ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಫ್‌: ಸಂಪತ್ತು ವೃದ್ಧಿ

Last Updated 17 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಹೂಡಿಕೆದಾರರು ಷೇರು ಸಂಬಂಧಿತ ಮ್ಯೂಚುವಲ್‌ ಫಂಡ್ ಯೋಜನೆಗಳ ಮೇಲೆ 2016–17ನೇ ಆರ್ಥಿಕ ವರ್ಷದಲ್ಲಿ  ₹70 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ.

ಇದರಿಂದ ಷೇರು ಸಂಬಂಧಿತ ಮ್ಯೂಚುವಲ್ ಫಂಡ್ ಯೋಜನೆಗಳ ಸಂಪತ್ತು ಮೌಲ್ಯ ಶೇ 41 ರಷ್ಟು ಏರಿಕೆಯಾಗಿದ್ದು, ಮಾರ್ಚ್‌ 31ರ ಅಂತ್ಯಕ್ಕೆ ₹5.43 ಲಕ್ಷ ಕೋಟಿಗಳಿಗೆ ತಲುಪಿದೆ.

ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. ಚಿಲ್ಲರೆ ಹೂಡಿಕೆದಾರರು ಪ್ರಮುಖ ಯೋಜನೆಗಳಲ್ಲಿ ಪ್ರತಿ ತಿಂಗಳು ₹ 4,000 ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಿದ್ದಾರೆ. 

ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸಲು ಸಂಪತ್ತು ನಿರ್ವಹಣಾ ಸಂಸ್ಥೆಗಳು ಹಲವು ಕ್ರಮಗಳನ್ನು ತೆಗೆದುಕೊಂಡಿವೆ. ಅಲ್ಲದೆ, ಷೇರು ಸಂಬಂಧಿತ ನಿಧಿಗಳಿಂದ ಉತ್ತಮ ಗಳಿಕೆ ಬರುತ್ತಿರುವುದೂ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

***

2016–17ನೇ ವರ್ಷವು ಮ್ಯೂಚುವಲ್‌ ಫಂಡ್‌ ಉದ್ಯಮಕ್ಕೆ ಸುವರ್ಣಯುಗವಾಗಿದೆ. ಪ್ರತಿ ತಿಂಗಳಿನಲ್ಲಿಯೂ ಹೂಡಿಕೆ ಪ್ರಮಾಣ ಉತ್ತಮವಾಗಿತ್ತು
-ಅನಿಲ್‌ ಛೋಪ್ರಾ, ಬಜಾಜ್‌ ಕ್ಯಾಪಿಟಲ್‌ ಗ್ರೂಪ್‌ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT