ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಉಪಕರಣಗಳ ಮೇಲೆ ಬಿಸಿಲು ಪರಿಣಾಮ

Last Updated 17 ಏಪ್ರಿಲ್ 2017, 5:53 IST
ಅಕ್ಷರ ಗಾತ್ರ
ರಾಯಚೂರು: ಏರುತ್ತಿರುವ ತಾಪಮಾನವು ಮನೆ, ಕಚೇರಿ ಹಾಗೂ ವಿವಿಧೆಡೆ ಬಳಸುವ ವಿದ್ಯುತ್‌ ಉಪಕರಣಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಅವುಗಳ ದುರಸ್ತಿದಾರರಿಗೆ ಬೇಡಿಕೆ ಹೆಚ್ಚಾಗಿದೆ.
 
ತಂಪು ಗಾಳಿಗಾಗಿ ಎಲ್ಲ ಕಡೆಗೂ ಬಳಸುವ ಏರ್‌ ಕೂಲರ್‌ ಅಥವಾ ಏರ್‌ ಕಂಡಿಷನ್‌ (ಎಸಿ) ಬಿಡಿಭಾಗಗಳು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗುತ್ತಿವೆ. ಕೂಲರ್‌ ಮತ್ತು ಫ್ಯಾನ್‌ಗಳನ್ನು ಎತ್ತಿಕೊಂಡು ಜನರು ದುರಸ್ತಿದಾರರ ಮಳಿಗೆಯತ್ತ ಧಾವಿಸುವ ನೋಟ ಅಲ್ಲಲ್ಲಿ ಈಗ ಸಾಮಾನ್ಯವಾಗಿ ಕಂಡು ಬರುತ್ತಿದೆ.
 
ಕೂಲರ್‌ಗಳಲ್ಲಿ ಪ್ಯಾನೇಲ್‌ ಬದಲಿಸುವುದು, ನೀರು ಹರಡುವ ಕೊಳವೆ ಸರಿಪಡಿಸುವುದು, ಕೂಲರ್‌ ಫ್ಯಾನ್‌, ಗಾಳಿ ಸೂಸುವ ಪಂಪ್‌ ಸರಿಪಡಿಸುವ ಕೆಲಸದಲ್ಲಿ ದುರಸ್ತಿದಾರರು ಮಗ್ನರಾ ಗಿರುವುದು ಮಾರುಕಟ್ಟೆ ಮತ್ತು ಪ್ರಮುಖ ರಸ್ತೆಗಳಲ್ಲಿ ಕಾಣಬಹುದು.
 
ದುರಸ್ತಿದಾರರನ್ನು ಮನೆಗೆ ಕರೆಸಿಕೊಂಡು ವಿದ್ಯುತ್‌ ಉಪಕರಣ ಸರಿಪಡಿಸಿಕೊಳ್ಳುವುದು ಹೆಚ್ಚು ರೂಢಿಯಲ್ಲಿದೆ. ಮನೆಗೆ ಕರೆಸಿದರೆ ಹೆಚ್ಚು ಹಣ ಕೊಡಬೇಕಾಗುತ್ತದೆ ಎನ್ನುವ ಕಾರಣದಿಂದಲೂ ಕೆಲವರು ಉಪಕರಣ ಹೊತ್ತುಕೊಂಡು ದುರಸ್ತಿ ಮಳಿಗೆಗೆ ನೇರ ಹೋಗುತ್ತಾರೆ.
 
ಮಳಿಗೆಗೆ ಹೋದರೆ ಬೇಗನೆ ದುರಸ್ತಿಯಾಗುತ್ತದೆ ಎನ್ನುವ ನಿರೀಕ್ಷೆಯಿಂದಲೂ ಹೋಗುತ್ತಾರೆ. ಉಪಕರಣಗಳ ಗ್ಯಾರಂಟಿ ಅಥವಾ ವಾರಂಟಿ ಇದ್ದರೂ ದುರಸ್ತಿಗಾಗಿ ಕನಿಷ್ಠ ₹100 ಕೊಡಲೇ ಬೇಕಾಗುತ್ತದೆ. 
 
ಹಾನಿಯಾಗುವ ಉಪಕರಣಗಳು: ನಗರದ ಎಲ್ಲ ಕೆಳ ಮಧ್ಯಮ ಮತ್ತು ಮಧ್ಯಮ ವರ್ಗ, ಶ್ರೀಮಂತರ ಮನೆಗಳಲ್ಲಿ ಟಿವಿ, ಫ್ಯಾನ್‌ಗಳು ಮತ್ತು ಕೂಲರ್‌ಗಳಿವೆ.  ಶ್ರೀಮಂತರಷ್ಟೆ ಮನೆ ಮತ್ತು ಕಚೇರಿಗಳಲ್ಲಿ ಹವಾ ನಿಯಂತ್ರಕ (ಎಸಿ) ಅಳವಡಿಸಿದ್ದಾರೆ. ಬೇಸಿಗೆ ಯಲ್ಲಿ ಧಗೆಯಿಂದ ಪಾರಾಗಲು ಕೂಲರ್‌, ಎಸಿ ಹಾಗೂ ಫ್ಯಾನ್‌ ಗಳು ಹಗಲಿರುಳು ಉರಿಯುತ್ತವೆ. ಇದರಿಂದ ಉಪಕರಣಗಳ ಕಾರ್ಯದಕ್ಷತೆ ಕ್ರಮೇಣ ಕಡಿಮೆಯಾಗುತ್ತದೆ. 
***
ಇವೆಲ್ಲ ಇರಲೇ ಬೇಕು!
ನಗರದ ಪ್ರತಿ ಮನೆಯಲ್ಲೂ ಜೀವನಮಟ್ಟಕ್ಕೆ ತಕ್ಕಂತೆ ಬಿಸಿಲಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ವಿದ್ಯುತ್‌ ಉಪಕರಣಗಳಿವೆ. ಬಡವರ ಮನೆಗಳಲ್ಲಿ ಕನಿಷ್ಠ ಒಂದು ಫ್ಯಾನ್‌, ಕೆಳ ಮಧ್ಯಮವರ್ಗದ ಮನೆಗಳಲ್ಲಿ ಕೂಲರ್‌ ಮತ್ತು ಫ್ಯಾನ್‌ಗಳು, ಮಧ್ಯಮ ವರ್ಗದವರ ಮನೆಗಳಲ್ಲಿ ಕೂಲರ್‌, ಫ್ಯಾನ್‌ಗಳು ಮತ್ತು ಪ್ರೀಜ್ ಹಾಗೂ ಶ್ರೀಮಂತರ ಮನೆ ಮತ್ತು ಕಚೇರಿಗಳಲ್ಲಿ ಎಸಿಗಳಿವೆ.
***
ಭರ್ಜರಿ ಮಾರಾಟ
ಬೇಸಿಗೆಯಲ್ಲಿ ಕೂಲರ್‌, ಪ್ರೀಜ್‌ ಹಾಗೂ ಫ್ಯಾನ್‌ಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ನಗರದ ಪ್ರತಿಯೊಂದು ಎಲೆಕ್ಟ್ರಾನಿಕ್ಸ್‌ ಮಳಿಗೆಯಲ್ಲಿ ಜನಸಂದಣಿ ಸಾಮಾನ್ಯ ನೋಟ. ಪ್ರತಿದಿನ ಲಾರಿಗಟ್ಟಲೆ ಹೊಸ ಉಪಕರಣಗಳು ನಗರಕ್ಕೆ ಮಾರಾಟಕ್ಕೆ ಬರುತ್ತವೆ. ಬ್ರ್ಯಾಂಡೆಡ್‌ ಕಂಪೆನಿಗಳ ಮಳಿಗೆಗಳು ಸಾಕಷ್ಟಿವೆ. ಅಲ್ಲದೆ ಬಿಸಿಲಿನಿಂದ ರಕ್ಷಣೆ ಪಡೆಯಲು ಜನರು ಸ್ಥಳೀಯವಾಗಿ ತಯಾರಿಸಿದ ಕೂಲರ್‌ಗಳ ಮೊರೆ ಹೊಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT