ತುಮಕೂರು: ಸಿದ್ದಗಂಗಾ ತಾಂತ್ರಿಕ ಕಾಲೇಜಿನ ಮೈದಾನದಲ್ಲಿ ಎರಡು ದಿನ ನಡೆದ ವಿದ್ಯಾರ್ಥಿಗಳು ತಯಾರಿಸಿದ ವಿಮಾನ ಮಾದರಿಗಳ ಪ್ರದರ್ಶನಕ್ಕೆ ಶನಿವಾರ ತೆರೆ ಬಿದ್ದಿತು.ರೆಗ್ಯೂಲರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮುಂಬೈ ವಿವಾ ತಾಂತ್ರಿಕ ಕಾಲೇಜು ತಂಡಕ್ಕೆ ಪ್ರಶಸ್ತಿಯೊಂದಿಗೆ ಬಹುಮಾನದ ಮೊತ್ತ ₹ 50 ಸಾವಿರವನ್ನು ಬೆಂಗಳೂರಿನ ಎ.ಎಸ್.ಎಂ.ಟೆಕ್ನಾಲಜಿಯ ಮುಖ್ಯಸ್ಥ ಲಕ್ಷ್ಮಿನಾರಾಯಣ್ ವಿತರಿಸಿದರು.
ದ್ವಿತೀಯ ಸ್ಥಾನ ಪಡೆದ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿಗೆ ₹ 25 ಸಾವಿರ, ತೃತೀಯ ಸ್ಥಾನ ಪಡೆದ ಪುಣೆಯ ವಿಶ್ವಕರ್ಮ ತಾಂತ್ರಿಕ ವಿದ್ಯಾಲಯಕ್ಕೆ ₹ 10 ಸಾವಿರ ಬಹುಮಾನ ನೀಡಲಾಯಿತು. ಮೈಕ್ರೊ ಎಲೆಕ್ಟ್ರಿಕ್ ಮೋಟಾರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಪಿಇಎಸ್ಐಟಿ ತಾಂತ್ರಿಕ ಕಾಲೇಜಿಗೆ ಬೆಂಗಳೂರಿನ ಬೋಯಿಂಗ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಾಲಾ ಭಾರದ್ವಾಜ್ ಅವರು ಪ್ರಶಸ್ತಿಯೊಂದಿಗೆ ಬಹುಮಾನದ ಮೊತ್ತ ₹ 50 ಸಾವಿರ ನೀಡಿದರು.
ದ್ವಿತೀಯ ಸ್ಥಾನ ಪಡೆದ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯ ತಂಡಕ್ಕೆ ₹ 25 ಸಾವಿರ, ತೃತೀಯ ಸ್ಥಾನ ಪಡೆದ ಭೂಪಾಲ್‌ನ ಟೆಕ್ನೋ ತಾಂತ್ರಿಕ ಕಾಲೇಜಿಗೆ ಬಹುಮಾನದ ಮೊತ್ತ ₹ 10 ಸಾವಿರ ವಿತರಿಸಲಾಯಿತು.‘ಮನೋವೇಗಂ’ ಸಂಚಾಲಕ ದಾಮೋದರನ್ ಸುಬ್ರಹ್ಮಣ್ಯ ಮಾತನಾಡಿ, ‘ ಗೆಲುವಿನ ತಂಡಕ್ಕೆ ಉಚಿತವಾಗಿ ಏರೋ ಮಾಡೆಲಿಂಗ್ ತರಬೇತಿ ನೀಡಲಾಗುವುದು’ ಎಂದು ಹೇಳಿದರು.
ಬೆಂಗಳೂರಿನ ಎಸ್ಎಇ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜೆ.ಮುನಿರತ್ನಂ, ಡಾ.ಬಾಲ ಭಾರದ್ವಾಜ್, ಲಕ್ಷ್ಮಿನಾರಾಯಣ, ಎಸ್‌ಐಟಿಕಾಲೇಜಿನ ನಿರ್ದೇಶಕ ಎಂ.ಎನ್.ಚನ್ನಬಸಪ್ಪ, ಸಂಯೋಜಕ ಸತ್ಯಕಾಂತ್ ಇದ್ದರು.