ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್‌ ದಾರಿಯಲ್ಲಿ ನಡೆದರೆ ಸಾರ್ಥಕ’

Last Updated 15 ಏಪ್ರಿಲ್ 2017, 10:19 IST
ಅಕ್ಷರ ಗಾತ್ರ

ವಾಡಿ: ಪಟ್ಟಣದ ಪುರಸಭೆ ಸೇರಿದಂತೆ ಹಲವೆಡೆ ಶುಕ್ರವಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 126ನೇ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ಪುರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಶಂಕರ ಡಿ. ಕಾಳೆ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸನ್ನತಿ ಪ್ರಾಧಿಕಾರದ ಸದಸ್ಯ ಟೋಪಣ್ಣ ಕೋಮಟೆ ಮಾತನಾಡಿದರು. ಕಾಶಿನಾಥ ಧನ್ನಿ, ವಾಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹೇಮೂದ ಸಾಹೇಬ್, ವಾಡಿ-ಶಹಾಬಾದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ, ನೂತನ ಪುರಸಭೆ ಸದಸ್ಯ ದೇವಿಂದ್ರಪ್ಪ ಕರದಳ್ಳಿ ಮಾತನಾಡಿದರು.

ಪುರಸಭೆ ಸದಸ್ಯರಾದ ಮರೆಪ್ಪ ಬಸಣ್ಣ, ಶೋಭಾ ಗೋವಿಂದ, ಪ್ರಕಾಶ ನಾಯಕ, ಮೊಹ್ಮದ ಗೌಸ್, ಸುಗಂಧಾ ಜೈಗಂಗಾ, ಪೃಥ್ವಿರಾಜ ಸೂರ್ಯವಂಶಿ, ವಿಶಾಲ ನಂದೂರಕರ್, ಮಲ್ಲಯ್ಯ ಗುತ್ತೇದಾರ, ಭೀಮಶಾ ಜಿರೋಳ್ಳಿ, ರಾಜೇಶ ಅಗರವಾಲ್, ಸುಶೀಲಾಬಾಯಿ ಮೌಸಲಗಿ, ಗುಜ್ಜಾಬಾಯಿ ಸಿಂಗೆ, ಗಂಗಾ ರಾಠೋಡ, ಭೀಮರಾಯ ದೊರಿ, ಜೈನಾಬಾಯಿ ಸೋಮ, ಶರಣು ನಾಟೇಕರ್, ತಿಮ್ಮಯ್ಯ ಪವಾರ ಇದ್ದರು.

ಕಾಂಗ್ರೆಸ್ ಕಚೇರಿ:  ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟೋಪಣ್ಣ ಕೋಮಟೆ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಮೂದ್ ಸಾಹೇಬ್, ವಾಡಿ-ಶಹಾಬಾದ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಸೇನ ಮೇನಗಾರ ಇದ್ದರು.

ಲಾಡ್ಲಾಪುರ ಗಾ.ಪಂ: ಗ್ರಾ.ಪಂ ಅಧ್ಯಕ್ಷ ಸಾಬಣ್ಣ ಆನೇಮಿ ಅವರು ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಮಾಜಿ ಅಧ್ಯಕ್ಷ ಈರಣ್ಣಾ ಮಲಕಂಡಿ, ಪಿಡಿಒ ಸಿದ್ದರಾಮ ಚಿಂಚೋಳಿ, ಸಾಬಣ್ಣ ಗನಿಮನಿ, ಸುಕ್ಕಪ್ಪ ಮಾರ್ಕಪ್ಪ, ಸಾಬಣ್ಣ ಓಚರ್, ಸಾಬಣ್ಣ ಗೊಡಗ್, ಸಾಬಣ್ಣ ಹಳ್ಳಿ, ಆಶಪ್ಪಾ ಬಜಂತ್ರಿ, ಸಿಬ್ಬಂದಿ ಸಂಗೀತಾ ಕಚಾಪೂರ, ರಾಜು ಗುತ್ತೇದಾರ, ಮಲ್ಲು ತರನಳ್ಳಿ, ಸಾಬಣ್ಣ ಇದ್ದರು.

ಕಾಳಗಿ ವರದಿ: ಶೋಷಿತ, ಹಿಂದುಳಿದ ಮತ್ತು ಎಸ್‌ಸಿ, ಎಸ್‌ಟಿ ಜನಾಂಗದವರು ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ನಡೆದುಬಂದ ದಾರಿಯಲ್ಲಿ ಸಾಗಿದರೆ ಅಂಬೇಡ್ಕರರ ಜಯಂತ್ಯುತ್ಸವ ಆಚರಣೆ ಸಾರ್ಥಕವಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ನಿಂಬೆಣ್ಣಪ್ಪ ಕೋರವಾರ ಹೇಳಿದರು.ಕಣಸೂರ ಗ್ರಾಮದಲ್ಲಿ ಶುಕ್ರವಾರ ಸಿದ್ಧಾರ್ಥ ಯುವಕ ಸಂಘ ಏರ್ಪಡಿಸಿದ್ದ ಅಂಬೇಡ್ಕರ್‌ 126ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಕಾಳಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುಭಾಷ ಶೀಲವಂತ,ಮುಖಂಡ ಶಿವರಾಯ ದೊಡ್ಡಮನಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಮರಾವ ಸಜ್ಜನ, ಮಾತನಾಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಪಾಟೀಲ, ತರುಣ ಸಂಘದ ಅಧ್ಯಕ್ಷ ಸುಭಾಷ ಸಜ್ಜನ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇವಣಸಿದ್ದಪ್ಪ ಕಲಶೆಟ್ಟಿ, ಸದಸ್ಯ ಜಗನ್ನಾಥ ಚಂದನಕೇರಿ ಇದ್ದರು.

ಆಳಂದ ವರದಿ: ದೇಶದ ಬಹುಸಂಖ್ಯಾತ ಸಮುದಾಯದ ಪ್ರಗತಿ ಕಾರಣವಾದ ಸಂವಿಧಾನಬದ್ಧವಾದ ಮೀಸಲಾತಿ ತೆಗೆದುಹಾಕುವ ಹುನ್ನಾರವು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆದಿದೆ. ಇದರ ವಿರುದ್ಧ ಹೋರಾಡಲು ದಲಿತರು, ಹಿಂದುಳಿದವರು ಸಂಘಟಿತರಾಗಬೇಕು ಎಂದು ಶಾಸಕ ಬಿ.ಆರ್.ಪಾಟೀಲ ಹೇಳಿದರು.
ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಅಂಬೇಡ್ಕರ್ ಜಯಂತಿ ಆಚರಣೆ ಜೊತೆ ವಿಚಾರಗಳ ಅನುಸರಣೆ ಮಹತ್ವ ನೀಡಬೇಕು ಎಂದರು.ಭಾಲ್ಕಿಯ ನೌಪಾಲ ಭಂತೇಜಿ ಮಾತನಾಡಿದರು. ಉಪನ್ಯಾಸಕ ರವೀಂದ್ರ ಸೂಂಟನೂರು, ಕೆನರಾ ಬ್ಯಾಂಕ್‌ ಪ್ರಬಂಧಕ ಶಿವಮೂರ್ತಿ ಕೆ.ಎಸ್., ಡಾ.ಅಂಬೇಡ್ಕರ್ ಹೋರಾಟ ಮತ್ತು ಸಂವಿಧಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಪಿ.ಆರ್.ಪಿ ರಾಜ್ಯಾಧ್ಯಕ್ಷ ಪ್ರಕಾಶ ಮೂಲಭಾರತಿ, ತಹಶೀಲ್ದಾರ್ ಬಸವರಾಜ ಮಾತನಾಡಿದರು.ಪುರಸಭೆ ಉಪಾಧ್ಯಕ್ಷ ಅಸಗರ್‌ ಅಲಿ ಹವಾಲ್ದಾರ್, ಸದಸ್ಯೆ ಲಕ್ಷ್ಮಿಬಾಯಿ ಸಾಲೇಗಾಂವ, ಸುನೀಲ ಹಿರೋಳ್ಳಿ, ಮುಖಂಡ ದಯಾನಂದ ಶೇರಿಕಾರ, ದತ್ತಪ್ಪ ಅಟ್ಟೂರು, ಪಾಂಡುರಂಗ ಮೊದಲೆ, ಬಾಬುರಾವ ಅರುಣೋದಯ, ಆನಂದ ಗಾಯಕವಾಡ ಇದ್ದರು.

ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ 6 ಜನ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಉಚಿತ ಲ್ಯಾಪ್‌ಟ್ಯಾಪ್‌ ವಿತರಣೆ, ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 25 ಸಾವಿರ ಪ್ರೋತ್ಸಾಹಧನ ಚೆಕ್, ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರಿಗೆ ಕಲಿಕೋಪಕರಣಗಳ ವಿತರಣೆ ಮಾಡಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ಜರುಗಿತು.

ಈ ಮೊದಲು ತಹಶೀಲ್ದಾರ್ ಕಚೇರಿಯಲ್ಲಿ ಶಾಸಕ ಬಿ.ಆರ್.ಪಾಟೀಲ ಡಾ.ಅಂಬೇಡ್ಕರ್ ಭಾವಚಿತ್ರದ ಪೂಜೆ, ನೀಲಿಧ್ಜಜಾರೋಹಣ ನೆರವೇರಿಸಿದರು. ತಾಪಂ ಅಧ್ಯಕ್ಷೆ ನಾಗಮ್ಮ ಗುತ್ತೇದಾರ, ಉಪಾಧ್ಯಕ್ಷ ಗುರು ಪಾಟೀಲ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ಪುರಸಭೆ ಅಧ್ಯಕ್ಷ ಅಂಬಾದಾಸ ಪವಾರ, ಉಪಾಧ್ಯಕ್ಷ ಅಜಗರಲಿ ಹವಾಲ್ದಾರ್, ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ ಇದ್ದರು.

ಬಿಜೆಪಿ ಕಚೇರಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಮಾಜಿ ಶಾಸಕ ಸುಭಾಷ ಗುತ್ತೇದಾರ, ಮಲ್ಲಿಕಾರ್ಜುನ ಕಂದಗೂಳೆ, ಮಹೇಶ ಗೌಳಿ, ಮಹೇಶ ಹಿರೋಳ್ಳಿ,ಅಶೋಕ ಗುತ್ತೇದಾರ, ಸುನೀಲ ನಿಪ್ಪಾಣಿ, ಸಂಜಯ ಮಿಸ್ಕಿನ್, ಚನ್ನವೀರ ಕಾಳಕಿಂಗೆ, ಮಲ್ಲಿಕಾರ್ಜುನ ಸಾವಳಗಿ ಇದ್ದರು.

ಕಮಲಾಪುರ ವರದಿ: ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಶುಕ್ರವಾರ ಪಟ್ಟಣದ ವಿವಿಧೆಡೆ ಅಂಬೇಡ್ಕರ್‌ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ನಿವೃತ್ತ ಶಿಕ್ಷಕ ಪುಂಡಲೀಕ ರಾವ ಚಿರಡೆ ಮಾತನಾಡಿದರು.
ಸಮಾಜವಾದಿ ಪಕ್ಷದ ಎಸ್‌ಎಸಿ, ಎಸ್‌ಟಿ ಜಿಲ್ಲಾ ಘಟಕದ ಅಧ್ಯಕ್ಷ ಅಮೃತಗೌರೆ, ಸಿಬ್ಬಂದಿ ಮಂಜುನಾಥ ಬಿರಾದಾರ, ಅವಿನಾಶ ಮುದ್ದನಕರ್‌, ಶಿವಾನಂದ, ಶಿವಲಿಂಗ, ಗೀತಾ ಶೆಟ್ಟಿ, ಸಾವಿತ್ರಿ, ಹಣಮಂತ ಧಮ್ಮೂರ, ಮಹೇಶ ಪಾಟೀಲ, ವಿಜಯಕುಮಾರ ನೇಳಗಿ, ತುಕಾರಾಮ ಇದ್ದರು.

ಪದವಿ ಕಾಲೇಜು: ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯ ಶಿವಪುತ್ರಪ್ಪ ಬೆಡಜುರ್ಗಿ ಅಂಬೇಡ್ಕರ್‌ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪನ್ಯಾಸಕ ರಾಜಶೇಖರ ಓಕಳಿ, ನಾಗಪ್ಪ ಚನ್ನಕ್ಕಿ, ಶಾಂತಾ ಅಷ್ಟಿಗೆ, ಅಮೃತಾ ಕಟಕೆ, ಸವೀತಾ ಪಾಟೀಲ ಇದ್ದರು.

ಅಫಜಲಪುರ ವರದಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಕಳೆದ 4 ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ₹84 ಸಾವಿರ ಕೋಟಿ ನಿಗದಿ ಮಾಡಿ, ಈಗಾಗಲೇ ₹50 ಸಾವಿರ ಕೋಟಿ ಖರ್ಚು ಮಾಡಿದೆ ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ ತಿಳಿಸಿದರು.

ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಮತ್ತು ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ 126ನೇ ಜಯಂತಿ ನಿಮಿತ್ತವಾಗಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಮಂಜೂರಾದ ಲ್ಯಾಪ್‌ಟಾಪ್‌ಗಳನ್ನು ವಿತರಿಸಿ ಮಾತನಾಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಮೇಶ ಲಂಡನ್‌ಕರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅರುಣಕುಮಾರ ಎಂ. ಪಾಟೀಲ, ರತ್ನವ್ವ ಭೀರಣ್ಣ ಆರ್. ಕಲ್ಲೂರ ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಬಸವರಾಜ ಚಾಂದಕೋಟೆ  ಮಾತನಾಡಿದರು.

ಚಿಂತಕರಾದ ನಾಗೇಶ ಕೊಳ್ಳಿ, ಸಿದ್ಧಾರ್ಥ ಬಸರಿಗಿಡದ, ಸಿದ್ದು ದಿಕ್ಸಂಗಿ, ಎ.ಬಿ.ಪಟೇಲ ಸೊನ್ನ, ರಾಜು ಆರೇಕರ, ಮಹಾಲಿಂಗ ಅಂಗಡಿ, ಮಹಾಂತೇಶ ಬಡದಾಳ ಅವರನ್ನು ಸನ್ಮಾನಿಸ ಲಾಯಿತು.ಪುರಸಭೆ ಅಧ್ಯಕ್ಷ ಶರಣು ಗುಡ್ಡೊ ಡಗಿ, ತಾ.ಪಂ ಅಧ್ಯಕ್ಷೆ ರುಕ್ಮಿಣಿ ಜಮಾ ದಾರ, ಪರಮೇಶ್ವರ ಪಂಚನಕರ, ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ, ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೇವೂರ, ಜಿ.ಪಂ. ಮಾಜಿ ಸದಸ್ಯ ಮತೀನ ಪಟೇಲ, ಪ್ರಕಾಶ ಜಮಾದಾರ, ನಾಗಪ್ಪ ಆರೇಕರ, ಪುರಸಭೆ ಸದಸ್ಯ ಪಾಷಾ ಮಣೂರ,  ಸಮಾಜ ಕಲ್ಯಾಣ ಅಧಿಕಾರಿ ಎಲ್‌.ಬಿ. ಕುಲಕರ್ಣಿ, ಬಿಸಿಎಂ ಅಧಿಕಾರಿ ಎಸ್‌.ಎಂ.ಗಿಣ್ಣಿ, , ತಾ.ಪಂ ಇಒ ಮಹಾದೇವ ಪಾಟೀಲ, ಕ್ಷೇತ್ರ ಶಿಕ್ಷಣಾ ಧಿಕಾರಿ ಚಿತ್ರಶೇಖರ ದೇಗಲಮಡಿ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಕೆ.ಎಂ.ಕೋಟೆ, ಸಿದ್ದು ಆರೇಕರ, ದಯಾನಂದ ದೊಡ್ಡಮನಿ, ಚಂದು ಹೊಸಮನಿ, ಮಹೇಶ ಸೂಲೆಕರ, ಶರಣಬಸು ಹೊಸಮನಿ, ಸಿದ್ದು ಗೌರಮುಖಂಡರಾದ ಮಹಾಂತೇಶ ಬಡದಾಳ ಹನುಮಂತ ಕೋರವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT