ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು, ಮೇವು ಒದಗಿಸಲು ಸೂಚನೆ

Last Updated 16 ಏಪ್ರಿಲ್ 2017, 7:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕುಡಿ ಯುವ ನೀರಿಗೆ ಹಾಗೂ ಜಾನುವಾರುಗಳ ಮೇವಿಗೆ ಯಾವುದೇ ಸಮಸ್ಯೆ ಬಾರ ದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಬರ ಪರಿಶೀಲನೆ ಸಭೆಯಲ್ಲಿ ಅವರು ಮಾತ ನಾಡಿ, ‘ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿರುವ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳು ಹಾಗೂ ಶಾಲೆಗಳಿಗೆ ರಜೆ ಇರುವುದರಿಂದ ಶಾಲೆಗಳ, ವಿದ್ಯಾರ್ಥಿ ನಿಲಯಗಳ ಮತ್ತು ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳನ್ನು ಕೂಡ ಕುಡಿಯುವ ನೀರು ಪೂರೈಕೆಗೆ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಆರ್. ರಾಗಪ್ರಿಯ ಮಾತನಾಡಿ, ‘ಚಿಕ್ಕಮಗ ಳೂರು ತಾಲ್ಲೂಕಿನಲ್ಲಿ 45 ಗ್ರಾಮಗಳಿಗೆ, ಕಡೂರು ತಾಲ್ಲೂಕಿನ 64 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಚಿಕ್ಕಮಗಳೂರಿನ 210, ಕಡೂರಿನ 79, ಕೊಪ್ಪ 3, ಮೂಡಿಗೆರೆ ತಾಲ್ಲೂಕಿನ 71 ಗ್ರಾಮ ಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದ್ದು, ಈ ಗ್ರಾಮಗಳ ಪೈಕಿ ಚಿಕ್ಕಮಗಳೂರು ತಾಲ್ಲೂಕಿನ 89, ಕಡೂರು ತಾಲ್ಲೂಕಿನ 9, ಕೊಪ್ಪ 3 ಹಾಗೂ ಮೂಡಿಗೆರೆ ತಾಲ್ಲೂಕಿನ 40 ಗ್ರಾಮಗಳಿಗೆ ಸಿಆರ್ಎಫ್, ಎನ್ಆರ್‌ಡಿಡಬ್ಲ್ಯುಪಿ, ಗ್ರಾಮ ಪಂಚಾಯಿತಿ 14ನೇ ಹಣಕಾಸು ಮತ್ತು ಇತರೆ ಯೋಜನೆಗಳಿಂದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಿ, ಪರಿಹಾರ ಕಲ್ಪಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿ ನಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸ ಲಾಗಿದೆ. ಕೃಷಿ ಬೆಳೆ 48,572 ಹೆಕ್ಟೇರ್, ತೋಟಗಾರಿಕಾ ಬೆಳೆ 9,296 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. ಹಿಂಗಾರು ಹಂಗಾಮಿನಲ್ಲಿ 9,354 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ಹಾನಿಯಾಗಿರು ವುದಾಗಿ ಅಂದಾಜಿಸಲಾಗಿದೆ. ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಸಿ.ಸೀತಾ ಮಾಹಿತಿ ನೀಡಿದರು.

‘ಬರ ಎದುರಾಗುವ ಮೊದಲೇ ರೈತರು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳನ್ನು ಅವರ ಆರ್.ಟಿ.ಸಿಯಲ್ಲಿ ನಮೂದಿಸಲಾಗಿತ್ತು.  ಇದರಿಂದ ಬೆಳೆ ಹಾನಿ ಸಮೀಕ್ಷೆ ಸುಲಭವಾಯಿತು. ರೈತರು ಬೆಳೆದಿರುವ ಬೆಳೆಗಳನ್ನು ಸಮೀಕ್ಷೆಯಲ್ಲಿ ಗುರುತಿಸಲು ಅನುಕೂಲವಾಯಿತು. ಅಲ್ಲದೆ, ಆಧಾರ್ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗೆ ಪರಿಹಾರ ತಂತ್ರಾಂಶದ ಮೂಲಕ ಮೊದಲನೇ ಕಂತಿನಲ್ಲಿ 28,697 ರೈತರಿಗೆ ₹15.44 ಕೋಟಿ ಸಹಾಯಧನವನ್ನು ಸರ್ಕಾರದಿಂದ ನೇರವಾಗಿ ಜಮಾ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.

ರೈತರಿಗೆ ಮೇವು ಬೆಳೆಯಲು ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆಯೇ ಎಂದು ಮಾಹಿತಿ ಕೇಳಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿದರು. ಜಾನುವಾರುಗಳ ಮೇವಿಗೆ ಯಾವುದೇ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
‘ಜಿಲ್ಲೆಯಲ್ಲಿ1,46,628 ಟನ್ ಮೇವು ರೈತರ ಹತ್ತಿರ ಲಭ್ಯವಿದ್ದು, ಇದು ಮುಂದಿನ 10 ವಾರಗಳಿಗೆ ಸಾಕಾಗುತ್ತದೆ. ಈಗಾಗಲೇ 16 ಕಡೆ ಮೇವು ಬ್ಯಾಂಕ್‌ ತೆರೆಯಲಾಗಿದೆ.

ವು ವಿತರಣೆಗೆ 6,865 ಅರ್ಜಿ ಬಾಕಿ ಇವೆ. 159 ಟನ್ ಮೇವು ಲಭ್ಯವಿದೆ. ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿ, ಈಶ್ವರಹಳ್ಳಿ ಪಂಚಾಯಿತಿಯ ಹಂಚಿಹಳ್ಳಿ ಹಾಗೂ ಕಡೂರು ತಾಲ್ಲೂಕಿನ ಪಂಚನಹಳ್ಳಿಯ ಹೋ ಬಳಿಯ ಪಂಚನಹಳ್ಳಿಯಲ್ಲಿ ಗೋಶಾಲೆ ತೆರೆಯಲು ಉದ್ದೇಶಿಸಲಾಗಿದೆ. ಮೇವು ಬೆಳೆಯಲು 12,007 ರೈತರಿಗೆ ಮಿನಿ ಕಿಟ್ ವಿತರಿಸಿ, ಮೇವು ಬೆಳೆಯ ಲಾಗುತ್ತಿದೆ. ಎರಡನೇ ಹಂತದಲ್ಲಿ 10,745 ಮಿನಿ ಕಿಟ್ ಜಿಲ್ಲೆಗೆ ಸರಬರಾಜಾಗಿದೆ. ರೈತರಿಗೆ ವಿತರಿಸಲು ಕ್ರಮ ವಹಿಸಲಾಗಿದೆ’ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶ ಕರು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪವಿ ಭಾಗಾಧಿಕಾರಿ ಸಂಗಪ್ಪ ಹಾಗೂ ಎಲ್ಲ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT