ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಾವಿದರಿಗೆ ವೇದಿಕೆ ಒದಗಿಸಿದ ಮೇಳ’

Last Updated 16 ಏಪ್ರಿಲ್ 2017, 7:22 IST
ಅಕ್ಷರ ಗಾತ್ರ

ಮಂಗಳೂರು:  ಕರಾವಳಿಯು ಸಂಸ್ಕೃತಿ, ಪರಂಪರೆಯ ನಾಡು. ಇಲ್ಲಿನ ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಇಂತಹ ಕಲಾಮೇಳಗಳು ನಿರಂತರವಾಗಿ ನಡೆಯಬೇಕು ಎಂದು ಶಾಸಕ ಜೆ.ಆರ್‌. ಲೋಬೊ ಹೇಳಿದರು.ಕರಾವಳಿ ಚಿತ್ರಕಲಾ ಚಾವಡಿ ಮತ್ತು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನಗಳ ವತಿಯಿಂದ ನಗರದ ಕದ್ರಿ ಉದ್ಯಾನದಲ್ಲಿ ಶನಿವಾರ ಕುಡ್ಲ ಕಲಾ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರಾವಳಿ ಭಾಗದಲ್ಲಿ ಕಲೆಗಳಿಗೆ ಮಹತ್ವವಿದೆ. ಕಲೆ ಎಂಬುದು ಭಾವನೆಗಳ ಅಭಿವ್ಯಕ್ತಿಯ ವೇದಿಕೆ. ಇಂತಹ ಕಲಾ ಮೇಳಗಳು ಈ ಭಾಗದ ಕಲಾವಿದರನ್ನು ಪೋಷಿಸುವುದರ ಜತೆಗೆ, ಇಲ್ಲಿನ ಕಲೆಯನ್ನು ಇನ್ನಷ್ಟು ಉತ್ತುಂ ಗಕ್ಕೆ ಕೊಂಡೊಯ್ಯಲು ಸಹಕಾರಿ ಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಯುಪಿಸಿಎಲ್‌ನ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ, ಹರಿಕೃಷ್ಣ ಪುನರೂರು, ಹಿರಿಯ ಚಿತ್ರ ಕಲಾವಿದ ಪಿ.ಎಸ್‌. ಪುಣಿಚಿತ್ತಾಯ, ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ಪಾಲಿಕೆ ಸದಸ್ಯೆ ರೂಪಾ ಡಿ. ಬಂಗೇರಾ, ಮುಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ್‌, ಡಾ. ರಾಜೇಶ್‌ ಮಳಿ ವೇದಿಕೆಯಲ್ಲಿದ್ದರು. ಚಾವಡಿಯ ಕಾರ್ಯದರ್ಶಿ ಪ್ರೊ. ಅನಂತ ಪದ್ಮನಾಭ ರಾವ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಮೇಳದಲ್ಲಿ ಕುಂಚ ವೈಭವ:  ಕುಡ್ಲ ಕಲಾ ಮೇಳದಲ್ಲಿ ಪ್ರದರ್ಶಿತವಾಗಿರುವ ಚಿತ್ರ ಕಲೆಯ ವಿಭಿನ್ನ ಮಾದರಿಗಳ ಜತೆಗೆ ಪ್ರತಿ ಷ್ಠಾಪನಾ ಕಲಾಕೃತಿಗಳು ಕಲಾಸಕ್ತರ ಆಕರ್ಷಣೆ ಕೇಂದ್ರಬಿಂದುವಾ ಗಿದ್ದವು. ಕಲಾ ವಿದರ ಕುಂಚ ವೈಭವಕ್ಕೆ ಸಾಕ್ಷಿ ಎನ್ನು ವಂತೆ ಉದ್ಯಾನದ ರಸ್ತೆಯ ಇಕ್ಕೆಲ ಗಳಲ್ಲಿ ಕಲಾಕೃತಿಗಳು ಕಂಗೊಳಿ ಸುತ್ತಿದ್ದವು.ಎರಡು ದಿನಗಳ ಕಲಾ ಮೇಳದಲ್ಲಿ ಸುಮಾರು 150 ಕ್ಕೂ ಹೆಚ್ಚು ಮಳಿಗೆಗ ಳಲ್ಲಿ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದು, 600 ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶಿ ತಗೊಳ್ಳುತ್ತಿವೆ.

ಜಲ ವರ್ಣ, ತೈಲ ವರ್ಣ, ಆಕ್ರಿಲಿಕ್‌, ಕ್ರೆಯಾನ್ಸ್‌, ಬಣ್ಣದ ಪೆನ್ಸಿಲ್‌, ಚಾರ್ಕೊಲ್‌ ಮೊದಲಾದ ಮಾಧ್ಯಮಗಳಲ್ಲಿ ಕಲಾವಿದರು, ಕಲಾ ವಿದ್ಯಾರ್ಥಿ ಗಳು ರಚಿಸುವ ಚಿತ್ರಗಳು ಇಲ್ಲಿ ಪ್ರದರ್ಶಿತ ವಾಗುತ್ತಿವೆ. ಪ್ರಮುಖವಾಗಿ ಕಲ್ಲು, ಮರ, ಸೇರಿದಂತೆ ಪ್ರಕೃತಿದತ್ತವಾದ ವಸ್ತುಗಳಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಅನಾವ ರಣಗೊಳಿಸುವ ಪ್ರತಿಷ್ಠಾಪನಾ ಕಲೆಯು, ಈ ಮೇಳದ ಪ್ರಮುಖ ಆಕ ರ್ಷಣೆಯಾ ಗಿದೆ. ಪ್ರಕೃತಿಯಲ್ಲಿ ಸಿಗುವ ವಸ್ತುವಿಗೆ ಕಲಾವಿದ ಕಲಾತ್ಮಕ ಸ್ಪರ್ಶ ನೀಡುವ ಕಲಾ ಪ್ರಕಾರವೇ ಪ್ರತಿಷ್ಠಾಪನಾ ಕಲೆ.

ಗೀಜಗ ಹಕ್ಕಿ ಗೂಡು ಹೆಣೆಯುವ ಕಲಾ ನೈಪುಣ್ಯವನ್ನು ಕಲಾವಿದರು ಬೈಹುಲು ಬಳಸಿ ತೋರ್ಪಡಿಸಿದ್ದಾರೆ. ಮಾಲ್‌ಗಳಲ್ಲಿ ಕಾಣುತ್ತಿದ್ದ ಈ ಗೂಡು ಇದೀಗ ಕಲಾ ಮೇಳದಲ್ಲಿ ವಿಜೃಂಭಿಸುತ್ತಿದೆ. ಈ ಪ್ರದ ರ್ಶನದಲ್ಲಿ ಗೋಪಾಡ್ಕರ್‌ ಅವರ ಸ್ವರೂಪ ಅಧ್ಯಯನ ಕೇಂದ್ರದ ಮಕ್ಕ ಳಿಂದ ವರ್ಣ ಸ್ವರೂಪ ಕಲಾಪ್ರಕಾರಗಳು ಪ್ರದರ್ಶಿತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT