ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆಯಲ್ಲಿ ನಿರ್ವಹಣೆ ಕೊರತೆ

Last Updated 17 ಏಪ್ರಿಲ್ 2017, 7:25 IST
ಅಕ್ಷರ ಗಾತ್ರ

ಬಳ್ಳಾರಿ: ಐತಿಹಾಸಿಕ ಪ್ರಸಿದ್ಧ ‘ಬಳ್ಳಾರಿ ಕೋಟೆ’ ಕುರಿತಾದ ಸಂಕ್ಷಿಪ್ತ ಮಾಹಿತಿ ಉಳ್ಳ ಇತಿಹಾಸವು ಇಲ್ಲಿನ ಕೋಟೆ ಪ್ರದೇಶದಲ್ಲಿರುವ ಕೋಟೆ ಪ್ರವೇಶ ದ್ವಾರದ ಬಳಿ ಇರುವ ನಾಮಫಲಕದಲ್ಲಿ ಮರೀಚಿಕೆಯಾಗಿದೆ!ಈ ಕೋಟೆಯ ಪ್ರವೇಶದ್ವಾರ ಪ್ರವೇ ಶಿಸುತ್ತಿದ್ದಂತೆಯೇ ಟಿಕೇಟ್ ಕೌಂಟರ್ ಮುಂಭಾಗದಿಂದ ತೆರಳುವ ಎಲ್ಲ ಪ್ರವಾಸಿ ಗರಿಗೆ ಈ ಎರಡೂ ನಾಮಫಲಕಗಳು ಕೋಟೆಯ ಕುರಿತ ಮಾಹಿತಿ ನೀಡುತ್ತವೆ. ಆದರೆ ಬಿಸಿಲಿನ ಝಳಕ್ಕೆ ಸಿಲುಕಿ ನಾಮ ಫಲಕಗಳಲ್ಲಿದ್ದ ಮಾಹಿತಿ ಭಾಗಶಃ ಅಳಿಸಿ ಹೋಗಿದೆ. ಕೇವಲ ಅರ್ಧಂಬರ್ಧ ಅಕ್ಷರಗಳು ಕಾಣುತ್ತಿವೆ.

ಆ ಕೋಟೆಯ ವಿಸ್ತೀರ್ಣ, ಸುತ್ತಳತೆ ಹಾಗೂ ಮೇಲ್ಭಾಗದಲ್ಲಿರುವ ಬೃಹದಾ ಕಾರದ ಒಂದು ಏಕಶಿಲಾ ದೀಪಸ್ತಂಭ ಗಳಿರುವ ಕಲಾಕೃತಿಗಳು, ಸುತ್ತಲಿನ 4 ದಿಕ್ಕುಗಳಲ್ಲಿರುವ ಕೋಟೆಯ ವಿಶೇಷತೆ ಹಾಗೂ ಮೆಟ್ಟಿಲುಗಳ ಕುರಿತ ಮಾಹಿತಿ ನಾಮಫಲಕಗಳಲ್ಲಿ ಲಭ್ಯವಿರುತ್ತಿತ್ತು. ಅದರಲ್ಲಿನ ಮಾಹಿತಿಯನ್ನು ಪ್ರವಾಸಿಗರು ಓದಿಕೊಂಡು ಕೋಟೆ ವಿಶೇಷತೆಯನ್ನು ತಿಳಿಯುತ್ತಿದ್ದರು. ಆದರೆ, ನಾಮಫಲಕ ಗಳಲ್ಲಿನ ಮಾಹಿತಿಯು ಸಂಪೂರ್ಣವಾಗಿ ಹರಿದುಹಂಚಿ ಹೋಗಿದ್ದರಿಂದ ಪ್ರವಾಸಿ ಗರಿಗೆ ತೊಂದರೆ ಉಂಟಾಗಿದೆ ಎಂದು ಶಿಕ್ಷಕ ಪಂಪನಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೀಣ: ಕೋಟೆಯ ನಿರ್ವಹಣೆ ಕಾರ್ಯ ಸಮರ್ಪಕವಾಗಿ ಇಲ್ಲದಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸಿದೆ. ಬೆಳಗಿನಜಾವ ವಾಯು ವಿಹಾರಿಗಳಷ್ಟೇ ಕೋಟೆಗೆ ಪ್ರತಿದಿನ ಭೆಟ್ಟಿಕೊಡುತ್ತಾರೆ. ಮತ್ಯಾರು ಕೋಟೆಯತ್ತ ಸುಳಿಯುವು ದಿಲ್ಲ. ಬಿರು ಬೇಸಿಗೆ ಎದುರಾಗಿದ್ದರಿಂದ ಬೆಳಗಿನಜಾವ ಮಾತ್ರ ಕೋಟೆಯನ್ನು ಏರಿ ಇಳಿಯಲು ಆಗುತ್ತದೆ. ಮತ್ಯಾವ ಸಮಯ ದಲ್ಲೂ ಕೋಟೆಯತ್ತ ಸುಳಿಯಲು ಸಾರ್ವ ಜನಿಕರು ಮನಸ್ಸು ಮಾಡುವುದಿಲ್ಲ ಎಂದು ತಾಳೂರು ರಸ್ತೆಯ ನಿವಾಸಿ ನಾಗ ಭೂಷಣ ‘ಪ್ರಜಾವಾಣಿ’ಗೆ ತಿಳಿಸಿದರು.

ಸೂಕ್ತ ಭದ್ರತೆಯಿಲ್ಲ: ಕೋಟೆ ಪ್ರದೇಶದ ಸಂರಕ್ಷಣೆಗೆ ಸೂಕ್ತ ಭದ್ರತೆಯನ್ನೂ ಕಲ್ಪಿಸಿಲ್ಲ. ಬಿರು ಬೇಸಿಗೆಯಿಂದ ಬೆಳಗಿನ ಜಾವ ಟಿಕೇಟ್ ಪಡೆಯದೆ, ಮೇಲೆ ಏರುವ ವಾಯುವಿಹಾರಿಗಳು ಕ್ಷಣಾರ್ಧ ದಲ್ಲಿ ಅಲ್ಲಿಂದ ವಾಪಾಸ್ ಮರಳುತ್ತಾರೆ. ವಾಯುವಿಹಾರಿಗಳ ಪ್ರವೇಶದ ವೇಳೆ, ಟಿಕೇಟ್ ವಿತರಣೆ ಕೇಂದ್ರದ ಸೇವೆ ಇನ್ನೂ ಆರಂಭ ಆಗಿರುವುದಿಲ್ಲ. ಅದು ಬೆಳಿಗ್ಗೆ 8.30ಕ್ಕೆ ಆರಂಭವಾಗಲಿದೆ. ಆಗೊಮ್ಮೆ, ಈಗೊಮ್ಮೆ ಬರುವ ಪ್ರವಾಸಿಗರು ಟಿಕೇಟ್ ಪಡೆಯದೆ, ಕೋಟೆ ಪ್ರದೇಶ ಸುತ್ತಾಡಿ ಕೊಂಡು ಸರಾಗವಾಗಿ ಹೋಗುತ್ತಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿ ರಾರು ರೂಪಾಯಿ ನಷ್ಟವಾಗಿದೆ ಎಂದು ದೂರುತ್ತಾರೆ ಅವರು.

ರಹದಾರಿ: ಕೋಟೆ ಸುತ್ತಲೂ ರಹದಾರಿ ಹುಟ್ಟಿಕೊಂಡಿವೆ. ಪ್ರವಾಸಿಗರು ಪ್ರವೇಶ ದ್ವಾರದಿಂದಲೇ ಅತ್ಯಂತ ಸರಾಗವಾಗಿ ಬೆಟ್ಟವನ್ನು ಏರಿಳಿದು ಹೋಗುವುದು ಒಂದೆಡೆಯಾದರೆ, ಮತ್ತೊಂದೆಡೆ ಅಲ್ಲಲ್ಲಿ ರಹದಾರಿಗಳು ಹುಟ್ಟಿಕೊಂಡಿವೆ. ಸುತ್ತ ಲಿನ ನಿವಾಸಿಗಳು ರಹದಾರಿಯಿಂದ ಏರಿ ಳಿಯುವುದು ಸಾಮಾನ್ಯವಾಗಿದೆ. ಇದ ರಿಂದ ಬೆಟ್ಟದಲ್ಲಿ ಅನೈತಿಕ ಚಟುವಟಿಕೆ ಗಳು ಜಾಸ್ತಿಯಾಗಿವೆ. ಕೋಟೆಯ ಮೆಟ್ಟಿ ಲುದ್ದಕ್ಕೂ ಮದ್ಯದ ಬಾಟಲ್ ಮತ್ತು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಗಾಂಧಿನಗರ ನಿವಾಸಿ ಶಿವ ಕುಮಾರ್ ದೂರಿದರು.

ದುಬಾರಿ ಶುಲ್ಕ: ಕೋಟೆ ವೀಕ್ಷಣೆಗೆಂದು ಪ್ರತಿಯೊಬ್ಬ ಪ್ರವಾಸಿಗರಿಗೆ ಈ ಮೊದಲು ₹ 5 ಪ್ರವೇಶ ಶುಲ್ಕವನ್ನು ನಿಗದಿಪಡಿಸ ಲಾಗಿತ್ತು. ಆದರೆ, ಸದ್ಯ ₹ 15ಕ್ಕೆ ಹೆಚ್ಚಿಸ ಲಾಗಿದೆ. ಈ ಟಿಕೇಟ್‌ನಲ್ಲಿ ವಿತರಣೆ ದಿನಾಂಕ ಅಥವಾ ಸಮಯ ನಮೂದಾ ಗಿರುವುದಿಲ್ಲ. ಪ್ರವಾಸಿಗರ ಸಂಖ್ಯೆಯೇ ಕ್ಷೀಣಿಸಲು ಈ ಅವೈಜ್ಞಾನಿಕ ದುಬಾರಿ ಶುಲ್ಕ ಕೂಡ ಕಾರಣವಾಗಿದೆ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT