ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಿ ಮಲ್ಲಯ್ಯನಿಗೆ ಅದ್ಧೂರಿ ಸ್ವಾಗತ

Last Updated 17 ಏಪ್ರಿಲ್ 2017, 6:39 IST
ಅಕ್ಷರ ಗಾತ್ರ

ಮಹಾಲಿಂಗಪುರ: ಸುಕ್ಷೇತ್ರ ಶ್ರೀಶೈಲ ದಿಂದ ಪಾದಯಾತ್ರೆಯ ಮೂಲಕ ಮರಳಿ ಬಂದ ಕಂಬಿ ಮಲ್ಲಯ್ಯನಿಗೆ ಹಾಗೂ ಪಾದಯಾತ್ರಿಕರಿಗೆ ರವಿವಾರ ಮುಂಜಾನೆ ಸಂಭ್ರಮದ ಸ್ವಾಗತ ನೀಡ ಲಾಯಿತು.ಪಟ್ಟಣದ ಸಾವಿರಾರು ಭಕ್ತರು ಮುಧೋಳ ರಸ್ತೆಯ ಮಲ್ಲಿಕಾರ್ಜುನ ನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಂಬಿಗಳಿಗೆ ಪೂಜೆ ಸಲ್ಲಿಸಿ ನೆನೆಗಡಲಿ, ಬೆಲ್ಲ ಮತ್ತು ಶಾವಿಗೆಯ ನೈವೇದ್ಯ ನೀಡಿ ಕೃತಾರ್ಥ ಭಾವ ಹೊಂದಿದರು.

ಮಹಾಲಿಂಗೇಶ್ವರ ಮಠದಿಂದ ನಂದಿಕೋಲು, ಕರಡಿ ವಾದ್ಯಗಳ ಮೇಳದೊಂದಿಗೆ ಮಲ್ಲಿಕಾರ್ಜುನ ದೇವ ಸ್ಥಾನಕ್ಕೆ ಬಂದ ಮಹಾಲಿಂಗೇಶ್ವರ ಶಿವ ಯೋಗಿ ರಾಜೇಂದ್ರ ಶ್ರೀಗಳು ಕಂಬಿ ಮಲ್ಲಯ್ಯನಿಗೆ ಪೂಜೆ ಸಲ್ಲಿಸಿದರು. ನಂತರ ಕರಡಿ ಮಜಲು, ನಂದಿಕೋಲು ವಾದ್ಯಗಳ ಮೇಳಗಳೊಂದಿಗೆ ಮೆರ ವಣಿಗೆ ಮೂಲಕ ಸಂಪ್ರದಾಯದಂತೆ ಸ್ಮಶಾನದಲ್ಲಿ ಹಾಯ್ದು ಚನ್ನಗಿರೀಶ್ವರ ದೇವಸ್ಥಾನಕ್ಕೆ ಕರೆತರಲಾಯಿತು. ಮುಂಜಾನೆ 10 ರಿಂದ ಸಂಜೆ 7ರವರೆಗೆ  ಚನ್ನಗಿರೀಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಮಲ್ಲಯ್ಯನಿಗೆ ಪೂಜೆ ಸಲ್ಲಿಸಿದರು.

ಸಂಜೆ 6ಕ್ಕೆ ಚನ್ನಗಿರೀಶ್ವರ ದೇವ ಸ್ಥಾನದಿಂದ ಮಹಾಲಿಂಗೇಶ್ವರ ದೇವ ಸ್ಥಾನದವರೆಗೆ ಮೆರವಣಿಗೆ ಮೂಲಕ ಬಂದು ಮಹಾಲಿಂಗೇಶ್ವರ ಮಠದಲ್ಲಿ ಕಂಬಿ ಮಲ್ಲಯ್ಯನನ್ನು ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ನಡೆಸಲಾಯಿತು. ಬರುವ ಗುರುವಾರ ಏ.20ರಂದು ಐದೇಶಿ ಆಚರಣೆಯೊಂದಿಗೆ ಕಂಬಿ ಮಲ್ಲಯ್ಯನ ಶ್ರೀಶೈಲ ಪಾದಯಾತ್ರಾ ಮಹೋತ್ಸವ ಮಂಗಲಗೊಳ್ಳುವದು.ಮಲ್ಲಿಕಾರ್ಜುನ ನಗರದ ನಿವಾಸಿಗಳು ಶ್ರೀಶೈಲದಿಂದ ಬಂದ ಪಾದಯಾತ್ರಿಗಳು ಮತ್ತು ಅವರ ಸ್ವಾಗತಕ್ಕೆ ಆಗಮಿಸಿದ ಸುಮಾರು 10 ಸಾವಿರಕ್ಕಿಂತ ಅಧಿಕ ಭಕ್ತರಿಗೆ ಶಿರಾ, -ಉಪ್ಪಿಟ್ಟು ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT