ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸದರ ಗೈರು ಮಲೆನಾಡಿಗರಿಗೆ ಮಾಡಿದ ದ್ರೋಹ’

Last Updated 16 ಏಪ್ರಿಲ್ 2017, 7:04 IST
ಅಕ್ಷರ ಗಾತ್ರ

ನರಸಿಂಹರಾಜಪುರ: ‘ಕಳೆದ ಆಗಸ್ಟ್‌ನಲ್ಲಿ ನಡೆದ ಡಾ.ಕಸ್ತೂರಿರಂಗನ್ ವರದಿ ಅನುಷ್ಟಾನದ ಮಹತ್ವದ ಸಭೆಯಲ್ಲಿ ರಾಜ್ಯದ ಮಲೆನಾಡಿನ ಭಾಗದ ಸಂಸ ದರು ಭಾಗವಹಿಸದಿರುವುದು ಮಲೆ ನಾಡಿನ ಜನರಿಗೆ ಮಾಡಿದ ದ್ರೋಹ’ ಎಂದು ಪತ್ರಕರ್ತ ಹುಲುಕೋಡು ರಾಮಸ್ವಾಮಿ ಜರಿದರು.ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಶನಿವಾರ ಡಾ.ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯಿಂದ ಹಮ್ಮಿ ಕೊಂಡಿದ್ದ ‘ಡಾ.ಕಸ್ತೂರಿರಂಗನ್ ವರದಿ ನಮಗೆ ಏಕೆ ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಸಣ್ಣ ರಾಜ್ಯವಾದ ಕೇರಳದಿಂದ 9 ಸಂಸದರು ಮಹತ್ವದ ಸಭೆಯಲ್ಲಿ ಭಾಗವ ಹಿಸಿದ್ದರೆ, ರಾಜ್ಯದ ಇಬ್ಬರು ಲೋಕಸಭಾ ಸದಸ್ಯರು, ಒಬ್ಬರು ರಾಜ್ಯಸಭಾ ಸದಸ್ಯರು ಮಾತ್ರ ಭಾಗವಹಿಸಿದ್ದರು. ಇದರಿಂದ ರಾಜ್ಯದ ಪರ ಸಮರ್ಥವಾದ ಮಂಡಿಸಲು ಸಾಧ್ಯವಾಗಿಲ್ಲ’ ಎಂದರು.

 ‘ಕಸ್ತೂರಿರಂಗನ್ ವರದಿ ದೇಶದ 6 ರಾಜ್ಯಗಳನ್ನು ಪಶ್ಚಿಮಘಟ್ಟ ವಲಯಗಳು ಎಂದು ತೀರ್ಮಾನಿಸಿ ಪರಿಶೀಲನೆಗೆ ಹೋರಟ ತಂಡ   2 ರಾಜ್ಯಗಳಿಗೆ ಮಾತ್ರ  ಭೇಟಿ ನೀಡಿ ಪರಿಶೀಲಿಸಿದೆ. ಉಳಿದ 4 ರಾಜ್ಯಗಳನ್ನು ಉಪಗ್ರಹದ  ಮೂಲಕ ಸರ್ವೆ ಮಾಡಿ ಜನವಸತಿ ಇರುವ ಪ್ರದೇಶವನ್ನು ದಟ್ಟ ಅರಣ್ಯ ಎಂದು ವರದಿ ನೀಡಿ ಲೋಪವೆಸಗಿದೆ’ ಎಂದರು.

‘ವರದಿ ಜಾರಿಯಾದರೆ ಊರನ್ನು ಬಿಡಬೇಕು ಎಂದು ಹೇಳುವುದಿಲ್ಲ. ಆದರೆ ಕೃಷಿಯೇತರ ಚಟುವಟಿಕೆಗಳು ಮಾಡುವಂತಿಲ್ಲ. ರಾಸಾಯನಿಕ ಬಳಸುವಂತಿಲ್ಲ. ಏಕ ಜಾತಿಯ ನೆಡು ತೋಪು ಮಾಡುವಂತಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಊರು ಬಿಡಿಸುವ ಹುನ್ನಾರ ಅಡಗಿದೆ’ ಎಂದರು.   

ಜನಸಂಖ್ಯೆ ಹೆಚ್ಚಳದಿಂದ ಅರಣ್ಯ ನಾಶವಾಗುತ್ತದೆ ಎಂದು ವರದಿ ಸಲ್ಲಿಸಿದ್ದು,  2011ರ ಜನಗಣತಿ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಜನಸಂಖ್ಯೆ ಹೆಚ್ಚಾಗುವ ಬದಲು ಶೇ 2ರಷ್ಟು ಇಳಿಮುಖವಾಗಿದೆ. ವಿದೇಶಗಳಲ್ಲಿರುವ ಕಾಡು ನಾಶಮಾಡಿ ಕಟ್ಟಡ ನಿರ್ಮಿಸಿ ಈಗ ಪಶ್ಚಿಮ ಘಟ್ಟಗಳ ರಕ್ಷಣೆ ಮುಂದಾಗಿದ್ದಾರೆ.ವರದಿ ಜಾರಿ ಮಾಡುವ ಮೊದಲು ಮತ್ತಷ್ಟು ಕಾಲವಕಾಶ ನೀಡಿ ಎಂದು ಸರ್ಕಾರಕ್ಕೆ ಮನವಿಸಲ್ಲಿಸುವುದನ್ನು ಬಿಟ್ಟರೆ ಅನ್ಯ ಮಾರ್ಗವಿಲ್ಲ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ದಯಾನಂದ ವರದಿ ಜಾರಿಗೆ ತರಲು ಯಾರಿಂದ ದೋಷವಾಗಿದೆ ಎನ್ನುವುದಕ್ಕಿಂತ ಮಲೆನಾಡಿನ ಜನರು ಬದುಕುವುದು ಹೇಗೆ ಎಂಬುದಕ್ಕೆ ಪರಿ ಹಾರ ಕಂಡುಕೊಳ್ಳಬೇಕು.ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಅಹಿಂಸಾತ್ಮಕವಾದ ಹೋರಾಟ ಮಾಡಬೇಕಾಗಿದೆ ಎಂದರು.  

ಸಭೆಯಲ್ಲಿ ದಾನಿವಾಸ ದುರ್ಗಾಂಬದೇವಾಲಯದ ಅಧ್ಯಕ್ಷ ಡಿ.ಸಿ.ದಿವಾಕರ್, ಜಾಮಿಯ ಮಸೀದಿಯ ಅಧ್ಯಕ್ಷ ಸಮದ್‌್್ ಖಾನ್, ಮ್ಯಾಮ್ಕೋಸ್ ಉಪಾಧ್ಯಕ್ಷ ವೈ.ಎಸ್.ಸುಬ್ರಮಣ್ಯ ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ರಾಜ್ಯ ಕಿಸಾನ್ ಸೇಲ್ ರಾಜ್ಯಾಧ್ಯಕ್ಷ ಸಚ್ಚಿನ್ ಮೀಗ, ಅಮ್ ಆದ್ಮಿ ಪಕ್ಷದ ನಾಗರಾಜ್, ಮುಖಂಡ ಎಲ್.ನಾಗರಾಜ್ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಪ್ರೇಮ, ಈ.ಸಿ.ಸೇವಿಯಾರ್  ಜಯಂತ್, ಜಿ.ದಿವಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT