ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಕೆಆರ್‌ಡಿಬಿ: ₹19.3 ಕೋಟಿ ಮಂಜೂರು

Last Updated 16 ಏಪ್ರಿಲ್ 2017, 8:59 IST
ಅಕ್ಷರ ಗಾತ್ರ

ಸಿಂಧನೂರು: ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿದೆ ಎಂದು ಎಂಎಸ್ಐಎಲ್ ಅಧ್ಯಕ್ಷ ಹಂಪನಗೌಡ ಬಾದರ್ಲಿ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಾಭಿವೃದ್ಧಿ ನಿಗಮದಿಂದ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆಗಳಿಗೆ ₹20 ಕೋಟಿ, 2016-17ನೇ ಸಾಲಿನಲ್ಲಿ ತಾಂಡಗಳಲ್ಲಿ ಸಮುದಾಯ ಭವನ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ₹17 ಲಕ್ಷ, ಹೆಚ್‌ಕೆಆರ್‌ಡಿಬಿ ಮೈಕ್ರೋ ಯೋಜನೆಯಲ್ಲಿ ₹13.70 ಕೋಟಿ ಬಿಡುಗಡೆಯಾಗಿದೆ. ಮೈಕ್ರೋ ಯೋಜನೆಯಲ್ಲಿ ₹5.60 ಕೋಟಿ ಅನುದಾನ 2017-–18ನೇ ಸಾಲಿಗೆ ಬಿಡುಗಡೆಯಾಗಿದ್ದು, ನಗರದ ವಾರ್ಡ್‌ ನಂ.1 ರಿಂದ 11ನೇ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಚ್‌ಕೆಆರ್‌ಡಿಬಿ ಮೈಕ್ರೋ ಯೋಜನೆಯಲ್ಲಿ ಗೊರೇಬಾಳ, ಬಸ್ ನಿಲ್ದಾಣಕ್ಕೆ ₹9 ಲಕ್ಷ, ಒಳಬಳ್ಳಾರಿ ರಂಗ ಮಂದಿರಕ್ಕೆ ₹50 ಲಕ್ಷ, ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣ ನವೀಕರಣಕ್ಕೆ ₹43 ಲಕ್ಷ, ರಾಮತ್ನಾಳ ಶಾಲಾ ಕಟ್ಟಡಕ್ಕೆ ₹24 ಲಕ್ಷ, ಸಾಲಗುಂದಾ ಶಾಲಾ ಕಟ್ಟಡಕ್ಕೆ ₹18 ಲಕ್ಷ, ಹುಡಾ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ₹25 ಲಕ್ಷ, ತಿಮ್ಮಾಪುರ ಪ್ರೌಢ ಶಾಲಾ ಕಟ್ಟಡಕ್ಕೆ ₹25 ಲಕ್ಷ ಹಾಗೂ ಶಾಸಕರ ಅನುದಾನದಲ್ಲಿ ₹2 ಕೋಟಿ ಬಿಡುಗಡೆ ಮಾಡಲಾಗಿದೆಎಂದರು.

ತಾಲ್ಲೂಕಿನ ಜಾಲಿಹಾಳ, ಗೊರೇಬಾಳ ಹಾಗೂ ಬಾದರ್ಲಿ ಗ್ರಾಮಗಳಿಗೆ ಕ್ರಮವಾಗಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮಂಜೂರಾಗಿದ್ದು, ತಲಾ ₹15 ಕೋಟಿ ಹಣ ನೀಡಿದೆ. ಈಗಾಗಲೇ ಗೊರೇಬಾಳ ಗ್ರಾಮದಲ್ಲಿ 8 ಎಕರೆ ಜಾಗ ಗುರುತಿಸಿ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ನಗರದಲ್ಲೂ ಮೂರು ವಸತಿ ನಿಲಯಗಳು ಮಂಜೂರಾಗಿದ್ದು, ಕಟ್ಟಡಕ್ಕೆ ತಲಾ ₹3 ಕೋಟಿ ಅನುದಾನ ನೀಡಲಾಗಿದೆಂದು ಶಾಸಕ ಬಾದರ್ಲಿ ತಿಳಿಸಿದರು.

ನೀರಾವರಿ ಇಲಾಖೆಯ ಎಸ್ಇಪಿ, ಟಿಎಸ್‌ಪಿ ಯೋಜನೆಯಲ್ಲಿ ತಾಲ್ಲೂಕಿನ ಗಾಂಧಿನಗರದ ವೆಂಕಟೇಶ್ವರ ಪೈಕ್ಯಾಂಪ್ ಸಿಸಿ ರಸ್ತೆ ₹50 ಲಕ್ಷ, ತಿಪ್ಪನಹಟ್ಟಿ ಸಿಸಿ ರಸ್ತೆಗೆ ₹50 ಲಕ್ಷ, ಅಲ್ಲದೆ ತಾಲ್ಲೂಕಿನ ಸಾಲಗುಂದಾ, ಬಾದರ್ಲಿ ಹಾಗೂ ಆರ್.ಎಚ್.ನಂ.2 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಕ್ಕೆ ತಲಾ ₹2 ಕೋಟಿ ಬಿಡುಗಡೆಯಾಗಿದ್ದು, ಕೂಡಲೇ ಕಾಮಗಾರಿ ಪ್ರಾರಂಭಕ್ಕೆ ಆದೇಶ ನೀಡಲಾಗಿದೆ. ಸಿಂಧನೂರಿನ ಅಕ್ಕಮಹಾದೇವಿ ಮಹಿಳಾ ಸ್ನಾತಕೋತ್ತರ ಕೇಂದ್ರದ ಕಟ್ಟಡದ ಅಭಿವೃದ್ಧಿಗೆ ₹2.65 ಕೋಟಿ ಮಂಜೂರಾಗಿದೆಂದು ಹೇಳಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಶರಣೇಗೌಡ, ಸದಸ್ಯ ಮುರ್ತುಜಾಹುಸೇನ್, ನಗರಸಭೆ ಮಾಜಿ ಅಧ್ಯಕ್ಷ ಜಾಫರಅಲಿ ಜಾಗೀರದಾರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಆರ್.ಸಿ.ಪಾಟೀಲ್, ಮುಖಂಡ ರಾದ ಅಬ್ದುಲ್ ಖದೀರ್, ಯೂನೂಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT