ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರಿಗೆ ಕಾದಿರುವ ಕನಗಂಡನಹಳ್ಳಿ ಜನತೆ

ಗ್ರಾಮಕ್ಕೆ ಒಂದೇ ಕೊಳವೆಬಾವಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ
Last Updated 18 ಏಪ್ರಿಲ್ 2017, 5:20 IST
ಅಕ್ಷರ ಗಾತ್ರ
ಹುಣಸಗಿ: ಸಮೀಪದ ಕಾಮನಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕನಗಂಡನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು, ಗ್ರಾಮಸ್ಥರು ಸೌಲಭ್ಯಕ್ಕಾಗಿ ಕಾಯುವಂತಾಗಿದೆ.
 
ಗ್ರಾಮಕ್ಕೆ ನೀರು ಒದಗಿಸಲು ಹೊರ ವಲಯದಲ್ಲಿ ಏಕೈಕ ಕೊಳವೆಬಾವಿ ಇದೆ. ಅದು ಕೂಡಾ ಬತ್ತುತ್ತಿದೆ. ಇದರಿಂದ ಗ್ರಾಮದ ಜನತೆ ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಗ್ರಾಮದ ತಿಪ್ಪಣ್ಣ ಪಿರಗಾರ ಹಾಗೂ ಗೋವಿಂದ ರಾಠೋಡ ತಿಳಿಸಿದರು. 
 
ಹಿಂದುಳಿದ ಜನಾಂಗದವರೇ ಹೆಚ್ಚಿರುವ ಕನಗಂಡನಹಳ್ಳಿ ಗ್ರಾಮದಲ್ಲಿ 200 ಕ್ಕೂ ಹೆಚ್ಚು ಮನೆಗಳಿವೆ. 1,000 ಜನ ಸಂಖ್ಯೆ ಇದೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ನೀರು ಲಭ್ಯವಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರಾದ ಬಸಮ್ಮ ಮತ್ತು ಹನುಮಂತ ಹಾದಿಮನಿ ಅವರ ಅಳಲು. 
 
ಗ್ರಾಮದ ಜನರೆಲ್ಲರೂ ಕುಡಿಯುವ ನೀರು ಬಳಕೆಗಾಗಿ ಇರುವ ಒಂದು ಕೊಳವೆಬಾವಿಗೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಇದ್ದು, ರಾತ್ರಿ ಕೂಡಾ ಈ ಪಾಳಿ ಹೆಚ್ಚಾಗಿರುತ್ತದೆ ಎಂದು ಗ್ರಾಮದ ದೇವಪ್ಪ ಹಾದಿಮನಿ ತಿಳಿಸಿದರು.
 
ಗ್ರಾಮದಲ್ಲಿ ಒಂದು ಸೇದುವ ಬಾವಿ ಇದೆ. ಅದರ ನೀರೂ ತಳಕಂಡಿದೆ. ಎರಡು ವರ್ಷಗಳ ಹಿಂದೆ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಗ್ರಾಮದ ಹೊರವಲಯದಲ್ಲಿ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ, ಅದಕ್ಕೆ ಇಂದಿನ ವರೆಗೂ ಪೈಪ್‌ಲೈನ್‌ ಹಾಗೂ ವಿದ್ಯುತ್‌ ಸಂಪರ್ಕ ಒದಗಿಸಿಲ್ಲ. ಇದರಿಂದ ಲಕ್ಷಾಂತರ ಹಣ ಖರ್ಚಾ ದರೂ ಹನಿನೀರು ಮಾತ್ರ ಲಭ್ಯವಾಗಿಲ್ಲ ಎಂದು ಗ್ರಾಮದ ಮಹಿಳೆಯರು ದೂರಿದರು. 
 
ಗ್ರಾಮದಲ್ಲಿ  ಸಿ.ಸಿ ರಸ್ತೆ, ಒಳಚರಂಡಿ ಇಲ್ಲ. ಮಲಿನ ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ಗ್ರಾಮಕ್ಕೆ  ಸಂಪರ್ಕ ಕಲ್ಪಿಸುವ ರಸ್ತೆ ಹದೆಗೆಟ್ಟಿದ್ದು, ಗ್ರಾಮಕ್ಕೆ ಬರಲು ಬೀಗರು ಹಿಂದೆ ಮುಂದೆ ನೋಡು ವಂತಾಗಿದೆ ಎನ್ನುತ್ತಾರೆ. 
 
ಆರಂಭವಾಗದ ನೀರಿನ ಘಟಕ: ವರ್ಷದ ಹಿಂದೆ ಗ್ರಾಮದಲ್ಲಿ ಕುಡಿ ಯುವ ನೀರಿನ ಶುದ್ಧೀಕರಣ ಘಟಕಕ್ಕಾಗಿ ಸ್ಥಳ ಪರಿಶೀಲಿಸಿ ಅವಶ್ಯಕ ಪರಿಕರಗಳನ್ನು ತಂದು ಅಳವಡಿಸಲಾಗಿದೆ. ಇದು ವರೆಗೂ ಕಾರ್ಯಾರಂಭ ಮಾಡಿಲ್ಲ. ಇದರಿಂದಾಗಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ ಎಂದು ಗ್ರಾಮದ ಕುಮಾರನಾಯಕ ರಾಠೋಡ, ಯಂಕಪ್ಪ ದೊರಿ ಆರೋ ಪಿಸಿದರು. 
 
ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು 200ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಇದೆ. ಮಕ್ಕ ಳಿಗೆ ಕಲಿಸುವ ಶಿಕ್ಷಕರು ಮೂವರು ಮಾತ್ರ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಮನಸ್ಸು ಮಾಡಿ ಅಗತ್ಯ ಸೌಲಭ್ಯ ಗಳನ್ನು ಒದಗಿಸಲಿ ಎಂಬುದು ಗ್ರಾಮಸ್ಥರ ಒತ್ತಾಯ. 
ಭೀಮಶೇನರಾವ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT