ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ವಿವಾಹ ಸಂಭ್ರಮ

Last Updated 16 ಏಪ್ರಿಲ್ 2017, 9:58 IST
ಅಕ್ಷರ ಗಾತ್ರ

ಇಂಡಿ:  ತಾಲ್ಲೂಕಿನ  ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಗುರು ಶಂಕರಲಿಂಗೇಶ್ವರ ಮಹಾರಥೋತ್ಸವ ಅಂಗವಾಗಿ ಶನಿವಾರ  ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ 36 ಜೋಡಿ ವಧೂವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಾನಿಧ್ಯ ವಹಿಸಿದ್ದ ಹಳಿಂಗಳಿಯ ಶಿವಾನಂದ ಸ್ವಾಮೀಜಿ ಮಾತನಾಡಿ, ಮಠದಲ್ಲಿ ನಡೆಯುತ್ತಿರುವ ಸರಳ ಸಾಮೂಹಿಕ ವಿವಾಹದ ಉದ್ದೇಶ ಬಡವರು ಎಂಬ ಭಾವ ದೂರ ಮಾಡುವುದಾಗಿದೆ ಎಂದರು.

ಪವಾಡ ಪುರುಷ ಸಿದ್ಧಲಿಂಗ ಮಹಾರಾಜರ ಅಮೋಘ ಶಕ್ತಿಯಿಂದ ಮಹಾನ್ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಹೇಳಿದರು.  ಬೆಳ್ಳೇರಿಯ ಬಸವಾನಂದ ಸ್ವಾಮೀಜಿ ಮಾತನಾಡಿ  ದೇಹ ಎರಡಾದರೂ ಮನಸ್ಸು ಒಂದೇ ಇರಬೇಕು ಎಂದರು. ಪ್ರೊ.ಎ.ಪಿ.ಕಾಗವಾಡಕರ ಮಾತನಾಡಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬಡವರ ಬಾಳು ಬೆಳಗಿದ ಬಂಥನಾಳ ಶಿವಯೋಗಿ ಕಾರ್ಯ ಶ್ಲಾಘನೀಯ ಎಂದರು.  ನಿಂಬಾಳದ ರಮೇಶ ರಾಠೋಡ ದಂಪತಿ ಮಾತನಾಡಿ,  ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಾವು ವಿವಾಹವಾಗಿರುವುದರಿಂದ ನಮಗೆ ಹಣದ ಉಳಿತಾಯ ಆಗಿದೆ ಎಂದರು.  ಬಸವಂತರಾಯಗೌಡ ಪಾಟೀಲ ಉದ್ಘಾಟಿಸಿದರು.

ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶ ವೃಷಭಲಿಂಗ ಸ್ವಾಮೀಜಿ, ಹರನಾಳದ ಸಂಗನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯ ಗಂಗಾಧರ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಭೀಮರಾಯ ತೇಲಿ, ರಮೇಶ ದಾಯಗೋಡೆ, ರಮೇಶಗೌಡ ಪಾಟೀಲ, ಕಲ್ಲನಗೌಡ ಬಿರಾದಾರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT