ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ವೇತನ ನೀಡಲು ಆಗ್ರಹ

Last Updated 16 ಏಪ್ರಿಲ್ 2017, 9:46 IST
ಅಕ್ಷರ ಗಾತ್ರ

ಕುಕನೂರು:ದಿನಗೂಲಿ ನೌಕರರಿಗೆ ಅನ್ಯಾಯ ಮಾಡದಂತೆ ಹಾಗೂ ಅವರ ಪಾಲಿನ ಕನಿಷ್ಠ ವೇತನ ಪಾವತಿಸುವಂತೆ ಆಗ್ರಹಿಸಿ ಕೈಗೆ ಕಪ್ಪು ಬಟ್ಟೆ ಧರಿಸಿ ಪೌರಕಾರ್ಮಿಕರು ಹಾಗೂ ಸಂಘದ ಪದಾಧಿಕಾರಿಗಳು ಮುಖ್ಯಾಧಿಕಾರಿ ಶ್ರೀಶೈಲಗೌಡ್ರ ಸಂಕನಗೌಡ್ರ ಅವರಿಗೆ ಮನವಿ ಸಲ್ಲಿಸಿದರು.

10 ರಿಂದ 25 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆಸಲ್ಲಿಸುತ್ತಿರುವ ದಿನಗೂಲಿ ನೌಕರರನ್ನು ಬಿಟ್ಟು, ಪಟ್ಟಣ ಪಂಚಾಯಿತಿಗೆ ವಿಲೀನಗೊಂಡಾಗ ನಮ್ಮನ್ನು ಅನುಮೋದಿಸದೆ ನಂತರ ಬಂದವರಿಗೆ ಅನುಮೋದನೆ ನೀಡಿ, ನೇಮಕಾತಿ ಮಾಡಿಕೊಂಡಿದ್ದಾರೆ. ಕನಿಷ್ಠ ವೇತನ ಪಾವತಿಸದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ನೌಕರರು ತಮ್ಮ ಅಳಲು ತೊಡಿಕೊಂಡರು.

ಶಾಖೆಯ ಕಾರ್ಯದರ್ಶಿ ಶ್ರೀಕಾಂತ ಬಾರಿಗಿಡದ ಮಾತನಾಡಿ, ಸರ್ಕಾರವೇ ಕನಿಷ್ಠ ವೇತನ ನೀಡಿ ಎಂದರೂ ಮುಖ್ಯಾಧಿ ಕಾರಿ  ಹಾಗೂ ಆಡಳಿತ ಪಕ್ಷದವರೂ ಗಮನ ಹರಿಸುತ್ತಿಲ.   ತಿಂಗಳಿಗೆ ₹3  ಸಾವಿರದಿಂದ ₹5 ಸಾವಿರ ಸಂಬಳ ನೀಡುತ್ತಿದ್ದಾರೆ. ದುಬಾರಿಯಾದ ದಿನಮಾನಗಳಲ್ಲಿ ಈ ಸಂಬಳ ಪಡೆದು, ಜೀವನ ಸಾಗಿಸಲು ಸಾಧ್ಯವೆ? ಎಂದು ಪ್ರಶ್ನಿಸಿದರು.

ಏಳು ದಿನದೊಳಗೆ ಸರ್ಕಾರದ ನಿರ್ದೇಶನದ ಅನುಸಾರ ಕನಿಷ್ಠ ವೇತನ ಪಾವತಿಸದಿದ್ದರೆ ಸೇವೆ ಸ್ಥಗಿತಗೊಳಿಸಿ ಪಟ್ಟಣ ಪಂಚಾಯಿತಿ ಎದುರು ಧರಣಿ ನಡೆಸಲಾಗುವುದು  ಎಂದು ಸಂಘದ ಶಾಖೆ ಅಧ್ಯಕ್ಷೆ ಈರಮ್ಮ ಘಾಟಿ, ತಾಜು ದ್ದೀನ್ ಕೊಪ್ಪಳ, ಬಸವರಾಜ ಆರ್‍ಬೆರ ಳಿನ್, ಗುದ್ನೇಪ್ಪ ಕಾಳಿ, ಲಕ್ಷ್ಮಣ ಆಚಕೇರಿ, ಶಿವಪ್ಪ ಕಡಗತ್ತಿ, ಗುದ್ನಯ್ಯ ನಿಟ್ಟಾಲಿ, ಮುದಕಪ್ಪ ಅಣ್ಣಿಗೇರಿ, ಸುಭಾಷ ಕಾಳಿ, ಸತ್ಯವ್ವ ಚಲವಾದಿ, ದೇವಪ್ಪ ಅಣ್ಣಿಗೇರಿ, ಹುಲಿಗೇವ್ವ  , ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT