ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆದ ನಂತರ ಲಿಂಗ ನಿರ್ಧಾರ

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಎಲ್ಲಾ ಪ್ರಾಣಿ, ಪಕ್ಷಿಗಳು ಹುಟ್ಟಿದ ತಕ್ಷಣವೇ ಅವುಗಳು ಹೆಣ್ಣೋ, ಗಂಡೋ ಎಂಬುದು ತಿಳಿಯುತ್ತದೆ. ಆದರೆ ಸಮುದ್ರ ಆಮೆಗಳ ಲಿಂಗ ಮಾತ್ರ ಹುಟ್ಟಿದ ಹಲವು ದಿನಗಳ ನಂತರ ನಿರ್ಧಾರವಾಗುತ್ತದೆ.

ಆಮೆಗಳ ಗೂಡಿನ ಉಷ್ಣತೆಯೇ ಅವುಗಳ ಲಿಂಗವನ್ನು ನಿರ್ಧರಿಸುತ್ತದೆ ಎಂದಿದೆ ಹೊಸ ಅಧ್ಯಯನ. ಹೀಗೊಂದು ಬೆರಗು ಮೂಡಿಸುವ ಅಧ್ಯಯನ ನಡೆಸಿರುವುದು ಫ್ಲೋರಿಡಾದ ಆಟ್ಲಾಂಟಿಕ್‌ ವಿಶ್ವವಿದ್ಯಾಲಯ. 

ಸಮುದ್ರದ ಮರಿ ಆಮೆಗಳು ಎಕ್ಸ್‌ ಅಥವಾ ವೈ ಕ್ರೋಮೊಸೋಮ್‌ ಹೊಂದಿರುವುದಿಲ್ಲ. ಗೂಡಿನಲ್ಲಿ ಉಷ್ಣತೆಯ ಆಧಾರದ ಮೇಲೆ ಭ್ರೂಣವು ಗಂಡು ಅಥವಾ ಹೆಣ್ಣಾಗಿ ರೂಪು ತಳೆಯುತ್ತದೆ.

ಬೆಚ್ಚಗಿನ ಮರಳು ಹೆಣ್ಣು ಮತ್ತು ತಂಪಾದ ಮರಳು ಗಂಡು ಆಮೆಗಳ ಉತ್ಪತ್ತಿಗೆ ನೆರವಾಗುತ್ತದೆ. ಜಾಗತಿಕ ತಾಪಮಾನ ಏರುತ್ತಿರುವುದು ಹಾಗೂ ವಾತಾವರಣದಲ್ಲಿನ ಬದಲಾವಣೆ ಕಾರಣ ಇವುಗಳ ಹೆಣ್ಣು ಸಂತತಿಯೇ ಹೆಚ್ಚುತ್ತಿದೆ. ಇದರಿಂದ ಇವುಗಳ ಸಂತತಿ ನಶಿಸುವ ಅಪಾಯ
ವಿದೆ ಎನ್ನುತ್ತದೆ ಈ ಸಂಶೋಧನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT