ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತುಂಡು ಪದ್ಧತಿ’ಯಲ್ಲಿ ನಾಟಿ

ಎಣಿಕೆ ಗಳಿಕೆ- 45
Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ತೋಟಗಾರಿಕಾ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಗುಲಾಬಿ, ಕ್ರೋಟಾನ್ ಇತ್ಯಾದಿ ಬೆಳೆಗಳಲ್ಲಿ ತುಂಡು ನಾಟಿ ಪದ್ಧತಿ ಮೂಲಕ ಕಸಿ ಮಾಡಬಹುದು. ಕತ್ತರಿಸಿದ ಸಸ್ಯದ ಕಾಂಡ ಅಥವಾ ರೆಂಬೆಯ ತುಂಡುಗಳನ್ನು ನಾಟಿ ಮಾಡುವ ವಿಧಾನವಿದು. ಅದರ ಕುರಿತು ಒಂದಿಷ್ಟು ವಿವರ...

1) ತುಂಡು ನಾಟಿ ಮಾಡುವ ಜಾಗದಲ್ಲಿ ಚೆನ್ನಾಗಿ ನೀರು ಬಸಿದು ಹೋಗುವಂತಿರಬೇಕು ಮತ್ತು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಉತ್ತಮವಾಗಿರಬೇಕು.

2) ನಾಟಿಗೆ ಆಯ್ಕೆ ಮಾಡುವ ಕಾಂಡದ ತುಂಡು ರೋಗದಿಂದ ಮುಕ್ತವಾಗಿದ್ದು ಸಾಕಷ್ಟು ಎಲೆಗಳನ್ನು ಹೊಂದಿರಬೇಕು.

3) ಕಾಂಡದ ಮೃದು ತುಂಡುಗಳನ್ನು 5 ಸೆಂ.ಮೀ. ಆಳಕ್ಕೆ ಮತ್ತು ಬಲಿತ ತುಂಡುಗಳನ್ನು 10 ಸೆಂ.ಮೀ. ಆಳಕ್ಕೆ ಹೂಳಬೇಕು ಅಥವಾ ನಾಟಿ ಮಾಡಬೇಕು.

4) ಕಾಂಡದ ಮೃದು ತುಂಡುಗಳನ್ನು ನೆಟ್ಟಗೆ ನಾಟಿ ಮಾಡಿದರೆ ಬಲಿತ ತುಂಡುಗಳನ್ನು ಸ್ವಲ್ಪ ಓರೆಯಾಗಿ ನಾಟಿ ಮಾಡಬೇಕು.

5) ನೆಡುವ/ನಾಟಿ ವಿಧಾನ ಸುಮಾರು 2 ಸೆಂ.ಮೀ. ದಪ್ಪ, 15 ಸೆಂ.ಮೀ. ಉದ್ದ ಮತ್ತು 3–5 ಮೊಗ್ಗುಗಳಿರುವ ಕಾಂಡ ಇಲ್ಲವೆ ರೆಂಬೆ ತುಂಡುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಾಟಿ ಮಾಡುವ ತುಂಡುಗಳ ಕೆಳಭಾಗವನ್ನು ಓರೆಯಾಗಿ ಮೊಗ್ಗಿನ ಕೆಳಗೆ ಕತ್ತರಿಸಿ ಹೆಚ್ಚಾಗಿರುವ ಎಲೆಗಳನ್ನು ಸವರಿ ಹಾಕಬೇಕು. ನಂತರ ನಾಟಿ ಮಾಡಿ ನಿಯಮಿತವಾಗಿ ನೀರು ಪೂರೈಕೆ ಮಾಡಬೇಕು.

6) ಸಸಿ ಕಟ್ಟಿದ ಗಿಡಗಳೇ ಇರಲಿ ಅಥವಾ ಬೇರು ಬರಿಸಿದ ಸಸಿಗಳೇ ಇರಲಿ ಅವುಗಳ ರಕ್ಷಣೆ ಅತಿ ಮುಖ್ಯ. ಈ ರೀತಿಯಾಗಿ ಬೆಳೆಸಿದ ಸಸಿಗಳನ್ನು ಭಾಗಶಃ ನೆರಳಿರುವ ಪ್ರದೇಶದಲ್ಲಿ ಇಟ್ಟು ನಿಯಮಿತವಾಗಿ ನೀರು ಪೂರೈಕೆ ಮಾಡುತ್ತಿರಬೇಕು. ಸಸ್ಯಗಳ ಬೆಳವಣಿಗೆ ಗಮನಿಸಿ ಆಗಿಂದಾಗ್ಗೆ ಪೋಷಕಾಂಶಗಳನ್ನು ಪೂರೈಸುತ್ತಿರಬೇಕು.

7) ಕಸಿ ಕಟ್ಟಿದ ನಂತರ ಕೆಲವು ಗಿಡಗಳು ಬೇಗ ನಾಟಿಗೆ/ನೆಡುವ ಪೂರ್ವದಲ್ಲಿಯೇ ಹೂವು-ಕಾಯಿಗಳನ್ನು ಬಿಡಲು ಪ್ರಾರಂಭಿಸಬಹುದು. ಅಂಥ ಸಂದರ್ಭದಲ್ಲಿ ಅವುಗಳನ್ನು ಕಿತ್ತು ಹಾಕಬೇಕು.

ಇದಲ್ಲದೆ ತುಂಡುಗಳನ್ನು ನಾಟಿ ಮಾಡಿದ ಮತ್ತು ಕಸಿ ಕಟ್ಟಿದ ದಿನಾಂಕ, ಉಪಯೋಗಿಸಿದ ಜಾತಿ ಇತ್ಯಾದಿಗಳನ್ನು ಒಂದೆಡೆ ದಾಖಲು ಮಾಡುವುದು ಒಳ್ಳೆಯದು. ಇದರಿಂದ ಅವುಗಳ  ತೊಂದರೆಗಳಿಗೆ ಪರಿಹಾರ ಸೂಚಿಸಲು ಅನುಕೂಲವಾಗುವುದು.
ಮಾಹಿತಿ: ಕಣಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT