ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಾಲ್ಲೂಕು ಕಚೇರಿ ಆರಂಭಕ್ಕೆ ಮಾಹಿತಿ

Last Updated 17 ಏಪ್ರಿಲ್ 2017, 7:28 IST
ಅಕ್ಷರ ಗಾತ್ರ

ಗುಳೇದಗುಡ್ಡ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ಮಂಡಿಸಿದ ಬಜೆಟ್‌ನಲ್ಲಿ ನೂತನ ಹೊಸ ತಾಲ್ಲೂಕು ಘೋಷಣೆ ಮಾಡಿದ್ದು. ಅವುಗಳಲ್ಲಿ ಜಿಲ್ಲೆಯಲ್ಲಿ ಘೋಷಣೆಯಾದ  ಮೂರು ತಾಲ್ಲೂಕುಗಳ ಕಾರ್ಯಾರಂಭ ಮಾಡುವ ಸಲುವಾಗಿ ಸರ್ಕಾರಿ ಕಚೇರಿ ಒಂದಡೆ ಕಾರ್ಯ ನಿರ್ವಹಿಸಲು ಅವಶ್ಯವಿರುವ ಸೂಕ್ತ ಜಾಗ, ಕಟ್ಟಡದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಅಪರ ಜಿಲ್ಲಾಧಿ ಕಾರಿಗಳು ಆಯಾ ವಿಭಾಗದ ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸರ್ಕಾರಿ ಕಚೇರಿ ಒಂದಡೆ ನೆಲೆ ಗೊಳ್ಳಲು ಸರ್ಕಾರಿ ಕಟ್ಟಡವಿದ್ದಲ್ಲಿ ಕಚೇರಿ ಗಳನ್ನು ಆರಂಭಿಸಲು ಪಿಠೋಪಕರಣ ಗಳ ಜೋಡಣೆಗಳಿಗೆ ಎಷ್ಷು ಮೊತ್ತ ತಗುಲಲಿದೆ. ಒಂದು ವೇಳೆ ಸರ್ಕಾರಿ ಕಟ್ಟಡ ಲಭ್ಯವಿಲ್ಲದಿದ್ದಲ್ಲಿ ಬಾಡಿಗೆ ಕಟ್ಟಡ ದಲ್ಲಿ ಕಚೇರಿ ಕಾರ್ಯಾರಂಭಕ್ಕೆ ತಗಲುವ ಮೊತ್ತವೆಷ್ಟು ಹಾಗೂ ಸರ್ಕಾರಿ ಕಟ್ಟಡ ಮತ್ತು  ಖಾಸಗಿ ಕಟ್ಟಡದಲ್ಲಿ ಸರ್ಕಾರಿ ಕಚೇರಿಗಳಿಗೆ ಪಿಠೋಪಕರಣಗಳ ಜೋಡಣೆಗಳಿಗೆ ತಗಲುವ ಮತ್ತು ಅಗತ್ಯ ಮೂಲ ಸೌಲಭ್ಯ ಒದಗಿಸಲು ಮೊತ್ತವೆಷ್ಟು, ಸರ್ಕಾರಿ ಕಚೇರಿ ಒಂದೇ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲು ಬೇಕಾಗುವ ಸೂಕ್ತವಾದ ಜಾಗ ಸಹ ಗುರುತಿಸುವುದು ಹಾಗೂ ನಾಗರಿಕರ ಅಹವಾಲು ಸ್ವೀಕರಿಸಿ ಈ ಎಲ್ಲ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕೂಡಲೇ ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಒಂದು ವಾರದೊಳಗಾಗಿ ಎಲ್ಲವು ಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT