ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ಉಡುಗೆಯಲ್ಲಿ ಬೆಡಗಿಯರ ಮಿಂಚು

Last Updated 18 ಏಪ್ರಿಲ್ 2017, 6:53 IST
ಅಕ್ಷರ ಗಾತ್ರ

ಬಳ್ಳಾರಿ: ಅಲ್ಲಿ ನೆರೆದ ಯುವಕ ಮತ್ತು ಯುವತಿಯರ ಸಾಂಪ್ರಾದಾಯಿಕ ಉಡುಗೆ– ತೊಡುಗೆಗಳು ನೋಡುಗರ ವಿಶೇಷ ಆಕರ್ಷಣೆಯಾಗಿದ್ದವು. ವರ್ಣ ರಂಜಿತ ಸೀರೆ ಹಾಗೂ ಕಾವಿಬಣ್ಣದ ನಿಲುವಂಗಿ, ಜೀನ್ಸ್‌ ಪ್ಯಾಂಟ್ ಅನ್ನು ಧರಿಸಿಕೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಇಲ್ಲಿನ ಡಾ.ಜೋಳದರಾಶಿ ದೊಡ್ಡನ ಗೌಡ ರಂಗ ಮಂದಿರದಲ್ಲಿ ಸೋಮವಾರ ನಡೆದ ಗುರು ತಿಪ್ಪೇರುದ್ರ ಕಾಲೇಜಿನ  ವಾರ್ಷಿಕೋತ್ಸವದಲ್ಲಿ ಈ ದೃಶ್ಯಗಳು ಕಂಡುಬಂದವು.

ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಶ್ಚಿಮಾತ್ಯ, ದೇಸಿ ಹಾಡುಗಳಿಗೆ  ಹಜ್ಜೆ ಹಾಕಿದರು. ನೆರೆದ ಯುವಜನರ ಕೇಕೆ ಮತ್ತು ಸಿಳ್ಳೆ ಹಾಗೂ ಕರತಾಡತನ ಮುಗಿಲ ಮುಟ್ಟಿತು.
ಇದಕ್ಕೂ ಮೊದಲು ಲೆಕ್ಕ ಪರಿ ಶೋಧಕ ಎಸ್‌.ಸಿ.ಬಾಗ್ರೇಚ ಕಾರ್ಯ ಕ್ರಮ ಉದ್ಘಾಟಿಸಿದರು.ಈ ದೇಶದ ದೊಡ್ಡ ಶಕ್ತಿ ಯುವ ಜನರದು. ಅವರು ಮನಸು ಮಾಡಿದರೆ, ಏನೆಲ್ಲ ಸಾಧಿಸಬಹುದು. ಮಾಹಿತಿ ತಂತ್ರ ಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಯುವಜನರು ಅದನ್ನು ಸದ್ಬಳಕೆ ಮಾಡಿ ಕೊಳ್ಳಬೇಕು ಎಂದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ ಸಹಾಯಕ ಪ್ರಾಧ್ಯಾಪಕ ಎನ್‌.ಶಾಂತ ನಾಯ್ಕ ಮಾತನಾ ಡಿದರು. ಕಾಲೇಜಿನ ಅಧ್ಯಕ್ಷ ಎಸ್‌.ಎನ್‌. ರುದ್ರಪ್ಪ, ಕಾರ್ಯ ದರ್ಶಿ ಜಿ.ನಾಗರಾಜ, ಪ್ರಾಚಾರ್ಯ ಆರ್‌.ಎಚ್‌.ಗುರುಪ್ರಸಾದ, ಉಪನ್ಯಾಸಕ ರಾದ ಎಚ್‌.ಆರ್‌.ಬಾಲ ನಾಗರಾಜ, ಇರ್ಷಾದ್ ಅಲಿ, ರೂಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT