ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸಿಂಪಿ ಸಮುದಾಯ ಭವನಕ್ಕೆ ₹ 20 ಲಕ್ಷ

Last Updated 18 ಏಪ್ರಿಲ್ 2017, 6:18 IST
ಅಕ್ಷರ ಗಾತ್ರ

ಜಮಖಂಡಿ(ಬನಹಟ್ಟಿ):  ಶಿವಶಿಂಪಿ ಸಮಾಜದ ಸಂಘಟನೆಯ ಬಗ್ಗೆ ಚಿಂತನೆ- ಮಂಥನ ಕಾರ್ಯಕ್ರಮಗಳು ನಡೆಯಬೇಕು. ಎಲ್ಲರೊಂದಿಗೆ ಒಳ್ಳೆಯ ಮಧುರ ಬಾಂಧವ್ಯ ಹೊಂದಿಕೊಳ್ಳುವ ಮನೋಭಾವ ಮೂಡಬೇಕು. ಶಿವಶಿಂಪಿ ಸಮಾಜ ಬಾಂಧವರು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಪಡೆದುಕೊಂಡು ಸಮಾಜವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ತಿಳಿಸಿದರು.

ಸ್ಥಳೀಯ ಬಸವ ಭವನದಲ್ಲಿ ಶಿವಸಿಂಪಿ ಸಮಾಜ ಕಲ್ಯಾಣ ಸಂಘ ಹಾಗೂ ಬಾಗಲಕೋಟ ಜಿಲ್ಲಾ ಶಿವಸಿಂಪಿ ಸಮಾಜದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ ಶಿವದಾಸಿಮಯ್ಯನವರ ಜಯಂತಿ ಹಾಗೂ ಶಿವಸಿಂಪಿ ಸಮಾಜದ ಜಿಲ್ಲಾ ಸಮಾವೇಶವನ್ನು  ಉದ್ಘಾಟಿಸಿ ಮಾತನಾಡಿದರು.ಜಮಖಂಡಿಯಲ್ಲಿ ಕಟ್ಟುತ್ತಿರುವ ನಿಯೋಜಿತ ಶಿವಸಿಂಪಿ ಸಮುದಾಯ ಭವನಕ್ಕೆ ನಮ್ಮ ಶಾಸಕರ ನಿಧಿಯಿಂದ ₹ 10 ಲಕ್ಷ ನೀಡುತ್ತೇನೆ. ಅಲ್ಲದೇ ಇನ್ನೂ ಹೆಚ್ಚಿನ ಅನುದಾನವನ್ನು ಕೂಡಾ ಕೊಡಿಸುವ ಭರವಸೆಯನ್ನು ಶಾಸಕ ಸಿದ್ದು ನ್ಯಾಮಗೌಡ ವ್ಯಕ್ತ ಪಡಿಸಿದರು.

ಸಮಾರಂಭದಲ್ಲಿ ನಿಯೋಜಿತ ಶಿವಶಿಂಪಿ ಸಮುದಾಯ ಭವನದ ನೀಲನಕ್ಷೆ ಉದ್ಘಾಟಿಸಿದ ಬಾಗಲಕೋಟೆ ಸಂಸದ ಪಿ ಸಿ. ಗದ್ದಿಗೌಡರ ಮಾತನಾಡಿ, ಲೋಕಸಭೆ ಅಧಿವೇಶನದಲ್ಲಿ ಹಿಂದುಳಿದ ಆಯೋಗಕ್ಕೆ ಸಂವಿಧಾನದ ಸ್ಥಾನಮಾನ ಸಿಕ್ಕಿದ್ದು,  ನಮಗೆಲ್ಲರಿಗೂ ಸಂತೋಷದಾಯಕವಾಗಿದೆ. ಕೇಂದ್ರ- ಮತ್ತು ರಾಜ್ಯ ಸರ್ಕಾರಗಳಲ್ಲಿ ಸಮನ್ವಯತೆ ಮೂಡುವಂತಾಗಬೇಕು. ಆಗ ಮಾತ್ರ  ವಿಶೇಷ ಸವಲತ್ತು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಶಿವಸಿಂಪಿ ಸಮಾಜದ ಸಮುದಾಯ ಭವನ ಕಟ್ಟಡಕ್ಕೆ ಸಂಸದರ ನಿಧಿಯಿಂದ ₹ 10 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಅತಿಥಿಗಳಾಗಿದ್ದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಶಿವದಾಸಿಮಯ್ಯನವರ ತತ್ವ-, ಸಿದ್ಧಾಂತ, ಮತ್ತು -ಆದರ್ಶಗಳನ್ನು ನಾವೆಲ್ಲರೂ ಪಾಲಿಸಿ,ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.ಮಾಜಿ ಶಾಸಕ ಸಿದ್ದು ಸವದಿ ಮಾತನಾಡಿದರು. ಕಲ್ಯಾಣಮಠದ ಗೌರಿಶಂಕರ ಸ್ವಾಮಿಜಿ, ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಆಶೀರ್ವಚನ ನೀಡಿದರು.

ಮಲ್ಲೇಶ ಆಳಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಮೂಳೇದ, ನಗರಸಭೆ  ಅಧ್ಯಕ್ಷ ರಾಜೂ ಪಿಸಾಳ, ವಿಧಾನ ಪರಿಷತ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಭೂಸೇನಾ ನಿಗಮದ ಮಾಜಿ ಅಧ್ಯಕ್ಷ  ಶ್ರೀಶೈಲ್ ದಳವಾಯಿ, ಡಾ.ಉಮೇಶ ಮಹಾಬಳಶೆಟ್ಟಿ, ಬಸವರಾಜ ಸಿಂಧೂರ, ಮಹಾದೇವಪ್ಪ ಹಟ್ಟಿ, ಕಮಲಾ ನಿರಾಣಿ, ಕಿರಣ ಕಲೂತಿ, ಅಕ್ಕಮಹಾದೇವಿ ಜವಳಿ ಇದ್ದರು. ಸಮಾಜದ ಸಾಧಕರಿಗೆ, ಪ್ರತಿಭಾವಂತ ಮಕ್ಕಳಿಗೆ, ಹಿರಿಯ ಜೀವಿಗಳಿಗೆ ಸನ್ಮಾನಿಸಲಾಯಿತು.

ಎನ್.ವ್ಹಿ ಅಸ್ಕಿ ಸ್ವಾಗತಿಸಿದರು. ಬಾಳಪ್ಪ ಮಮದಾಪೂರ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕವಿತಾ ಶಿವಸಿಂಪಿ ಹಾಗೂ ಶಶಿಕಲಾ ಕೋರಚ ಗಾಂವ ನಿರೂಪಿಸಿದರು. ಶಂಕರ ಕಡಿಬಾಗಿಲ ವಂದಿಸಿದರು.ತಹಶೀಲ್ದಾರ್‌ ಕಚೇರಿಯಿಂದ ನಗರದ ವಿವಿಧ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ಶಿವದಾಸಿಮಯ್ಯನವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ನೂರಾರು ಮಹಿಳೆಯರು ಪೂರ್ಣ ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT