ಅಜಾನ್‌ನಿಂದ ನಿದ್ರೆಗೆ ಅಡಚಣೆ!

ನಾನು ಮುಸ್ಲಿಂ ಅಲ್ಲದಿದ್ದರೂ ಬೆಳಗಿನ ಪ್ರಾರ್ಥನಾ ಸಮಯಕ್ಕೆ ಏಳಲೇ ಬೇಕು: ಗಾಯಕ ಸೋನು ನಿಗಮ್‌

ಈ ರೀತಿಯ ಒತ್ತಾಯ ಪೂರ್ವಕ ಧಾರ್ಮಿಕತೆ ಭಾರತದಲ್ಲಿ ಯಾವತ್ತಿಗೆ ಕೊನೆಯಾಗುತ್ತದೆ...

ನಾನು ಮುಸ್ಲಿಂ ಅಲ್ಲದಿದ್ದರೂ ಬೆಳಗಿನ ಪ್ರಾರ್ಥನಾ ಸಮಯಕ್ಕೆ ಏಳಲೇ ಬೇಕು: ಗಾಯಕ ಸೋನು ನಿಗಮ್‌

ಮುಂಬೈ: ತಾನು ಮುಸ್ಲಿಂ ಅಲ್ಲದಿದ್ದರೂ ಬೆಳಗ್ಗಿನ ಪ್ರಾರ್ಥನಾ ಸಮಯಕ್ಕೆ ಏಳಬೇಕಿದೆ. ಇಂಥ ಒತ್ತಾಯ ಪೂರ್ವಕ ಧಾರ್ಮಿಕ ಆಚರಣೆ ಭಾರತದಲ್ಲಿ ಯಾವತ್ತಿಗೆ ಕೊನೆಯಾಗಲಿದೆ ಎಂದು ಹಾಡುಗಾರ ಸೋನು ನಿಗಮ್‌ ಟ್ವೀಟ್‌ ಮಾಡಿದ್ದಾರೆ.

ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾ ಹಾಗೂ ಆಲ್ಬಮ್‌ಗಳಲ್ಲಿ ಹಾಡಿರುವ ಜನಪ್ರಿಯ ಗಾಯಕ ಸೋನು ನಿಗಮ್‌ ಅವರ ಬೆಳ್ಳಂಬೆಳಗಿನ ಟ್ವೀಟ್‌ ವಿವಾದ ಸೃಷ್ಟಿಸಿದ್ದು, ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ. ನಾನು ಮುಸ್ಲಿಂ ಅಲ್ಲ ಹಾಗೂ ನಾನು ಬೆಳಗಿನ ಅಜಾನ್‌ ಹೊತ್ತಿಗೆ ಏಳಬೇಕು. ಈ ರೀತಿಯ ಒತ್ತಾಯ ಪೂರ್ವಕ ಧಾರ್ಮಿಕತೆ ಭಾರತದಲ್ಲಿ ಯಾವತ್ತಿಗೆ ಕೊನೆಯಾಗುತ್ತದೆ’ ಎಂಬುದು ಮೊದಲ ಟ್ವೀಟ್‌.

‘ಮೊಹಮ್ಮದ್‌ ಅವರು ಇಸ್ಲಾಂ ಧರ್ಮ ಪ್ರಾರಂಭಿಸಿದಾಗ ವಿದ್ಯುತ್‌ ಸಂಪರ್ಕವಿರಲಿಲ್ಲ....ಎಡಿಸನ್‌ ನಂತರ ಈ ಕೂಗುವುದು ಯಾಕಿರಬೇಕು?’

‘ಆ ಧರ್ಮವನ್ನು ಅನುಸರಿಸುತ್ತಿಲ್ಲದ್ದವರನ್ನು ಯಾವುದೇ ದೇವಾಲಯ ಅಥವಾ ಗುರುದ್ವಾರಗಳು ವಿದ್ಯುತ್‌ ಬಳಸಿ ಎಚ್ಚರಿಸುತ್ತಿವೆ ಎನ್ನಲಾಗದು.... ’ ಎಂದು ಸರಣಿ ಟ್ವೀಟ್‌ ಮಾಡಿದ್ದಾರೆ.

ನೆಚ್ಚಿನ ಗಾಯಕನ ಈ ಟ್ವೀಟ್‌ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ವಧರ್ಮಗಳಿರುವ ಸಮಾಜದಲ್ಲಿ ಸಹನೆ ವಹಿಸುವುದು ಮುಖ್ಯ ಎಂದು ಒಬ್ಬರು ಟ್ವೀಟ್‌ ಮಾಡಿದರೆ. ಮತ್ತೊಬ್ಬರು ಅಜಾನ್‌ ಸೇರಿದಂತೆ ಇತರೆ ಪ್ರಾರ್ಥನೆಗಳಲ್ಲಿ ಧ್ವನಿವರ್ಧಕಗಳ ಬಳಕೆ ಮಾಡುವುದರ ವಿರುದ್ಧ ಅಭಿಯಾನ ಪ್ರಾರಂಭಿಸಲು ಸಿದ್ಧ ಎಂದು ಟ್ವೀಟಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಪುಲ್ವಾಮ ಎನ್‌ಕೌಂಟರ್‌ನಲ್ಲಿ ಉಗ್ರ ಬರ್ಹಾನ್‌ ವಾನಿ ಉತ್ತರಾಧಿಕಾರಿ ಸಬ್ಜರ್‌ ಭಟ್‌ ಸಾವು

ಎಂಟು ಉಗ್ರರ ಬಲಿ
ಪುಲ್ವಾಮ ಎನ್‌ಕೌಂಟರ್‌ನಲ್ಲಿ ಉಗ್ರ ಬರ್ಹಾನ್‌ ವಾನಿ ಉತ್ತರಾಧಿಕಾರಿ ಸಬ್ಜರ್‌ ಭಟ್‌ ಸಾವು

27 May, 2017
ಎಲ್ಲ 125 ಕೋಟಿ ಜನರಿಗೆ ಉದ್ಯೋಗ ನೀಡಲಾಗದು: ಅಮಿತ್‌ ಷಾ

ಸ್ವ ಉದ್ಯೋಗಕ್ಕೆ ಸರ್ಕಾರ ಒತ್ತು
ಎಲ್ಲ 125 ಕೋಟಿ ಜನರಿಗೆ ಉದ್ಯೋಗ ನೀಡಲಾಗದು: ಅಮಿತ್‌ ಷಾ

27 May, 2017
ಶ್ರೀನಗರ: ಗಡಿಯಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ
ಶ್ರೀನಗರ: ಗಡಿಯಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

27 May, 2017

ಬೆಂಗಳೂರು
ಎಸ್‌ಪಿಗೆ ₹ 10,000 ದಂಡ

‘ದಂಡದ ಮೊತ್ತವನ್ನು ಈಶ್ವರಪ್ಪ ಅವರ ಮೇ ತಿಂಗಳ ವೇತನದಲ್ಲಿ  ವಸೂಲು ಮಾಡಿ ಆಯೋಗದ ಖಾತೆಗೆ ಪಾವತಿಸಿ’ ಎಂದು  ಡ್ಯೆಪ್ಯೂಟಿ ಇನ್‌ಸ್ಪೆಕ್ಟರ್‌ ಜನರಲ್ (ಡಿಐಜಿ) ಅವರಿಗೆ...

27 May, 2017
ವಿರೋಧ ಪಕ್ಷಗಳಿಂದ ಕಾದು ನೋಡುವ ತಂತ್ರ

ನವದೆಹಲಿ
ವಿರೋಧ ಪಕ್ಷಗಳಿಂದ ಕಾದು ನೋಡುವ ತಂತ್ರ

27 May, 2017