ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಗ್ರಾಮ: ಯಮಕನಮರಡಿ ಆಯ್ಕೆ

Last Updated 16 ಏಪ್ರಿಲ್ 2017, 10:27 IST
ಅಕ್ಷರ ಗಾತ್ರ

ಯಮಕನಮರಡಿ:ಬೆಳಗಾವಿ ಜಿಲ್ಲೆಯ ಯಮಕನಮರಡಿ ‘ಡಿಜಿಟಲ್ ಗ್ರಾಮ’ ಯೋಜನೆಗೆ ಎಂದು ಆಯ್ಕೆಯಾಗಿದೆ. ಇದಕ್ಕೆ ಗ್ರಾಮೀಣ ಭಾಗದ ಜನರ ಸಹಕಾರ ಅತ್ಯವಶ್ಯ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಂ ಹೇಳಿದರು.ಕೇಂದ್ರ ಸರ್ಕಾರದ ‘ಡಿಜಿಟಲ್ ಇಂಡಿಯಾ ಮಿಷನ್’ ಯೋಜನೆಯಡಿ ಎಸ್‌ಬಿಐ ವತಿಯಿಂದ 100 ಗ್ರಾಮಗಳನ್ನು ಡಿಜಿಟಲ್ ಗ್ರಾಮವನ್ನಾಗಿ ಮಾಡಲು ಸರ್ಕಾರ ಆಯ್ಕೆ ಮಾಡಿದೆ ಎಂದು ಹೇಳಿದರು.

ಅವರು ಯಮಕನಮರಡಿ ಬಿ.ಬಿ.ಹಂಜಿ ಸಮುದಾಯ ಭವನದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಸಂದರ್ಭದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಆಯೋಜಿಸಿದ್ದ ನಗದು ರಹಿತ ವಹಿವಾಟು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.‘ಯಮಕನಮರಡಿಯ ಪ್ರತಿಯೊಬ್ಬ ವ್ಯಕ್ತಿ ಎಸ್‌ಬಿ ಖಾತೆ ತೆಗೆದು, ಆಧಾರ್‌ ಸಂಖ್ಯೆ ಲಿಂಕ್ ಮಾಡಿಸಿಕೊಳ್ಳಬೇಕು. ನಗದುರಹಿತ ವ್ಯವಹಾರ ಮಾಡಲು ಸ್ವಲ್ಪ ದಿನ ಕಷ್ಟದಾಯಕವಾದರೂ, ಲೆಕ್ಕ ಪತ್ರದ ಬಗ್ಗೆ ಅರಿವು ಬರುತ್ತದೆ. ಈ ನಗದುರಹಿತ ವ್ಯವಹಾರ ಬಗ್ಗೆ ಜ್ಞಾನ ಪಡೆದವರು ಇನ್ನೊಬ್ಬರಿಗೆ ತಿಳಿ ಹೇಳಬೇಕು. ಮನೆಯಲ್ಲಿ ಹಣ ಇಟ್ಟರೆ ಅದಕ್ಕೆ ಬಡ್ಡಿ ಬರುವುದಿಲ್ಲ. ಕಳ್ಳತನಕ್ಕೆ ಅವಕಾಶವೂ ಆಗುತ್ತದೆ’ ಎಂದರು.

‘ಮುಂದಿನ ಆರು ತಿಂಗಳಲ್ಲಿ ನಗದುರಹಿತ ವಹಿವಾಟು ಆಗಬೇಕು. ವ್ಯಾಪಾರಸ್ಥರು ತಮ್ಮ ಅಂಗಡಿಗೆ ಬಂದ ಗ್ರಾಹಕರಿಗೆ ಬಯೋಮೆಟ್ರಿಕ್ ಡಿವೈಸ್‌ಗಳನ್ನು ಬಳಕೆ ಮಾಡಿ ವ್ಯವಹಾರದ ಜ್ಞಾನವನ್ನು ನೀಡಬೇಕು. ಯಾವುದೇ ರೀತಿ ಹೆಚ್ಚಿಗೆ ಹಣ ಪಡೆಯಲು ಮುಂದಾಗಬಾರದು. ಇನ್ನು ಮುಂದೆ ಬಯೋಮೆಟ್ರಿಕ್ ಡಿವೈಸ್‌ಗಳನ್ನು ರೇಷನ್ ಅಂಗಡಿಗಳಿಗೆ ಕೂಡ ನೀಡಲಾಗುವುದು’ ಎಂದರು.

ಬೆಳಗಾವಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ರಾಮಚಂದ್ರನ್ ಮಾತನಾಡಿ, ‘ಜಿಲ್ಲೆಯಲ್ಲಿ ಶೇ 93ರಷ್ಟು ಗ್ರಾಹಕರು ಆಧಾರ್‌ ಸಂಖ್ಯೆಯನ್ನು ಎಸ್‌ಬಿ ಖಾತೆಗಳಿಗೆ ನೀಡಿದ್ದಾರ. ಈಗ ಪ್ರತಿಯೊಬ್ಬ ವ್ಯಕ್ತಿಗೆ ಎಸ್‌ಬಿ ಖಾತೆ ಹಾಗೂ ಆಧಾರ್‌ ಸಂಖ್ಯೆ ಕಡ್ಡಾಯವಾಗಿದೆ. ಇದ್ದರಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದವರ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಇದ್ದರಿಂದ ಭ್ರಷಚಾರ ತಡೆಗಟ್ಟಬಹುದು’ ಎಂದರು.

ಡಿಜಿಟಲ್ ವಿಲೇಜ್ ಬಗ್ಗೆ ವಾರಕ್ಕೆ ಒಂದು ಬಾರಿ ಸ್ವಹಾಯ ಸಂಘಗಳಿಗೆ, ಗ್ರಾಪಂ ಸದಸ್ಯರಿಗೆ, ವಿದ್ಯಾರ್ಥಿಗಳಿಗೆ ಕಾರ್ಯಾಗಾರ ರೂಪಿಸಿ ಸಂಪೂರ್ಣವಾಗಿ ಯಮಕನಮರಡಿಯ ಗ್ರಾಹಕರು ನಗದು ರಹಿತ ವ್ಯವಹಾರ ಮಾಡಲು ಮುಂದಾಗಬೇಕು ಎಂದರು.ಸಭೆಯ ಅಧ್ಯಕ್ಷತೆ ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಇಂದ್ರಾಜಿ ಭಾಂಜಾ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ವ್ಯಾಪಾರಸ್ಥರಾದ ಪಾವಟೆ ಟೀ ಅಂಗಡಿ, ವೀರಭದ್ರೇಶ್ವರ ಟ್ರೇಡ್ಸ್ ಹಾಗೂ ಗಣೇಶ ಬುಕ್‌ ಸ್ಟಾಲ್ ಮಾಲೀಕರಿಗೆ ಮೊಬೈಲ್ ಹ್ಯಾಂಡ್‌ಸೆಟ್‌ಗಳು, ಬಯೋಮೆಟ್ರಿಕ್ ಡಿವೈಸ್‌ಗಳನ್ನು ಜಿಲ್ಲಾಧಿಕಾರಿ ಜಯರಾಂ ಉಚಿತವಾಗಿ ವಿತರಣೆ ಮಾಡಿದರು.

 ಹುಕ್ಕೇರಿ ತಾಪಂ ಅಧ್ಯಕ್ಷ ದಸ್ತಗೀರ ಬಸ್ಸಾಪೂರಿ, ಹತ್ತರಗಿ ಗ್ರಾಪಂ ಅಧ್ಯಕ್ಷ ಮಹಾದೇವ ಪಟೋಳಿ, ಯಮಕನಮರಡಿ ಗ್ರಾಪಂ ಉಪಾಧ್ಯಕ್ಷ ಓಂಕಾರ ತುಬಚಿ, ಹುಕ್ಕೇರಿ ತಹಶೀಲ್ದಾರ ನಾಗರಾಜ ಪಾಟೀಲ, ಪಿಡಿಒ ಜೈಮಾಲಾ, ಬಿ.ಬಿ.ಹಂಜಿ, ರವಿ ಜಿಂಡ್ರಾಳಿ, ಶಿವಾನಂದ ಗುಮಾಸ್ತೆ, ವಿ.ವಿ.ದತ್ತವಾಡಕರ ಹಾಗೂ ಸ್ವ ಸಹಾಯ ಸಂಘದ ಮಹಿಳಾ ಸದಸ್ಯರು, ಸುತ್ತಲಿನ ಗ್ರಾಮದ ಜನರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸ್ವಾಗತಿ ಗೀತೆ ಹಾಡಿದರು. ಬೆಳಗಾವಿ ಡಿಪೋಟಿ ಎಚ್ಆರ್ ಆರ್.ಕೆ. ದೇಶಪಾಂಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ಗುರುರಾಜ ಕರಜಗಿ ನಿರೂಪಿಸಿದರು. ಯಮಕನಮರಡಿ ಎಸ್‌ಬಿಐನ ಪ್ರಬಂಧಕರಾದ ಪ್ರವೀಣ ಗೋರಬಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT