ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಕಾರ್ಯಕ್ರಮದಲ್ಲಿ ಶಾಸಕ ಪಾಟೀಲ

‘ಸಮಾಜ ಸುಧಾರಣೆ ನೀತಿ ಅಂಬೇಡ್ಕರ್‌ ಕೊಡುಗೆ’
Last Updated 18 ಏಪ್ರಿಲ್ 2017, 4:27 IST
ಅಕ್ಷರ ಗಾತ್ರ
ಕಲಬುರ್ಗಿ: ‘ಜಾತಿ ವ್ಯವಸ್ಥೆ , ಮೂಢ ನಂಬಿಕೆಗಳ ನಿರ್ಮೂಲನೆಗೆ ಪ್ರಯತ್ನಿಸಿ, ಮಹಿಳೆಯರಿಗೆ ಸಾಂವಿಧಾನಿಕವಾಗಿ ಸಮಾನ ಹಕ್ಕು ನೀಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅನನ್ಯವಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಹೇಳಿದರು. 
 
ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಸಮಿತಿ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡ ‘ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ’  ಉದ್ಘಾಟಿಸಿ ಅವರು ಮಾತನಾಡಿದರು.
 
ಅಂಬೇಡ್ಕರ್ ಅವರ ‘ಸಮಾಜ ಸುಧಾರಣೆ ನೀತಿ ಮತ್ತು ಸರ್ವರಿಗೂ ಶಿಕ್ಷಣ ಸಿಗುವ ಮೂಲ ಪರಿಕಲ್ಪನೆಯೂ ದೇಶಕ್ಕೆ ದೊಡ್ಡ ಕೊಡುಗೆಯಾಗಿದೆ. ಶೋಷಿತರ ಧ್ವನಿಯಾಗಿ ಶಿಕ್ಷಣ, ಹೋರಾಟ ಮತ್ತು ಮೂಲಭೂತ ಹಕ್ಕುಗಳನ್ನು ಕೆಳವರ್ಗದವರಿಗೆ ಸಿಗುವಂತೆ ಮಾಡಿದ್ದಾರೆ’ ಎಂದರು.
 
ಸಮಾಜ ಸುಧಾರಣೆ ಚಿಂತನೆಯಲ್ಲಿ ಬಹುಶಃ ಅಂಬೇಡ್ಕರ್ ಅವರಿಗೆ ಇದ್ದ ಬದ್ಧತೆಯನ್ನು ಸಂವಿಧಾನ ರಚನೆ ಸಮಿತಿಯ ಇತರೆ ಸದಸ್ಯರು ಖಂಡಿಸಿದರೂ ಅದನ್ನು ಅಂಬೇಡ್ಕರರು ಬಲವಾಗಿ ಸಮರ್ಥಿಸಿಕೊಂಡಿದ್ದರು. ಹಿಗಾಗಿಯೇ ಭಾರತಕ್ಕೆ ಒಂದು ಉತ್ಕೃಷ್ಟ ಸಂವಿಧಾನ ಲಭ್ಯವಾಗಿದೆ ಎಂದು ಹೇಳಿದರು.
 
ವಕೀಲ ಭೀಮಣ್ಣಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ಅವರ ‘ಜಾತಿ ವಿನಾಶ’,  ‘ಪ್ರಾಚೀನ ಭಾರತದಲ್ಲಿ ಕ್ರಾಂತಿ, ಪ್ರತಿ ಕ್ರಾಂತಿ’ ಮತ್ತು ‘ಪ್ರಭುತ್ವ ಮತ್ತು ಅಲ್ಪಸಂಖ್ಯಾತರು, ‘ ಹಿಂದೂ ಕೋಡ್ ಬಿಲ್’ ಕೃತಿಗಳಲ್ಲಿ ವಿದ್ವತ್ ಪೂರ್ಣ ಸಾಮಾಜಿಕ, ರಾಜಕೀಯ, ಆರ್ಥಿಕ ವಿಶ್ಲೇಷಣೆ ಮತ್ತು ವರ್ಗ, ಜಾತಿ, ಲಿಂಗ ಸಮಾನತೆಗೆ ಅವರು ಸೂಚಿಸಿರುವ ಪ್ರಜಾತಂತ್ರ ಆಯಾಮಗಳನ್ನು ವಿದ್ಯಾರ್ಥಿ ಯುವಜನರಿಗೆ ಅರ್ಥ ಮಾಡಿಸುವ ಸಾಂಘಿಕ ಪ್ರಯತ್ನ  ಅಂಬೇಡ್ಕರ್ 125ನೇ ಜಯಂತಿ ವರ್ಷಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ‘ ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ’ ಕಾರ್ಯಕ್ರಮದ ಮೂಲಕ ಆಗಬೇಕು ಎಂದು ಹೇಳಿದರು. 
 
ಪ್ರಾಚಾರ್ಯ ಪ್ರೊ.ಜೆ.ಎಸ್. ಖಂಡೇರಾವ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೊ. ಬಿ.ಎಸ್.ಬಿರಾದಾರ, ಡಾ.ಪದ್ಮರಾಜ ರಾಸಣಗಿ, ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಸಮಿತಿ ವಿಭಾಗಿಯ ಸಂಚಾಲಕ ಗೌತಮ ಖಾನಾಪುರೆ, ಜಿಲ್ಲಾ ಸಂಯೋಜಕ ನಾಗರಾಜ ಬಿ., ವಿಕಾಸ ಸಾವರಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT