ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕವೇ ಉಸಿರು: ಬಳ್ಳಾರಿ ಹೆಸರು!

Last Updated 16 ಏಪ್ರಿಲ್ 2017, 11:17 IST
ಅಕ್ಷರ ಗಾತ್ರ

ಬಳ್ಳಾರಿ: ‘ಬಳ್ಳಾರಿ ರಾಘವ’ ಅರ್ಥಾತ್‌ ‘ತಾಡಪತ್ರಿ ರಾಘವಾಚಾರ್ಯ’ ಕನ್ನಡ ಮತ್ತು ತೆಲುಗು ರಂಗಭೂಮಿ ಕ್ಷೇತ್ರದಲ್ಲಿ ವಿಶಿಷ್ಟ ಹೆಸರು.‘ಬಳ್ಳಾರಿ ರಾಘವ’ (02–08–1880:16–04–1946) ಅವರ ಪರಿ ಶ್ರಮ ವನ್ನು ಅರಿಯುವುದೆಂದರೆ, 18 ಮತ್ತು 19ನೇ ಶತಮಾನದ ಕನ್ನಡ–ತೆಲುಗು ರಂಗಭೂಮಿಯ ವಿಕಾಸದ ಚರಿತ್ರೆಯನ್ನು ಓದಿದಂತೆಯೇ! ಎರಡು ಶತಮಾನಗಳ ನಡುವಿನ ಅವಧಿಯ ರಂಗಭೂಮಿ ಚರಿತ್ರೆಯು ರಾಘವ ಅವರ ಹೆಸರಿಲ್ಲದಿದ್ದರೆ ಅಪೂರ್ಣವೇ ಸರಿ.

ಗಾಯಕ, ನಟ, ನಾಟಕಕಾರ, ವಕೀಲ, ಪತ್ರಕರ್ತ ಹೀಗೆ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ರಾಘವ ಮೊಟ್ಟಮೊದಲಿಗೆ ಒಬ್ಬ ಬದ್ಧತೆಯುಳ್ಳ ಅನನ್ಯ ನಟರಾಗಿದ್ದರು ಎಂಬುದನ್ನು ಅವ ರನ್ನು ಬಲ್ಲ ಯಾರಾದರೂ ಒಪ್ಪುತ್ತಾರೆ. ಹಿರಿಯರಲ್ಲಿ ಬಹುತೇಕರು, ಅವರ ನಟನಾ ಪ್ರತಿಭೆಯನ್ನು ಮುಂಚೂಣಿ ಯಲ್ಲಿಟ್ಟೇ ಮಾತನ್ನು ಆರಂಭಿಸುತ್ತಾರೆ,‘ಬಸಪ್ಪ’ ಎಂಬ ವ್ಯಕ್ತಿ, ಅವರ ತಂದೆ ತಾಯಿ ಪ್ರೀತಿಯಿಂದ ಇಟ್ಟ ರಾಘವ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದು ಆಕ ಸ್ಮಿಕ ಎಂಬಂತೆ ಕಂಡರೂ, ಚರಿತ್ರೆಯಲ್ಲಿ ರಾಘವ ಎಂಬ ಹೆಸರೇ ಚಿರಸ್ಥಾಯಿ ಯಾಗಿ ನಿಂತಿದೆ.

ಶಿಕ್ಷಕರಾಗಿದ್ದ ತಮ್ಮ ತಂದೆಯಿಂದಲೇ ಕನ್ನಡ, ಸಂಸ್ಕೃತ, ತೆಲುಗು, ಇಂಗ್ಲಿಷ್‌ ಅನ್ನು ಕಲಿತ ರಾಘ ಮದರಾಸಿನಲ್ಲಿ ಕಾಲೇಜು ಶಿಕ್ಷಣ ಪಡೆದವರು. ಬಾಂಬೆ ಪಾರ್ಸಿ ಥಿಯೋಟ್ರಿಕಲ್‌ ಕಂಪೆನಿ ಪ್ರದ ರ್ಶಿಸುತ್ತಿದ್ದ ನಾಟಕಗಳನ್ನು ನೋಡುವ ಅಭ್ಯಾಸದಿಂದ ಶುರುವಾದ ಅವರ ನಾಟಕ ಪ್ರೇಮ, ಇಂಗ್ಲಿಷ್‌ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಮುಂದುವರಿ ದಿತ್ತು. ಬಳ್ಳಾರಿಗೆ ಬಂದ ಬಳಿಕವೇ ಅವರು ಕನ್ನಡ–ತೆಲುಗು ರಂಗಭೂಮಿ ಯಲ್ಲಿ ಸಕ್ರಿಯರಾದರು.

ಸೋದರಮಾವ ಧರ್ಮಾವರಂ ಕೃಷ್ಣಮಾಚಾರ್ಯರು ನಡೆಸುತ್ತಿದ್ದ ‘ಸರಸ ವಿನೋದಿನಿ ಸಭಾ’ ಎಂಬ ನಾಟಕ ಕಂಪೆ ನಿಯ ಹಲವು ನಾಟಕಗಳಲ್ಲಿ ಅಭಿನಯಿ ಸಿದ ರಾಘವ, ಸಮಕಾಲೀನ ವಾಸ್ತವ ವನ್ನು ಬಿಂಬಿಸುವ ನಾಟಕಗಳನ್ನು ಆಡ ಬೇಕು ಎಂಬ ಕಾರಣದಿಂದಲೇ ಗೆಳೆಯ ರೊಂದಿಗೆ ಸೇರಿ ‘ಶೇಕ್ಸ್‌ಪ್ರಿಯರ್‌ ಕ್ಲಬ್‌’ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿದ್ದು ವಿಶೇಷ. ಕೋಲಾಚಲಂ ಶ್ರೀನಿವಾಸ ರಾಯರ ನೆರವಿನಿಂದ ‘ಸುಮನೋ ರಮಾ ಸಭಾ’ವನ್ನು ಸ್ಥಾಪಿಸಿದ್ದು, ಅವರ ಜೀವನಚರಿತ್ರೆಯನ್ನು ಬಲ್ಲವರಿಗೆ ಪ್ರಮುಖ ಘಟನೆಗಳು.
‘ಸತ್ಯವಾನ ಸಾವಿತ್ರಿ’ಯ ‘ಯಮ’, ‘ಭಕ್ತ ಪ್ರಹ್ಲಾದ’ ನಾಟಕದ ‘ಹಿರಣ್ಯ ಕಶಿಪು‘, ‘ವಿಜಯನಗರ ಸಾಮ್ರಾಜ್ಯ ಪತನಂ’ ನಾಟಕದ ‘ಪಠಾಣ ರುಸ್ತುಂ’ ಪಾತ್ರಗಳನ್ನು ರಾಘವ ಅವರು ಅಭಿನಯಿ ಸಿದ್ದನ್ನು ಹಿರಿಯರು ಸಂಭ್ರಮದಿಂದ ಉಲ್ಲೇಖಿಸುತ್ತಾರೆ. ‘ಚಂಡಿಕಾ’, ‘ರೈತು ಬಿಡ್ಡ’, ‘ತಪ್ಪೆ ವರದಿ’, ‘ದ್ರೌಪದಿ ಮಾನೆ ಸಂರಕ್ಷಣ’ ಹೆಸರಿನ ಸಿನಿಮಾನಗಳಲ್ಲೂ ರಾಘವ ನಟಿಸಿದ್ದರು. ಅವರ ನಟನೆಯ ಪ್ರತಿಭಾ ವಿಲಾಸವನ್ನು ದಾಖಲಿಸುವ ಕನ್ನಡ, ತೆಲುಗು ಮತ್ತು ಇಂಗ್ಲಷಿನ ನೂರಾರು ಪಾತ್ರಗಳುಂಟು.

ರಾಘವ ಮತ್ತು ಜೋಳದರಾಶಿ ದೊಡ್ಡನಗೌಡರ ನಡುವಿನ ಗುರು–ಶಿಷ್ಯ ಸಂಬಂಧ ದ್ವಿಭಾಷಿಕ ನಾಟಕ ಚರಿತ್ರೆ ಯಲ್ಲಿ ಮತ್ತೊಂದು ಪ್ರಮುಖ ಅಧ್ಯಾಯ ಎನ್ನಬಹುದು.
ಲಂಡನ್ನಿನಲ್ಲಿ ಬರ್ನಾಡ್‌ ಶಾ ಅವ ರನ್ನು ರಾಘವ ಸಂದರ್ಶಿಸಿದ್ದು ಅವರ ಜೀವನ ಬಹುಮುಖ್ಯ ಘಟನೆ. ‘ಮರ್ಚಂಟ್‌ ಆಫ್‌ ವೆನ್ನಿಸ್‌’ ನಾಟಕದಲ್ಲಿ ರಾಘವರ ಅಭಿನಯವನ್ನು ಕಂಡು ಪ್ರಭಾವಿತರಾಗಿದ್ದ ಶಾ, ‘ಶೇಕ್ಸ್‌ಪ್ರಿಯರ್‌ಗೆ ತಕ್ಕ ನಟ’ ಎಂದು ಶ್ಲಾಘಿಸಿದ್ದರಂತೆ!

ಕೊನೆಯ ಉಸಿರು ಇರುವವರೆಗೂ ರಾಘವ ರಂಗಭೂಮಿಯನ್ನೇ ಬದುಕಾಗಿ ಸಿಕೊಂಡಿದ್ದರು. ಅವರ ಹೆಸರಿನಲ್ಲಿ 1964ರಲ್ಲಿ ಸ್ಥಾಪನೆಯಾದ, ರಾಘವ ಮೆಮೋರಿಯಲ್‌ ಅಸೋಸಿಯೇಶನ್‌ನ ಆಡಳಿತದಲ್ಲಿರುವ ‘ರಾಘವ ಕಲಾ ಮಂದಿರ’ದಲ್ಲೇ ಭಾನುವಾರ ರಂಗ ತೋರಣ ಸಂಸ್ಥೆಯು 71ನೇ ಪುಣ್ಯ ಸ್ಮರಣೆ ಪ್ರಯುಕ್ತ ರಾಜೇಂದ್ರ ಕಾರಂತ ಅವರ ‘ಸಂಜೆ ಹಾಡು’ ನಾಟಕ ಪ್ರದ ರ್ಶವನ್ನು ಏರ್ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT