ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ಪ್ರದೇಶ ಸುಧಾರಣಾ ಯೋಜನೆ: ಕಾಮಗಾರಿ ಕಳಪೆ

Last Updated 17 ಏಪ್ರಿಲ್ 2017, 7:45 IST
ಅಕ್ಷರ ಗಾತ್ರ

ಬೀರೂರು: ಪಟ್ಟಣದ ಎರಡು ವಾರ್ಡ್‌ ಗಳಲ್ಲಿ ತಲಾ ₹15ಲಕ್ಷ ವೆಚ್ಚದಲ್ಲಿ ನಡೆದಿರುವ ಕೊಳಚೆ ಪ್ರದೇಶ ಸುಧಾ ರಣಾ ಯೋಜನೆಯ ಕಾಮಗಾರಿಗಳು ಕಳಪೆಯಾಗಿವೆ ಎಂಬ ದೂರು ಬಂದಿ ದ್ದರಿಂದ ಪುರಸಭಾಧ್ಯಕ್ಷೆ ಸವಿತಾ ರಮೇಶ್‌, ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರ ತಂಡ ಶನಿವಾರ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದವು.
ಪಟ್ಟಣದ ವಾರ್ಡ್‌ ನಂ.13 ಬೋವಿಕಾಲೊನಿಯ ದುರ್ಗಮ್ಮ ದೇವಾಲಯದ ಬಳಿ ಸಂಗ್ರಹಿಸಲಾಗಿದ್ದ ಸುಧಾರಿತ ಎಂ.ಸ್ಯಾಂಡ್‌ ಬದಲಿನ ಜಲ್ಲಿ ಡಸ್ಟ್‌ ಮತ್ತು ಚರಂಡಿಯ ತಳಕ್ಕೆ ಹಾಕಲಾಗಿದ್ದ ಸುಮಾರು 2 ಇಂಚು ದಪ್ಪದ ದಪ್ಪ ಜಲ್ಲಿಯ ಕಾಂಕ್ರೀಟ್‌ ಕಾಮಗಾರಿ ಕಳಪೆಯಾಗಿರುವುದನ್ನು ಹೇಳುತ್ತಿದ್ದವು.

ಕಾಮಗಾರಿ ಪಟ್ಟಿಯ ಪ್ರಕಾರ ಚರಂಡಿಯ ತಳಕ್ಕೆ ಕಬ್ಬಿಣ ಕಟ್ಟಿ, 6 ಇಂಚು ಅಳತೆಗೆ ಕಾಂಕ್ರೀಟ್‌ ಹಾಕ ಬೇಕಿತ್ತು, ಸೈಡ್‌ವಾಲ್‌ಗೆ ಕನಿಷ್ಠ ಮೂರಾ ದರೂ ಕಬ್ಬಿಣ ಸರಳು ಅಳವಡಿಸಿದ ಪಟ್ಟಿ ಇರಬೇಕಿತ್ತು. ಆದರೆ ಗುಣಮಟ್ಟ ಪರಿ ಶೀಲಿಸಲು ಬಂದಿದ್ದ ತಂಡಕ್ಕೆ ತಳಪಾ ಯಕ್ಕೆ ಎರಡು ಇಂಚು ಕಾಂಕ್ರೀಟ್‌, ಸೈಡ್‌ವಾಲ್‌ಗೆ ಮಾತ್ರ ಅಳವಡಿಸಿದ್ದ ಎರಡು ಸರಳು ಅಳವಡಿಸಿದ ಪಟ್ಟಿ ಕಂಡುಬಂತು.

‘ಗಾರೆ ಕೆಲಸ ಮಾಡುವ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಇಲ್ಲಿನ ಜನರನ್ನು ಕೇಳಿದರೆ ಕ್ಯೂರಿಂಗ್‌ ಮಾಡಿಲ್ಲ, ಓಟ ಸರಿ ಇಲ್ಲ, ಕಾಂಕ್ರೀಟ್‌ ಕೂಡಾ ಕಳಪೆ, ಏನಾದರೂ ಹೇಳಲು ಹೋದರೆ ಗುತ್ತಿಗೆದಾರರ ಕಡೆಯವರು ನಮಗೇನು ಹೇಳುತ್ತೀಯಾ? ಎನ್ನುತ್ತಾರೆ. ಕಾಮಗಾರಿ ಕಳಪೆ ಆದರೆ ಅದರ ಪಡಿಪಾಟಲು ಅನುಭವಿಸುವವರು ನಾವು’ ಎಂದು ಅಳಲು ತೋಡಿಕೊಂಡರು.

ವಾರ್ಡ್‌ ನಂ.5ರ ಸರಸ್ವತೀಪುರಂ ಬಡಾವಣೆಯ ಸ್ಮಶಾನದ ಬಳಿಯ ಕಾಮಗಾರಿಯೂ ಇದಕ್ಕೆ ಹೊರತಾಗಿ ಇರಲಿಲ್ಲ. ಚರಂಡಿ ನೀರು ಹರಿದು ಬರುತ್ತಿರುವಲ್ಲಿಯೇ ಮುಂದುವರೆದ ಕಾಮಗಾರಿಯಾಗಿ ಸೈಡ್‌ವಾಲ್‌ಗೆ ಕಬ್ಬಿಣ ಅಳವಡಿಸಿ ಕೆಲಸ ಆರಂಭಿಸಲು ತಯಾರಿ ನಡೆದಿತ್ತು. ಈ ಹಂತದಲ್ಲಿ ಸ್ಥಳಕ್ಕೆ ಬಂದ ತಂಡಕ್ಕೆ ಸುಮಾರು ಭಾಗ ಮುಗಿದಿದ್ದ ಕಾಮಗಾರಿಯೂ ಕಳಪೆ ಎಂದು ಅರಿವಾಗಿತ್ತು.

ಳಕ್ಕೆ ಬಂದ ಕೊಳಚೆ ನಿರ್ಮೂಲನಾ ಮಂಡಳಿಯ ಸಹಾಯಕ ಎಂಜಿನಿಯರ್‌ ಯಶವಂತ್‌, ‘ ಇಲ್ಲಿ ಕಾಮಗಾರಿ ಆರಂಭಿಸಿರುವುದೇ ನನ್ನ ಗಮನಕ್ಕೆ ಬಂದಿಲ್ಲ, ನನ್ನ ಗಮನಕ್ಕೆ ಬಂದ ತಕ್ಷಣ ಇಲ್ಲಿ ಬಂದು ಪರಿಶೀಲನೆ ನಡೆಸಿ ಕಾಮಗಾರಿ ತಡೆದು, ಡಸ್ಟ್‌ ಬದಲು ಎಂ.ಸ್ಯಾಂಡ್‌ ಬಳಸುವಂತೆ ಮತ್ತು ತಳಕ್ಕೆ ಎರಡು ಸರಳು ಹಾಗೂ ಸೈಡ್‌ವಾಲ್‌ಗೆ ತಲಾ ಮೂರು ಸರಳು ಅಳವಡಿಸಲು ಸೂಚಿಸಿ ಖುದ್ದು ಕಬ್ಬಿಣ ಕಟ್ಟಿಸಿ ಹೋಗಿದ್ದೇನೆ. ಈಗಾಗಲೇ ಮುಗಿದಿರುವ ಕಾಮಗಾರಿ ಕಳಪೆ ಎಂದು ಕಂಡುಬಂದರೆ ಹೊಸದಾಗಿ ಕಾಮಗಾರಿ ನಿರ್ವಹಿಸುವಂತೆ ಸೂಚಿಸುತ್ತೇನೆ, ಹೊರೆ ಗುತ್ತಿಗೆದಾರನ ಮೇಲೆಯೇ ಬೀಳಲಿದೆ’ ಎಂದರು.

‘ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಎಸ್‌.ರಮೇಶ್‌ ಮಾತನಾಡಿ, ಹೊರರಾಜ್ಯಗಳ ಗುತ್ತಿಗೆದಾರರು ಬಂದು ನಡೆಸಿರುವ ಸಣ್ಣನೀರಾವರಿ ಇಲಾಖೆ, ಎಪಿಎಂಸಿ ಕಾಮಗಾರಿ, ಕೊಳಚೆ ನಿರ್ಮೂಲನಾ ಮಂಡಳಿ ಕಾಮಗಾರಿ ಗಳು ಕಳಪೆಯಾಗಿವೆ. ಬೀರೂರಿನ ಕಾಮಗಾರಿಗಳನ್ನು ಚನ್ನರಾಯಪಟ್ಟಣ ಮೂಲದ ವ್ಯಕ್ತಿ ನಡೆಸಿದ್ದು ಈತನ ಬಗ್ಗೆ ಈಗಾಗಲೇ ಹಲವು ಆರೋಪಗಳಿವೆ. ಕಳಪೆ ಕಾಮಗಾರಿಗಳ ಕುರಿತು, ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜ ನವಾಗಿಲ್ಲ, ಹೀಗಾಗಿ ಸಂಗ್ರಹಿಸಿರುವ ದಾಖಲೆಗಳೊಂದಿಗೆ ಎಸಿಬಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಲಾಗು ವುದು. ಜನರ ತೆರಿಗೆ ಹಣ ಕಳಪೆ ಕಾಮಗಾರಿಯಲ್ಲಿ ಸೋರಿಕೆ ಯಾಗುವುದು ಸಲ್ಲದು’ ಎಂದರು.ಪುರಸಭಾ ಉಪಾಧ್ಯಕ್ಷೆ ನಿರ್ಮಲಾರಾಜು, ಸದಸ್ಯ ಲೋಕೇಶಪ್ಪ, ಪಾಪಣ್ಣ, ಪುರಸಭೆಯ ಶೇಷಪ್ಪ, ಯೋಗೀಶ್‌, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇದ್ದರು.ಪ್ರಜಾವಾಣಿ ವಾರ್ತೆ

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT