ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನದ ಆಶಯ ಕಾಪಾಡಿ’

Last Updated 17 ಏಪ್ರಿಲ್ 2017, 5:45 IST
ಅಕ್ಷರ ಗಾತ್ರ
ಸಿಂಧನೂರು: ದೇಶಪ್ರೇಮದ ಹೆಸರಲ್ಲಿ ಫ್ಯಾಸಿಸಂ ಸಂಸ್ಕೃತಿ ತಲೆ ಎತ್ತುತ್ತಿದ್ದು, ಬಹುತ್ವವನ್ನು ನಾಶ ಪಡಿಸುವ ಹುನ್ನಾರ ನಡೆದಿದೆ. ಕಾರಣ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಮುಂದಾಗಬೇಕಿದೆ ಎಂದು ಸಾಹಿತಿ ಪೀರಬಾಷಾ ಅಭಿಪ್ರಾಯಪಟ್ಟರು.
 
ನಗರದ ಮಿಲಾಪ್ ಶಾದಿ ಮಹಲ್‌ನಲ್ಲಿ ವೆಲ್‌ಫೇರ್‌ ಪಾರ್ಟಿ ಆಫ್ ಇಂಡಿಯಾ ತಾಲ್ಲೂಕು ಘಟಕದಿಂದ ಶನಿವಾರ  ಹಮ್ಮಿಕೊಂಡಿದ್ದ ‘ಫ್ಯಾಸಿಸಂ ವಿರುದ್ಧ ಪ್ರಜಾಪ್ರಭುತ್ವದ ಪ್ರತಿರೋಧ’  ಕುರಿತ ವಿಚಾರ ಸಂಕಿರಣದಲ್ಲಿ  ಅವರು ಮಾತನಾಡಿದರು.
 
ದೇಶದ ಐಕ್ಯತೆ ಉಳಿಯಬೇಕಾದರೆ ಸೌಹಾರ್ದತೆ ಉಳಿಯಬೇಕು. ಸಂವಿಧಾನದ ಮೂಲ ತತ್ವಗಳು ಅನುಷ್ಠಾನಗೊಂಡರೆ ಸೌಹಾರ್ದತೆ ಉಳಿಯುತ್ತದೆ ಎಂದರು. 
 
ಎಮ್ಮಿಗನೂರು ಉಪನ್ಯಾಸಕ ಡಾ.ಲಿಂಗಣ್ಣ ಜಂಗಮರಹಳ್ಳಿ ಮಾತ ನಾಡಿದರು. ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಶೇಖ್ ಫರೀದ ಉಮರಿ ಮಾನವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಂಕರ ಗುರಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
 
ಅಬ್ದುಲ್‌ಗನಿ ವಕೀಲ, ಬಸವಕೇಂದ್ರದ ತಾಲ್ಲೂಕು ಘಟಕದ ಅಧ್ಯಕ್ಷ ಗುಂಡಪ್ಪ ಬಳಿಗಾರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಿಗಿ, ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾ ಖಾದ್ರಿ, ಪ್ರಗತಿಶೀಲ ಚಿಂತನಾ ವೇದಿಕೆ ಅಧ್ಯಕ್ಷ ಶಂಕರ ವಾಲೇಕಾರ್, ನಿರು ಪಾದೆಪ್ಪ ಗುಡಿಹಾಳ ವಕೀಲ,   ಜಗದೀಶ, ರಬ್ಬಾನಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT