ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಹಿರಿಯಜ್ಜಿ 117ನೇ ವಯಸ್ಸಿನಲ್ಲಿ ನಿಧನ

Last Updated 16 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ರೋಮ್‌ :  ವಿಶ್ವದ ಅತಿ ಹಿರಿಯ ವ್ಯಕ್ತಿ, ಇಟಲಿಯ 117 ವರ್ಷದ ಮಹಿಳೆ ಎಮ್ಮಾ ಮೊರಾನೊ ಅವರು ಶನಿವಾರ ನಿಧನರಾಗಿದ್ದಾರೆ.
1899ರ ನವೆಂಬರ್ 29ರಂದು ಜನಿಸಿದ್ದ ಅವರು ಉತ್ತರ ಇಟಲಿಯ ವರ್ಬೆನಿಯಾದ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

‘ಅವರು ಅಸಾಧಾರಣ ಜೀವನ ನಡೆಸಿದ್ದಾರೆ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’  ಎಂದು ಗ್ರಾಮದ ಮೇಯರ್ ಸಿಲ್ವಿಯಾ ಮರ್ಚಿಯೊನಿನಿ ತಿಳಿಸಿದ್ದಾರೆ.
‘ನನ್ನ ಆಹಾರ ಸೇವನಾ ಪದ್ಧತಿಯಿಂದಾಗಿಯೇ ಇಷ್ಟು ದೀರ್ಘಾವಧಿ ಜೀವಿಸಲು ಸಾಧ್ಯವಾಗಿದೆ’ ಎಂದು ಕಳೆದ ವರ್ಷ ನೀಡಿದ್ದ ಸಂದರ್ಶನವೊಂದರಲ್ಲಿ ಮೊರಾನೊ ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT