ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ವ್ಯಾಪ್ತಿಯಲ್ಲಿ ಮಲೇರಿಯಾ ಇಳಿಮುಖ

Last Updated 17 ಏಪ್ರಿಲ್ 2017, 7:48 IST
ಅಕ್ಷರ ಗಾತ್ರ

ಮಂಗಳೂರು: ಮಳೆಗಾಲ ಆರಂಭವಾ ಗುತ್ತಿದ್ದಂತೆಯೇ ಮಲೇರಿಯಾ ಮಹಾ ಮಾರಿಯಿಂದ ಜಿಲ್ಲೆಯ ಜನರು ತತ್ತರಿ ಸುತ್ತಾರೆ. ಪ್ರತಿ ವರ್ಷ ಮಳೆಗಾಲ ಶುರುವಾಗುತ್ತಿದ್ದಂತೆಯೇ ಮಲೇರಿಯಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಇನ್ನಿಲ್ಲದ ಕಸರತ್ತು ಆರಂಭಿಸುತ್ತದೆ. ಇದೀಗ ಮಳೆಗಾಲಕ್ಕೂ ಮುನ್ನವೇ ಮಲೇರಿಯಾ ನಿಯಂತ್ರಣಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ, ನಗರ ವ್ಯಾಪ್ತಿಯಲ್ಲಿ ಮೇ 27ರವರೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ವಾಣಿಜ್ಯ, ಶೈಕ್ಷಣಿಕ ಚಟುವಟಿಕೆಗಳಿ ಗಾಗಿ ಜಿಲ್ಲೆಯ ಜನರು ಮಂಗಳೂರನ್ನೇ ಅವಲಂಬಿಸಿದ್ದು, ಹೊರ ಜಿಲ್ಲೆಗಳ ಕಾರ್ಮಿಕರೂ, ಕೆಲಸ ಅರಸಿ ಮಂಗಳೂರಿಗೆ ಬರುತ್ತಾರೆ. ಅದರಲ್ಲೂ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿಯೇ ಬಹುಪಾಲು ಕಾರ್ಮಿಕರು ದುಡಿಯುತ್ತಿದ್ದಾರೆ. ನಿರ್ಮಾಣ ಹಂತದ ಕಟ್ಟಡದಲ್ಲಿ ನೈರ್ಮಲ್ಯದ ಕೊರತೆಯಿಂದಾಗಿ ಮಲೇರಿಯಾ ಹೆಚ್ಚಳ ಆಗುತ್ತಿದೆ ಎನ್ನುವ ಮಾತುಗಳು ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಕೇಳಿ ಬರುತ್ತಿವೆ. ಹೀಗಾಗಿ ಮಲೇರಿಯಾ ನಿಯಂತ್ರಿಸಲು, ನಿರ್ಮಾಣ ಹಂತದ ಕಟ್ಟಡಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಇಲಾಖೆ ಮುಂದಾಗಿದೆ.

6 ತಿಂಗಳಲ್ಲಿ ನಗರ ವ್ಯಾಪ್ತಿಯಲ್ಲಿ ಮಲೇರಿಯಾ ನಿಯಂತ್ರಣ ಕ್ಕಾಗಿ ಹಲವಾರು ಕ್ರಮ ಕೈಗೊಳ್ಳ ಲಾಗಿದ್ದು, ಇದರಿಂದ ಮಲೇರಿಯಾ ಪ್ರಕರಣಗಳ ಸಂಖ್ಯೆ ಶೇ 46 ರಷ್ಟು ಕಡಿಮೆಯಾಗಿದೆ. ಮಳೆಗಾಲದ ನಂತರ ಪ್ರಥಮ ಬಾರಿಗೆ ಮಲೇರಿಯಾ ರೋಗಿ ಗಳ ಸಂಖ್ಯೆಯಲ್ಲಿ ಇಷ್ಟೊಂದು ಪ್ರಮಾ ಣದಲ್ಲಿ ಇಳಿಕೆ ಯಾಗಿರುವುದು ಸಾಧನೆಯೇ ಸರಿ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

₹2.40 ಲಕ್ಷ ದಂಡ: ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯಾಚರಣೆ ಪಾಲಿಕೆಯ ಅಧಿ ಕಾರಿಗಳು ನಿರಂತರವಾಗಿ ನಡೆಸುತ್ತಿ ದ್ದಾರೆ. ಹಲವೆಡೆ ದಾಳಿ ನಡೆಸಿದ್ದು, ನೈರ್ಮಲ್ಯ ಕಾಪಾಡದ ಸುಮಾರು 30 ಪ್ರಕರಣಗಳಲ್ಲಿ ₹42.40 ಲಕ್ಷ ದಂಡ ವಸೂಲಿ ಮಾಡಲಾಗಿದೆ.‘ನಾನು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಅನೇಕ ಬಾರಿ ನಿರ್ಮಾಣ ಹಂತದ ಕಟ್ಟಡಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇನೆ. ಈ ಸಂದರ್ಭದಲ್ಲಿ ಗುತ್ತಿಗೆ ದಾರರಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಅದಾಗ್ಯೂ ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಲಾಗಿದೆ’ ಎಂದು ಈಗ ಮೇಯರ್‌ ಹುದ್ದೆ ಆಗಿರುವ ಕವಿತಾ ಸನಿಲ್‌ ಹೇಳುತ್ತಾರೆ.

ಮಲೇರಿಯಾ ನಿಯಂತ್ರಣಕ್ಕೆ ಪಾಲಿಕೆ ವತಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿಕಿತ್ಸಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ಬಾವಿಗಳಲ್ಲಿ ಗಪ್ಪಿ ಮೀನುಗಳನ್ನು ಬಿಡುವ ಅಭಿಯಾನ ನಡೆಸಲಾಗಿದೆ.ಉಚಿತ ಮಲೇರಿಯಾ ರೋಗ ಪತ್ತೆ ಮತ್ತು ಚಿಕಿತ್ಸಾ ಘಟಕಗಳ ಸಂಖ್ಯೆಯನ್ನು 7 ರಿಂದ 15 ಕ್ಕೆ ಹೆಚ್ಚಿಸಲಾಗಿದೆ. ಇದರ ಜತೆಗೆ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ತೆರೆಯಲಾಗಿರುವ ಆರೋಗ್ಯ ಕೇಂದ್ರಗಳನ್ನು ಮಲೇರಿಯಾ ನಿಯಂತ್ರಣ ಘಟಕದೊಂದಿಗೆ ಸಂಯೋ ಜಿಸಿದ್ದು, ಮಲೇರಿಯಾ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಲಾಗಿದೆ.

ನಗರ ವ್ಯಾಪ್ತಿಯ 11,747 ಬಾವಿ ಗಳ ಸಮೀಕ್ಷೆ ನಡೆಸಿ, ಗಪ್ಪಿ ಮೀನು ಬಿಡುವ ಅಭಿಯಾನವನ್ನು ನಡೆಸಲಾಗಿದೆ. ಈ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಗರ ವ್ಯಾಪ್ತಿಯ ಎಲ್ಲ ಪ್ರಯೋಗಾಲ ಯಗಳು ಮಲೇ ರಿಯಾ ಪ್ರಕರಣಗಳ ವರದಿಯಲ್ಲಿ ಸಾಫ್ಟ್‌ ವೇರ್‌ ಮೂಲಕ ಮಾಡುತ್ತಿದ್ದು, ಶೇ 70ಕ್ಕೂ ಅಧಿಕ ಪ್ರಕರ ಣಗಳು 48 ಗಂಟೆಯೊಳಗೆ ಪಾಲಿಕೆಗೆ ವರದಿಯಾ ಗುತ್ತಿವೆ. ಹೀಗಾಗಿ ತಕ್ಷಣವೇ ರೋಗಿಗಳ ಪತ್ತೆಗೆ ಅನುಕೂಲವಾಗಿದೆ.

ಚಿಕಿತ್ಸಾ ವಾಹನ:  ಮಲೇರಿಯಾ ನಿಯಂ ತ್ರಣಕ್ಕಾಗಿ ಇನ್ನೊಂದು ಹೆಜ್ಜೆ ಮುಂದಿ ಟ್ಟಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಗವಾಹಕ ಆಶ್ರಿತ ರೋಗಗಳ ನಿಯಂ ತ್ರಣ ಇಲಾಖೆಗಳು, ರೋಗಿಗಳ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಿವೆ.‘ನಿರಂತರ ಸೇವೆಯಲ್ಲಿರುವ ಈ ವಾಹನವು, ರೋಗಿಗಳ ಮನೆ ಬಾಗಿಲಿಗೆ ಬರಲಿದ್ದು, ಉಚಿತ ರೋಗ ಪತ್ತೆ ಮತ್ತು ಚಿಕಿತ್ಸಾ ಸೌಲಭ್ಯ ನೀಡಲಿದೆ.  ಸಾರ್ವಜ ನಿಕರು ಮೊ.ಸಂ. 9448556872 ಇಲ್ಲಿಗೆ ಕರೆ ಮಾಡಿ, ಸೌಲಭ್ಯ ಪಡೆಯಬ ಹುದಾಗಿದೆ’ ಎಂದು ಜಿಲ್ಲಾ ರೋಗವಾ ಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿ ಕಾರಿ ಡಾ. ಅರುಣ್‌ಕುಮಾರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT