ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೆ ಬಯಸದ ವಿಶಿಷ್ಟ ಶ್ವೇತ ಜೇಡ

Last Updated 16 ಏಪ್ರಿಲ್ 2017, 6:33 IST
ಅಕ್ಷರ ಗಾತ್ರ

ಯಳಂದೂರು: ತೆಲಮೋನಿಯಾ ಡಿಮಿಡಿಯೇಟ   ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಕೀಟ ಸಣ್ಣ ಪ್ರಭೇದದ ಜೇಡ.ಸಣ್ಣ ಗಾತ್ರದ, ಭಯ ಬಿಂಬಿಸುವ ಪುಟ್ಟ ಮುಖದ, ಎಲೆಗಳ ಮೇಲೆ ನೆಗೆದು ಓಡುವ, ಬಲೆ ಬಯಸದ ಶ್ವೇತ ವರ್ಣದ ವಿಶಿಷ್ಟ ಜೀವಿ.ಚಿಕ್ಕದಾದ ಇದು ನಾಲ್ಕು ಕಾಲು ಗಳನ್ನು ಅಗಲಿಸಿ ಮೇಲೆದ್ದಾಗ ಏಡಿಯಂತೆ ಕಾಣಿಸುತ್ತದೆ. ಇದು ಇದರ ಮೇಲ್ನೋಟದ ಚಿತ್ರಣ.

ಹೌದು. ಇದು ಬಿಳಿಗಿರಿರಂಗನ ಬೆಟ್ಟದ ದಟ್ಟ ಕಾಡಿನಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕ ಇದು, ಹಾಗೆ ಸಮೀಪಕ್ಕೆ ಹೋದಾಗ ಕುತ್ತಿಗೆ ಸುತ್ತಿಸುತ್ತಾ ದಟ್ಟ ಹಸಿರೆಲೆಯ ಮೇಲೆ ಇರುವೆಯಂತೆ ಸಾಗುತ್ತದೆ.ಸಾಲ್ಟಿಸಿಡೆ ಕುಟುಂಬಕ್ಕೆ ಸೇರಿದ ಇದು ವೈಜ್ಞಾನಿಕವಾಗಿ ‘ತೆಲಮೋನಿಯಾ ಡಿಮಿ ಡಿಯೇಟ’ (telamonia dimidiata) ಕುಟುಂಬಕ್ಕೆ ಸೇರಿದೆ. 
ಇವು ಕತ್ತನ್ನು 360 ಡಿಗ್ರಿ ಕೋನದಲ್ಲಿ ಸುತ್ತಿಸಬಲ್ಲವು. ಸುಮಾರು 15 ಗ್ರಾಂ ತೂಕದ ಇದಕ್ಕೆ ‘ಟೂ ಟ್ರಿಪ್ಪಡ್‌ ಜಂಪರ್’ ಅಭಿದಾನವೂ ಲಭಿಸಿದೆ. ತೆಳು ಹಳದಿ ಹಾಗೂ ಬಿಳಿ ಬಣ್ಣದ ಹೆಣ್ಣು 9.1ಮಿ. ಮೀ. ಇದ್ದು ಕಣ್ಣಿನ ಸುತ್ತಲ್ಲೂ ಕೆಂಪು ವರ್ಣದ ಉಂಗುರಾ ಕೃತಿ ಹೊಂದಿದೆ.

ಗಂಡು ಜೇಡ 8.9 ಮಿ.ಮೀಟರ್‌ ಉದ್ದವಿದ್ದು, ದೇಹ ಕಪ್ಪಾಗಿದೆ. ನಡುವೆ ಬಿಳಿ ಗೆರೆ ಹೊಂದಿದೆ. ನಯನದ ಸುತ್ತ ಸೂಕ್ಷ್ಮ ಕೆಂಬಣ್ಣದ ರೋಮರಾಶಿ ಆವರಿಸಿದೆ. ಮುಖದ ತುಂಬ ಕಾಫಿ ಬಣ್ಣದ ಬಿಂದು ಕಾಣುತ್ತದೆ. ಇದು ವಿಷ ರಹಿತ ಎನ್ನುತ್ತಾರೆ ಕೀಟ ತಜ್ಞರು.

ಬಲೆ ಕಟ್ಟದು: ಇವು ಬಲೆ ಕಟ್ಟುವುದಿಲ್ಲ. ನಿಶಾಚರ ಜೀವನ. ಭೂಮಿಯಲ್ಲಿ ಸಣ್ಣ ಬಿಲತೋಡಿ ಅದರ ಒಳಭಾಗದಲ್ಲಿ ರೇಷ್ಮೆ ಪದರದಂತಹ ಗೂಡು ಕಟ್ಟಿ ಬದುಕುತ್ತವೆ.
ವೃಕ್ಷವಾಸಿಗಳೂ ಕೆಲ ಕಾಂಡದ ಮೇಲೊಂದು ಹರಳೆ ಚೀಲ ನಿರ್ಮಿಸಿ ವಾಸಿಸುವ ಕಲೆಗಾರಿಕೆ ಸಿದ್ಧಿಸಿದೆ. ಅವಿತು, ಹೊಂಚು ಹಾಕಿ ಸಮೀಪ ಬಂದ ಕೀಟ ಗಳನ್ನು ತಿನ್ನುತ್ತವೆ.
ಬಹು ಬೆಲೆ: ಇತ್ತೀಚಿಗೆ ವಿದೇಶಗಳಲ್ಲಿ ಮುದ್ದಿನ ಪ್ರಾಣಿಯಾಗಿ ಸಾಕುವ ಖಯಾಲಿ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಬಣ್ಣದ ಜೇಡಗಳಿಗೆ ಬೇಡಿಕೆ ಇದೆ.

ಅಮೆರಿಕಾದ ಫ್ಲೊರಿಡಾ ಪ್ರಾಂತ್ಯದಲ್ಲಿ ಇವು ಗಳಿಂದ ಕಚ್ಚಿಸಿಕೊಂಡ ಪ್ರಕರಣ ಗಳಿವೆ. ಏಷಿಯಾದ ಕಾಂಬೋಡಿಯಾ, ಚೀನಾಗಳಲ್ಲಿ ಜನಪ್ರಿಯ ಆಹಾರವಾಗಿ ಬಳಕೆಯಲ್ಲಿವೆ.
ಜೇಡಗಳ ನೆಲೆ: ಇಲ್ಲಿನ ಪ್ರಕೃತಿ ವೈವಿಧ್ಯ ಜೇಡ ಸಂಕುಲಗಳನ್ನು ಪೋಷಿಸುತ್ತದೆ.  ವಿಶೇಷವಾಗಿ ಮಳೆ ಕಾನನದಲ್ಲಿ ಇವುಗಳ ಆವಾಸ. ಶೀತ ಇಲ್ಲವೇ ಕಗ್ಗತ್ತಲ ಅರಣ್ಯ ಗಳಲ್ಲಿ ಇವುಗಳನ್ನು ಕಾಣಲಾಗದು ಎನ್ನುತ್ತಾರೆ ‘ಏಟ್ರೀ’ ಸಂಶೋಧಕ ಡಾ.ಸಿ. ಮಾದೇಗೌಡ.ಇವು ಸಿಂಗಾಪುರ, ಇಂಡೊನೇ ಶಿಯಾ, ಪಾಕಿಸ್ತಾನ, ಇರಾನ್‌, ಭೂತಾನ್‌ ಮತ್ತು ಭಾರತದ ಪರಿಸರಗಳಲ್ಲಿ ಕಂಡು ಬರುತ್ತವೆ ಎಂದು ಅಭಿಪ್ರಾಯ ಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT