸಿದ್ದಪ್ಪ ಕಲಾಲಬಂಡಿ ಇದ್ದರು.

ಜೀವನಸಾಬ ಬಿನ್ನಾಳ ಜನಪದದಲ್ಲಿ ಹಾಸ್ಯ, ಮೀನಾಕ್ಷಿ ಜೋಶಿ ಸಂಗಡಿಗರು ಬೀಸುವ ಕಲ್ಲಿನ ಪದಗಳು, ದಾವಲಸಾಬ ಅತ್ತಾರ ಗೀಗಿ ಪದ, ರಾಮಣ್ಣ ಚೌಡ್ಕಿ ಅವರು ಚೌಡ್ಕಿ ಪದಗಳನ್ನು, ಮಲ್ಲನಗೌಡ ಅಗಸಿಮುಂದಿನ ಜನಪದ ಗೀತೆಗಳನ್ನು, ಡಿ.ಹನುಮಂತಕುಮಾರ ಸುಗಮ ಸಂಗೀತ, ಬಸವರಾಜ ಉಪ್ಪಲದಿನ್ನಿ ತತ್ವಪದ, ಅಯ್ಯಪ್ಪ ಬಡಿಗೇರ ತಬಲಾ ಸೋಲೊ, ಐ.ಡಿ.ಬಾಬು ರಂಗಗೀತೆ, ಬಸವರಾಜ ಗಂಗನಾಳ ದೊಡ್ಡಾಟ ಪದ, ಬಾಲನಗೌಡ ಹಾದಿಮನಿ ಸಣ್ಣಾಟದ ಪದ, ದೇವೇಂದ್ರಪ್ಪ ಪತ್ತಾರ ವಚನ ಗಾಯನ, ಹನುಮವ್ವ ಮಾದರ ಸಂಪ್ರ ದಾಯ ಪದ, ಬಸವರಾಜ ಉಚನೂರ ತತ್ವಪದ, ಮರಿಸ್ವಾಮಿ ಮದಲಗಟ್ಟಿ ಜಾನಪದ, ಅನ್ನದಾನೇಶ್ವರ ಸಂಘ ಬೀಳಗಿ ಕರಡಿ ಮಜಲು, ಚಂದಾ ಲಿಂಗೇಶ್ವರ ಸಂಘ ಭಜನಾ ಪದ, ಹುಲಿಗೆ ಮ್ಮ ದೇವಿ ಸಂಸ್ಥೆ ಹೆಜ್ಜೆ ಕುಣಿತ, ವೆಂಕಟೇಶ ಭಾವಗೀತೆ, ಗುರಪ್ಪ ಉಪ ನಾಳ ಭಜನೆ ಪದಗಳನ್ನು ಪ್ರಸ್ತುತ ಪಡಿಸಿದರು. ವೀರೇಶ ಸ್ವಾಗತಿಸಿದರು. ಹುಲಗಪ್ಪ ಕೊಪ್ಪಳ ಕಾರ್ಯಕ್ರಮ ನಿರೂಪಿಸಿ, ರವೀಂದ್ರ ಬಾಕಳೆ ಪ್ರಾಸ್ತಾವಿ ಕವಾಗಿ ಮಾತನಾಡಿದರು. ಮಂಜುನಾಥ ಗುಳೇದಗುಡ್ಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT