ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹವೆಂಬೊ ಅದ್ಭುತ ಯಂತ್ರ

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಅಚ್ಚರಿಯನ್ನು ಎಲ್ಲೆಲ್ಲೋ ಹುಡುಕುವ ಮೊದಲು ನಿಮ್ಮ ದೇಹ ನೋಡಿಕೊಳ್ಳಿ. ನಮ್ಮ ದೇಹ ಅದೆಂಥ ಅದ್ಭುತ ಯಂತ್ರ ನೀವೇ ಬೆರಗಾಗುವಿರಿ.

* ಪ್ರಪಂಚದಲ್ಲಿರುವ ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯ ಬ್ಯಾಕ್ಟೀರಿಯಾಗಳು ಮನುಷ್ಯನ ಬಾಯಿಯಲ್ಲಿರುತ್ತವೆ.
* ಒಬ್ಬ ಮನುಷ್ಯ ತನ್ನ ಜೀವಮಾನದಲ್ಲಿ ಎರಡು ಈಜುಕೊಳವನ್ನು ತುಂಬಬಹುದಾದಷ್ಟು ಎಂಜಲನ್ನು ಉತ್ಪತ್ತಿ ಮಾಡುತ್ತಾನೆ.
* ಎಲ್ಲರ ಕಣ್ಣರೆಪ್ಪೆಯಲ್ಲಿ ಚಿಕ್ಕ ಚಿಕ್ಕ ಹುಳುಗಳು ವಾಸವಾಗಿರುತ್ತವೆ.
* ಉಸಿರಾಡುವುದು ಹಾಗೂ ನುಂಗುವುದು ಎರಡೂ ಕೆಲಸವನ್ನು ಒಂದೇ ಬಾರಿ ಮಾಡಲು ಆಗದ ಸಸ್ತನಿ ಎಂದರೆ ಮನುಷ್ಯ.
* ಚಿಕ್ಕ ವಿದ್ಯುತ್‌ ಬಲ್ಬ್‌ ಬೆಳಗಿಸುವಷ್ಟು ಶಕ್ತಿಯನ್ನು ಮನುಷ್ಯನ ಮಿದುಳು ಉತ್ಪತ್ತಿ ಮಾಡುತ್ತದೆ.
*ಜನಿಸುವಾಗ ಮಗುವಿಗೆ 300 ಮೂಳೆ ಇರುತ್ತದೆ. ಬೆಳವಣಿಗೆ ಹಂತದಲ್ಲಿ ಕೆಲವು ಮೂಳೆಗಳು ಒಂದಕ್ಕೊಂದು ಸೇರಿಕೊಳ್ಳುವುದರಿಂದ ಅಂತಿಮವಾಗಿ ಮಾನವನ ದೇಹದಲ್ಲಿ 206 ಮೂಳೆಗಳು ಉಳಿಯುತ್ತವೆ.
* ಮಾನವ ದೇಹದ ಅಂಗಗಳಲ್ಲಿ ರಿಪೇರಿಯೇ ಆಗದ ಒಂದು ಅಂಗ ಎಂದರೆ ಹಲ್ಲು.
* ನಿದ್ದೆಯಲ್ಲಿ ವಾಸನೆ ತಿಳಿಯುವುದಿಲ್ಲ.
* ಗರ್ಭಧಾರಣೆ ಸಂದರ್ಭದಲ್ಲಿ ಗರ್ಭಾಶಯವು ಸಹಜ ಗಾತ್ರಕ್ಕಿಂತ 500 ಪಟ್ಟು ಹಿಗ್ಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT