ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಣುಪು ಚರ್ಮಕ್ಕೆ ಬೆಣ್ಣೆ ಹಣ್ಣು

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ತ್ವಚೆಗೆ ಹೊಳಪು– ನುಣುಪು ಎರಡು ಮುಖ್ಯ. ಹಣ್ಣುಗಳಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಚರ್ಮ ನುಣುಪಾಗಲು ಬೆಣ್ಣೆಹಣ್ಣು ಬಳಸಬಹುದು. ಚರ್ಮದ ಅನೇಕ ಸಮಸ್ಯೆಗಳಿಗೆ ಬೆಣ್ಣೆಹಣ್ಣು ಉತ್ತಮ ಔಷಧ.

*ಸಾಮಾನ್ಯ ತ್ವಚೆಗೆ ಮೊಸರು ಮತ್ತು ಬೆಣ್ಣೆಹಣ್ಣಿನ ತಿರುಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಫೇಸ್‌ಪ್ಯಾಕ್ ಹಾಕಬಹುದು.

*ಚರ್ಮದಲ್ಲಿ ಜಿಡ್ಡಿನ ಅಂಶ ಹೆಚ್ಚಾಗಿದ್ದರೆ ಐದು ಚಮಚ ಮೊಸರು, ಎರಡು ಚಮಚ ಬೆಣ್ಣೆಹಣ್ಣಿನ ತಿರುಳು, ಎರಡು ಚಮಚ ಜೇನು, ಒಂದು ಚಮಚ ದಾಲ್ಚಿನ್ನಿ ಪುಡಿ ಮಿಶ್ರಣ ಮಾಡಿ ಸ್ಕ್ರಬ್‌ನಂತೆ ಬಳಸಬಹುದು.

*ಒಣ ಚರ್ಮ ಇರುವವರು ಹಸಿ ಹಾಲು 3 ಚಮಚ, ಕೊಬ್ಬರಿ ಎಣ್ಣೆ ಒಂದು ಚಮಚ, ಬೆಣ್ಣೆಹಣ್ಣಿನ ತಿರುಳು ಐದು ಚಮಚ ಮಿಶ್ರಣ ಮಾಡಿ ಹಚ್ಚಬಹುದು.

*ಬೆಣ್ಣೆಹಣ್ಣು ಮತ್ತು ಬಾದಾಮಿಯನ್ನು ಹಾಲಿನೊಂದಿಗೆ ಮಿಕ್ಸಿಯಲ್ಲಿ ರುಬ್ಬಿಕೊಂಡು  ಮುಖಕ್ಕೆ ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ.

*ಬೆಣ್ಣೆಹಣ್ಣು, ಟೊಮೆಟೊ ರಸದ ಮಿಶ್ರಣವನ್ನು ಮುಖ, ಕತ್ತಿಗೆ ಹಚ್ಚಿ ಅದು ಒಣಗಿದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಹೀಗೆ ವಾರಕ್ಕೊಮ್ಮೆ ಮಾಡುವುದರಿಂದ ಕಪ್ಪುಕಲೆಗಳು ಕಡಿಮೆಯಾಗುತ್ತವೆ.
(ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT