ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂದದ ಉದ್ಯಾನ ಎಲ್ಲರಿಗೂ ಅಚ್ಚುಮೆಚ್ಚು

Last Updated 16 ಏಪ್ರಿಲ್ 2017, 9:27 IST
ಅಕ್ಷರ ಗಾತ್ರ

ಹುಣಸಗಿ: ವರ್ಷಗಳ ಹಿಂದೆ ಯುಕೆಪಿ ಕ್ಯಾಂಪ್‌ನ ವಸಹಾತುಗಳು ನಿರ್ಮಾಣ ವಾಗುವ ಸಂದರ್ಭ. ಆಗ ಪಟ್ಟಣದ ಯುಕೆಪಿ ಕ್ಯಾಂಪ್‌ ನಿವಾಸಿಗಳ ಅನು ಕೂಲ ಕ್ಕಾಗಿ ಉದ್ಯಾನ ನಿರ್ಮಿಸ ಲಾಗಿತ್ತು. ಬಳಿಕ ನಿರ್ವಹಣೆ ಕೊರತೆ ಯಿಂದ ಎರಡು ವರ್ಷ ಉದ್ಯಾನ ಸೊರ ಗಿತು. ಚೈತನ್ಯ ಕಳೆದು   ಕೊಂಡಿತು.   ಎಲ್ಲೆಂದರಲ್ಲಿ ಮುಳ್ಳು  ಕಂಟಿ, ಗಿಡಗಂಟಿ ಬೆಳೆದು ಹಾವು ಚೇಳುಗಳ ವಾಸಸ್ಥಾನ ವಾಗಿ ಮಾರ್ಪಟ್ಟಿತು.

ಆದರೆ ಗ್ರಾಮದ ಯುವಕರ ಇಚ್ಚಾಶಕ್ತಿ ಮತ್ತು ಅಧಿಕಾರಿಗಳ ಆಸಕ್ತಿ ಯಿಂದ ಉದ್ಯಾನ ಮತ್ತೆ ಜೀವ ಪಡೆದಿದೆ. ಸುಂದರವಾಗಿ ಕಂಗೊಳಿ ಸುತ್ತಿದೆ. ಜನರ ಸಂತಸಕ್ಕೂ ಕಾರಣ ವಾಗಿದೆ. ಗ್ರಾಮೀಣ ಭಾಗದ ಪ್ರಮುಖ ಉದ್ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ವಾಯುವಿಹಾರಕ್ಕೆ ಈ ಉದ್ಯಾನವು ಹಿರಿಯ ನಾಗರಿಕರ ಅಚ್ಚುಮೆಚ್ಚಿನ ತಾಣ ವಾದರೆ, ಮಕ್ಕಳಿಗೆ ಜೋಕಾಲಿ, ಜಾರು ಬಂಡೆ  ಆಟವಾಡಲು ಸಂತಸದ ಸ್ಥಳ.

ಗೆಳೆಯರ ಬಳಗದ ಕಾರ್ಯಕರ್ತರು ಮತ್ತು ಯುವಕರು ಕಾಳಜಿ ವಹಿಸಿ ಸ್ಥಳೀಯ ದಾನಿಗಳಿಂದ ಉದ್ಯಾನಕ್ಕೆ ಜೀವ ತುಂಬಲು ಪ್ರಯತ್ನಿಸಿದರು. ಸುಮಾರು 5 ಲಕ್ಷ ವೆಚ್ಚದಲ್ಲಿ  ಕಲ್ಲಿನ ನೆಲಹಾಸು ನಿರ್ಮಿಸಿ,ವಾಯು ವಿಹಾರಕ್ಕೆ ಅನುಕೂಲ ಕಲ್ಪಿಸಿದರು.  ಹುಣಸಗಿಗೆ  ಕೃಷ್ಣಾ ಭಾಗ್ಯಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಭೇಟಿ ನೀಡಿದ ವೇಳೆ ಇಲ್ಲಿನ ನಾಗರಿಕರು ಉದ್ಯಾನದ ನವೀಕ ರಣ ಕಾಮಗಾರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದನೆ ದೊರೆತು ನವೀಕ ರಣ ಕಾಮಗಾರಿ ನೆರವೇರಿತು. 

‘ತಾಲ್ಲೂ ಕು ಕೇಂದ್ರವೆಂದು ಘೋಷ ಣೆಯಾದ  ಹುಣಸಗಿ ಪಟ್ಟಣದಲ್ಲಿ ಈ ಉದ್ಯಾನ ಪ್ರಮುಖ ಆಕರ್ಷಣೆಯಾಗಿದೆ. ಸುತ್ತಮುತ್ತಲಿನ ಮರಗಿಡಗಳು ಜನರಿಗೆ ತಂಪಿನ ಅನುಭೂತಿ ಮೂಡಿಸುತ್ತವೆ. ನೆರಳು ನೀಡುತ್ತವೆ’ ಎಂದು ಪಟ್ಟಣದ ಸಿ.ಬಿ.ಬಾಗೋಡಿ ಹೇಳಿದರು.

‘ಈ ಉದ್ಯಾನದ ಸುತ್ತಲೂ ಎತ್ತರದ  ತಂತಿ ಬೇಲಿ ಹಾಕಲಾಗದ್ದು, ಎರಡು ಭಾಗಗಳಲ್ಲಿ ಗೇಟ್ ಅಳವಡಿಸಲಾಗಿದೆ. ಉದ್ಯಾನದ ಸ್ವಚ್ಚತೆಗಾಗಿ ಅಧಿಕಾರಿಗಳು ಸಹಕರಿಸಿದಲ್ಲಿ, ತಿಂಗಳಿಗೆ ಒಂದು ದಿನ ತಂಡ ಸಿದ್ಧಪಡಿಸಿಕೊಂಡು ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ಕೈಗೊ ಳ್ಳುತ್ತೇವೆ’ ಎಂದು ಶಿಕ್ಷಕ ನಾಗನಗೌಡ ಪಾಟೀಲ ಹೇಳುತ್ತಾರೆ.  ನಿಂಗಪ್ಪ ಚ ವ್ವಾಣ,  ಕನಕಪ್ಪ ವಾಗ ಣಗೇರಾ ಅವರು ಕೂಡ ಇದೇ ಉದ್ದೇಶ ಹೊಂದಿದ್ದಾರೆ. 
ಭೀಮಶೇನರಾವ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT