ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾದಾಯಿ ಹೋರಾಟಕ್ಕೆ ಯುವಜನತೆ ಮುಂದಾಗಲಿ’

Last Updated 18 ಏಪ್ರಿಲ್ 2017, 5:35 IST
ಅಕ್ಷರ ಗಾತ್ರ

ನರಗುಂದ: ಮಹಾದಾಯಿ ಹೋರಾಟಕ್ಕೆ ಯುವ ಸಮುದಾಯ ಮುಂದಾಗಬೇಕು. ಬರುವ ಚುನಾವಣೆ  ಜನಪ್ರತಿನಿಧಿಗಳಿಗೆ  ಪಾಠವಾಗಬೇಕು ಎಂದು ಕಡದಳ್ಳಿಯ ಯುವ ರೈತ ಬಸವರಾಜ ಕುಂಬಾರ ಹೇಳಿದರು.ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 642ನೇ ದಿನವಾದ ಸೋಮವಾರ   ಮಾತನಾಡಿದರು.ಯುವಶಕ್ತಿ ಎದ್ದರೆ ಇಡಿ ದೇಶವೇ ಎಚ್ಚರಗೊಳ್ಳುತ್ತದೆ. ಆದ್ದರಿಂದ ಪ್ರತಿ ಗ್ರಾಮದಲ್ಲಿನ ಯುವಕರು ಮಹಾದಾಯಿ ಹೋರಾಟದಲ್ಲಿ ಭಾಗವಹಿಸಬೇಕು. ನಿತ್ಯ ಧರಣಿಯಲ್ಲಿ ಪಾಲ್ಗೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ ಮಾತನಾಡಿ ಸಾಲ ತೀರಿಸದೇ ರೈತರ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪರಿಸ್ಥಿತಿಯ ವಾಸ್ತವವನ್ನು ಅರಿತು ರೈತರ ಸಾಲ ಮನ್ನಾ  ಮಾಡುವುದು ಅಗತ್ಯವಾಗಿದೆ. ಸಿ.ಎಂ. ಸಿದ್ದರಾಮಯ್ಯ ಅವರು ಸಾಲ ಮನ್ನಾ  ಮಾಡು ಎಂದು ಆಗ್ರಹಿಸಿದರೆ  ಕೇಂದ್ರದತ್ತ ಬೊಟ್ಟು ಮಾಡುವುದು ಸಲ್ಲದು. ಇದನ್ನು ಬಿಟ್ಟು ರೈತರ ಸಾಲ ಮನ್ನಾ ಮಾಡುವಂತೆ  ಒತ್ತಾಯಿಸಿದರು.

ಎಸ್.ಬಿ. ಜೋಗಣ್ಣವರ ಮಾತನಾಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ರಮೇಶ ನಾಯ್ಕರ, ಸೋಮಲಿಂಗಪ್ಪ ಆಯಟ್ಟಿ, ನಾಯಕರ, ಚನ್ನಪ್ಪಗೌಡ ಪಾಟೀಲ, ಜಗನ್ನಾಥ ಮುಧೊಳೆ, ಎಸ್‌.ಕೆ.ಗಿರಿಯಣ್ಣವರ, ಯಲ್ಲಪ್ಪ ಗುಡದೇರಿ,  ವಾಸು ಚವ್ಹಾಣ,  ವೆಂಕಪ್ಪ ಹುಜರತ್ತಿ,    ವೀರಣ್ಣ ಸೊಪ್ಪಿನ, ಗಂಗಮ್ಮ ಹಡಪದ,   ರಾಯವ್ವ ಕಟಗಿ ಸೇರಿದಂತೆ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT