ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪ ನಿರೀಕ್ಷೆಯಲ್ಲಿ ಐತಿಹಾಸಿಕ ಶಿವಲಿಂಗ

Last Updated 16 ಏಪ್ರಿಲ್ 2017, 8:51 IST
ಅಕ್ಷರ ಗಾತ್ರ

ಸೇಡಂ: ಕುರಕುಂಟಾ ಗ್ರಾಮದ ತಿಪ್ಪಣ್ಣಪ್ಪ ಗವಿಯಲ್ಲಿರುವ ಗವಿಸಿದ್ದಲಿಂಗೇಶ್ವರದ ಶಿವಲಿಂಗ ಪಾಳುಬಿದ್ದಿದೆ.800 ವರ್ಷಗಳಿಗಿಂತ ಪೂರ್ವದಲ್ಲಿಯೇ ಇದನ್ನು ಪ್ರತಿಷ್ಠಾಪಿಸಲಾಗಿದೆ.  ಗವಿಯಲ್ಲಿರುವ ಶಿವಲಿಂಗ ಕಪ್ಪು ಬಣ್ಣದಿಂದ ಕೂಡಿದ್ದು, ಅದ್ಭುತವಾಗಿದೆ. ಈ ಲಿಂಗವು ಐತಿಹಾಸಿಕ ಕುರುಹು ಮತ್ತು ಇತರ ಪಾರಂಪರಿಕ ಕಟ್ಟಡದ ಕೊರತೆಯಿಂದ ವಿನಾಶದಂಚಿನಲ್ಲಿದೆ.

ಗವಿಯಲ್ಲಿಯೇ ಲಿಂಗ ಇರುವುದರಿಂದ ಇದಕ್ಕೆ ‘ಗವಿಸಿದ್ದಲಿಂಗೇಶ್ವರ ಶಿವಲಿಂಗ’ಎಂದು ಕರೆಯುವುದುವಾಡಿಕೆ. ಚಿಕ್ಕದ್ವಾರ ಬಾಗಿಲು ಹೊಂದಿರುವ ಇದು ಭೂಮಿಯ ಒಳಗೇ ಲಿಂಗದತ್ತ ಪ್ರವೇಶಿಸಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.ಕೇವಲ ಒಬ್ಬವ ವ್ಯಕ್ತಿಯೇ ಪ್ರವೇಶಿಸುವ ಇಕ್ಕಟ್ಟಿನ ಪ್ರವೇಶದ್ವಾರವಿದೆ. ಗವಿಯಲ್ಲಿ ದೀಪದ       ಬೆಳಕಿನಲ್ಲಿ ಲಿಂಗ ಸದಾ ಹೊಳೆಯುತ್ತಿದೆ. ಮೆಟ್ಟಿಲುಗಳನ್ನು ಇಳಿದು ಸ್ವಲ್ಪ ಮುಂದೆ ಪ್ರವೇಶಿಸಿದ ನಂತರ ಚಿಕ್ಕ ಗರ್ಭಗುಡಿಯಿದ್ದು, ಅಲ್ಲಿ ಲಿಂಗ ಸ್ಥಾಪಿಸಲಾಗಿದೆ.

ಶಿವಲಿಂಗ ಒಂದು ಅಡಿ ಎತ್ತರವಿದ್ದು ಕಪ್ಪು ಬಣ್ಣದಿಂದ ಕೂಡಿದೆ. ಶಿವಲಿಂಗ ಗವಿಯಲ್ಲಿರುವುದರಿಂದ ಹಿಂದಿನಿಂದಲೂ ನಿರಂತರವಾಗಿ ಜಲಾಭಿಷೇಕವಾಗುತ್ತಿತ್ತು ಎನ್ನುತ್ತಾರೆ ಸ್ಥಳೀಯ ನಿವಾಸಿ  ಎಂ. ವೆಂಕಟರೆಡ್ಡಿ. ಈಗ ಲಿಂಗ ಶಿಥಿಲಗೊಂಡಿದೆ. ಪ್ರಾರಂಭದಲ್ಲಿ ಹೇಗೆ ಇತ್ತೋ ಹಾಗೆಯೇ ಇರುವುದು ಜನರಲ್ಲಿ ಭಕ್ತಿ ಹೆಚ್ಚಿದೆ.

ಲಿಂಗಪೂಜೆಗೆ ಚಿತ್ತಾಪುರ ತಾಲ್ಲೂಕಿನ ಯರಗಲ್‌ನ ಸ್ವಾಮೀಜಿ ಲಕಲಕ ಅವರು ಬಂದ ನಂತರ ಶಿವಲಿಂಗದ ವೈಭವ ಹೆಚ್ಚಿತ್ತು. ಕುರುಕುಂಟಾ ಜನತೆ ಮತ್ತು ಚಿತ್ತಾಪುರ ತಾಲ್ಲೂಕಿನ ಜನರು ಬಂದು ಇಲ್ಲಿ ಭಜನೆ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಅವರು ಮೃತರಾದ ಬಳಿಕ ಗವಿಸಿದ್ಧಲಿಂಗೇಶ್ವರ ಪಾಳುಬಿದ್ದಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಗವಿ ಸುಂದರವಾಗಿದೆ. ನವದ್ವಾರಗಳಿಂದ ಕೂಡಿದ ಇಲ್ಲಿನ ತಿಪ್ಪಣ್ಣಪ್ಪ   ಮಠಕ್ಕೆ ತನ್ನದೆ ಇತಿಹಾಸ ಇದೆ. ಮಠದಲ್ಲಿರುವ ಲಿಂಗವನ್ನು ನೋಡಲು ತಾಲ್ಲೂಕಿನ ವಿವಿಧೆಡೆಯಿಂದ ಜನ ತೆರಳುತ್ತಾರೆ. ಅಮಾವಾಸ್ಯೆ ದಿನದಂದು ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಧಾರ್ಮಿಕ ಸಂಪ್ರದಾಯದಂತೆ ಲಿಂಗವನ್ನು ಗ್ರಾಮದ ಜನರು, ಪಕ್ಕದ ಊರಿನ ಭಕ್ತರು, ಸುತ್ತಲಿನ ಪ್ರದೇಶದ ಜನರು ಸೇರಿದಂತೆ ಆಂಧ್ರಪ್ರದೇಶದಿಂದ ಬಂದು ನೋಡುತ್ತಾರೆ ಮತ್ತು ಪೂಜಿಸುತ್ತಾರೆ ಎಂದು ಗ್ರಾಮದ ಮುಖಂಡ ವೀರಣ್ಣ ಮಂತಟ್ಟಿ, ನಾಗಪ್ಪ ಕೊಳ್ಳಿ ತಿಳಿಸಿದರು.

ಮಹಾಶಿವರಾತ್ರಿ ದಿನ ಲಿಂಗಕ್ಕೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಶಿವರಾತ್ರಿ ದಿನ ಇಲ್ಲಿ ಸೇರುವ ಜನರ ಸಂಖ್ಯೆ ಹೆಚ್ಚುತ್ತದೆ ಎಂಬುದು     ಗ್ರಾಮಸ್ಥರ ಅಭಿಪ್ರಾಯ.ಹಾಳುಬಿದ್ದ ನವದ್ವಾರ ಹಾಗೂ ಗೋಡೆ ಮತ್ತು ಸಿದ್ದಲಿಂಗೇಶ್ವರದ ಶಿವಲಿಂಗಕ್ಕೆ ಜಿರ್ಣೋದ್ಧಾರಗೊಂಡರೆ ಕುರಕುಂಟಾ ಧಾರ್ಮಿಕ ಕ್ಷೇತ್ರಕ್ಕೆ ಮೆರುಗು        ಬರಲಿದೆ ಎಂದು ರಾಜಶೇಖರ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT