ಮೊದಲ ಓದು

ಬದುಕಿಗೆ ಬಂದ ತಿರುವು ಲೇ: ಪ್ರಧಾನ ಸಂ: ದೇಜಗೌ, ಸಿ.ಪಿಕೆ. ಸಂ: ತಿಪ್ಪೇಸ್ವಾಮಿ ಪ್ರಕಾಶನ: ಮಹಿಮಾ ಪ್ರಕಾಶನ, ನಂ. 1393/2 ಸಿ.ಎಚ್‌. 31, 6ನೇ ಅಡ್ಡ ರಸ್ತೆ, ಕೃಷ್ಣಮೂರ್ತಿಪುರಂ, ಮೈಸೂರು – 570 004

ಪುಟ: 376 ಬೆ: ₹ 300

ಮನುಷ್ಯನ ಬದುಕು ಹಲವು ತಿರುವುಗಳಿಂದ ಕೂಡಿರುತ್ತದೆ. ತಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆಯನ್ನು ತಂದ ತಿರುವಿನ ಬಗ್ಗೆ 71 ಜನರು ಇಲ್ಲಿ ಬರೆದಿದ್ದಾರೆ. ಅವರು ಸಮಾಜದ ವಿವಿಧ ವಲಯಗಳಿಗೆ ಸೇರಿದವರು. ಸಾಹಿತಿ, ಪತ್ರಕರ್ತ, ವಕೀಲ, ವೈದ್ಯ, ನೃತ್ಯಕಲಾವಿದೆ, ರಾಜಕಾರಣಿ, ನಟ, ಅಧ್ಯಾಪಕ, ಮತ್ತು ವಿಜ್ಞಾನಿಗಳು ಇಲ್ಲಿ ಬರೆದಿದ್ದಾರೆ. ದೇ. ಜವರೇಗೌಡ, ದೇವನೂರ ಮಹಾದೇವ, ಎಚ್‌.ಎಸ್‌. ವೆಂಕಟೇಶ ಮೂರ್ತಿ, ಅರವಿಂದ ಮಾಲಗತ್ತಿ, ಟಿ.ಆರ್‌. ಅನಂತರಾಮು ಅವರು ಸೇರಿದಂತೆ ಇಲ್ಲಿ ಬರೆದಿರುವವರಲ್ಲಿ ಲೇಖಕರ ಸಂಖ್ಯೆಯೇ ಹೆಚ್ಚಿದೆ.

ಇಲ್ಲಿನ ಲೇಖಕರು ತಮ್ಮ ಪ್ರತಿಭೆ ಮತ್ತು ಶ್ರಮದಿಂದ ಸಮಾಜದಲ್ಲಿ ಗುರುತಿಸಿಕೊಂಡವರು. ಅವರು ತಮ್ಮ ಬದುಕು ಹೊರಳುವಂತೆ ಮಾಡಿದ ಸಂಗತಿಗಳನ್ನು ಅತ್ಯಂತ ಸರಳವಾಗಿ, ಸಂಕ್ಷಿಪ್ತವಾಗಿ ದಾಖಲಿಸಿದ್ದಾರೆ. ಅನೇಕ ಬರಹಗಳು ಪುಟ್ಟದಾಗಿವೆ, ಓದುಗರಿಗೆ ಪ್ರೇರಣೆ ನೀಡುವಂತಿವೆ. ಈ ಬರಹಗಳಲ್ಲಿ ಬರೆದವರ ವ್ಯಕ್ತಿತ್ವ ಮತ್ತು ಅವರ ಬದುಕಿನ ಹೊರಳು ದಾರಿಯೂ ಅನಾವರಣಗೊಂಡಿದೆ. ಯಾರ ಬದುಕೂ ಯಾರಿಗೂ ಮಾದರಿಯಲ್ಲ. ಆದರೆ, ಈ ಚೇತೋಹಾರಿ ಬರಹಗಳು ಒಂದೇ ಕಡೆ ಹಲವರ ಬದುಕಿನ ದರ್ಶನ ಮಾಡಿಸುವುದರಿಂದ ಮಹತ್ವದ್ದಾಗಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

ವಿಮರ್ಶೆ
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

28 May, 2017
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

ವಿಮರ್ಶೆ
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

28 May, 2017
ಮೊದಲ ಓದು

ನಾಡು ನುಡಿ ಸಂಗಮ ಲೇ
ಮೊದಲ ಓದು

28 May, 2017
ಮೊದಲ ಓದು

ನಗೆ, ಬಗೆ ಬಗೆ ಲೇ
ಮೊದಲ ಓದು

28 May, 2017
ಮೊದಲ ಓದು

ಸಿರಿಬೆಳಕು ಲೇ
ಮೊದಲ ಓದು

28 May, 2017