ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಲಸಂಗಮ ಸಂಗಮೇಶ್ವರ ಜಾತ್ರೆ ಇಂದಿನಿಂದ

Last Updated 16 ಏಪ್ರಿಲ್ 2017, 11:20 IST
ಅಕ್ಷರ ಗಾತ್ರ

ಕೂಡಲಸಂಗಮ: ದಕ್ಷಿಣ ಕಾಶಿ ಎಂದೇ ನಾಡಿನಾದ್ಯಂತ ಪ್ರಸಿದ್ದಿಹೊಂದಿದ ಕೂಡಲಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವವು ಇದೇ 16 ರಂದು ಸಂಭ್ರಮದಿದಂದ ಜರುಗು ವುದು ಕರ್ನಾಟಕದ ಬೃಹತ್ ಜಾತ್ರೆಗಳಲ್ಲಿ ಇದು ಸಹ ಒಂದಾಗಿರುವುದು.ಈ ಜಾತ್ರೆಗೆ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುವರು.

ಸಂಗಮೇಶ್ವರ ದೇವಾಲಯವು ಕೃಷ್ಣ ಮಲಪ್ರಭೆಯ ಸಂಗಮದ ಸ್ಥಾನದಲ್ಲಿ ಇದೇ ಈ ದೇವಾಲಯವನ್ನು 9ನೇ ಶತಮಾನದಲ್ಲಿ ಚಾಲಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ಶಾಸನದಲ್ಲಿ ಉಲ್ಲೇಖವಿದೆ 1997ರಲ್ಲಿ ಸರ್ಕಾರ ಕೂಡಲಸಂಗಮ ಅಭಿವೃದ್ದಿ ಮಂಡಳಿ ಯನ್ನು ಸ್ಥಾಪಿಸುವುದರ ಮೂಲಕ ಈ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಿ ಅಂತರಾಷ್ಟ್ರೀಯ ಪ್ರವಾಸಿತಾಣ ವನ್ನಾಗಿ ಮಾಡಿತು ಅದರ ಫಲವಾಗಿ ಇಂದು ನಿತ್ಯ ಸಾವಿರಾರು ಪ್ರವಾಸಿಗರು ಈ ಕ್ಷೇತ್ರ ವೀಕ್ಷಿಸಲು ಬರುವರು.

ಕೂಡಲಸಂಗಮದ ಸಂಗಮನಾಥನ ಜಾತ್ರೆಯು ಪ್ರತಿ ವರ್ಷ ಚೈತ್ರ ಮಾಸದ ಬಹುಳ ಪಕ್ಷದಲ್ಲಿ ನಡೆಯುವುದು. ಸಂಗಮೇಶ್ವರ ರಥಕ್ಕೆ ಬಂಗಾರ ಲೇಪವುಳ್ಳ ಭವ್ಯವಾದ  ಕಳಸವನ್ನು ಮಾಡಿಸಿಕೊಟ್ಟವರು ಅಮರಾವತಿಯ ದೇಸಾಯಿಯವರು ಈ ಮೊದಲು ಕಳಸವು ಜಾತ್ರೆ ಒಂದು ದಿವಸ ಮೊದಲು ಅಮರಾವತಿಯಿಂದಲೇ ಬರುತ್ತಿತ್ತು ಎಂದು ಹೇಳಲಾಗುತ್ತದೆ.

ಸದ್ಯ ಈ ಬಂಗಾರದ ಕಳಸವನ್ನು ಬಾಗಲಕೋಟೆಯಿಂದ ಮೆರವಣಿಗೆಯಲ್ಲಿ ಪಾದಯಾತ್ರೆ ಮೂಲಕ ಸಂಗಮಕ್ಕೆ ಬರುವುದು.  ಹಳ್ಳೂರ, ಬೇವೂರ, ಭಗವತಿ, ಕಿರಸೂರು, ಮಲ್ಲಾಪುರ ಮುಂತಾದ ಗ್ರಾಮದ ಜನರು ಪೂಜೆ ಯನ್ನು ಮಾಡಿ ಜಾತ್ರೆಗೆ ಕಳು ಹಿಸಿಕೊಡು ತ್ತಾರೆ. ಕೂಡಲಸಂಗಮಕ್ಕೆ ಬಂದ ಕಳಸ ಅಗಸಿಯ ಹತ್ತಿರ ಇರುವ ಹಾಳಕೇರಿ ಯವರ ಕಳಸದ ಕಟ್ಟೆಯ ಮೇಲೆ     ಇಡ ಲಾಗುವುದು.  ಸಾಯಂಕಾಲ 5 ಗಂಟೆಯ ವರೆಗೆ ಭಕ್ತರು ಬಂದು ಕಳಸದ ದರ್ಶನ ಪಡೆಯುವರು ನಂತರ ಸಂಗಮೇಶ್ವರ ದೇವಾಲಯಕ್ಕೆ ಹೋಗಿ ಪೂಜೆಯನ್ನು ಮಾಡಿ ರಥವನ್ನು ಸಂಜೆ 5:30 ಗಂಟೆಗೆ ಎಳೆಯವರು ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.

ಸಂಗಮೇಶ್ವರ ಜಾತ್ರೆಯ ನಿಮಿತ್ತ ಕೂಡಲಸಂಗಮ ಅಬಿವೃದ್ದಿ ಮಂಡಳಿ  ದೇವಾಲಯದ ಆವರಣದಲ್ಲಿ ಬೆಳಿಗೆ 10 ರಿಂದ ರಥೋತ್ಸವದವರೆಗೆ ಭಜನಾ ಹಾಗೂ ಕರಡಿ ಮಜಲು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಭಜನಾ ಕಾರ್ಯ ಕ್ರಮದಲ್ಲಿ ಕೂಡಲಸಂಗಮದ ಗೂಳಿ ಬಸವೇಶ್ವರ ಭಜನಾಮಂಡಳಿ, ಚೌಡಕಮಲದಿನ್ನಿಯ ಮಾರುತೇಶ್ವರ ಭಜನಾ ಮಂಡಳಿ, ಗಂಗೂರದ ಭಜನಾ ಮಂಡಳಿ, ಕೆಲೂರದ ಬಸವೇಶ್ವರ ಭಜನಾ ಮಂಡಳಿ, ಹುಲ್ಲೂರದ ರಾಮ ಲಿಂಗೇಶ್ವರ ಭಜನಾ ಮಂಡಳಿ, ಕೂಡಲ ಸಂಗಮದ ವಿಜಯ ಮಂಹಾತೇಶ್ವರ ಭಜನಾ ಮಂಡಳಿ, ಪಾಪನಾಳದ ಪಾಪೇಶ್ವರ ಭಜನಾ ಮಂಡಳಿ, ಕೂಡಲ ಸಂಗಮದ ಗ್ರಾಮಸ್ಥರಿಂದ ಕರಡಿ ಮಜಲು, ಬ್ಯಾಂಡ್ ಸೆಟ್, ಭಜಂತ್ರಿಯ ವರಿಂದ ವಾದ್ಯವಾದನ, ಬೆಳಗಲ್, ಗಂಜಿಹಾಳ, ಇದ್ದಲಗಿ ಕಲಾ ತಂಡದವರಿಂದ ವಾದ್ಯ ವೃಂದ ಕಾರ್ಯಕ್ರಮ ನಡೆಯುವುದು.

ಬೆಳಗ್ಗೆ 7:30 ರಿಂದ 8:30ರ ವರೆಗೆ ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ರಂಗೋಲಿ ಸ್ಪರ್ಧೆ ನಡೆಯುವುದು. ರಥೋತ್ಸವದ ನಂತರ ಶಿವಮೊಗ್ಗದ ನಾಟ್ಯ ಶ್ರೀ ಯಕ್ಷಗಾನ ಕಲಾ ತಂಡದ ದತ್ತಮೂರ್ತಿಭಟ್ಟ  ನಿರ್ದೇಶನದ ಬಸವ ಯಕ್ಷಗಾನದ 200ನೇ ಪ್ರದರ್ಶನ  ಸಂಜೆ 6:30 ರಿಂದ 7:30ರ ವರೆಗೆ ನಡೆಯು ವುದು  ರಾತ್ರಿ  8 :30ಕ್ಕೆ ಮುರಗೋಡದ ಸಂಜು ಬಸ್ಯಾ ಹಾಗೂ ಗೋಕಾಕದ ಪ್ರವೀಣಕುಮಾರ ಗಸ್ತಿಯವರಿಂದ ಕಾಮಿಡಿ ಕಿಲಾಡಿಗಳು ಕಾರ್ಯ ನಡೆ ಯುವುದು.
ಕೂಡಲಸಂಗಮದ ಸಂಗಮೇಶ್ವರ ಜಾತ್ರೆಗೆ ವಿವಿಧ ರಾಜ್ಯಗಳಿಂದ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಿದ್ದು, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ  ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಮಹಾ ದೇವ ಮುರಗಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT