ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಟುವಟಿಕೆಯಿಂದ ಕೂಡಿದ ಕಲಿಕೆ ಶಾಶ್ವತ’

ಮೂಡಿಗೆರೆ: ಬೇಸಿಗೆ ಸಂಭ್ರಮ ಕಾರ್ಯಕ್ರಮ
Last Updated 18 ಏಪ್ರಿಲ್ 2017, 7:00 IST
ಅಕ್ಷರ ಗಾತ್ರ
ಮೂಡಿಗೆರೆ: ‘ಚಟುವಟಿಕೆಯೊಂದಿಗೆ ಕಲಿತ ಜ್ಞಾನವು ಶಾಶ್ವತವಾಗಿ ಉಳಿ ಯುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜ ಅಭಿಪ್ರಾಯಪಟ್ಟರು.
 
ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಸೋಮವಾರ ನಡೆದ ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಸರ್ಕಾರವು ಹಲವು ಸವಲತ್ತುಗಳನ್ನು ನೀಡುತ್ತಿದ್ದು, ಬೇಸಿಗೆ ರಜೆಯ ಅವಧಿಯಲ್ಲೂ ಮಕ್ಕಳಿಗೆ ರಜೆಯ ಸಂಭ್ರಮದೊಂದಿಗೆ ಕಲಿಕೆ ಯುಂಟುಮಾಡಬೇಕು ಎಂಬ ಉದ್ದೇಶ ದಿಂದ ಬೇಸಿಗೆ ಸಂಭ್ರಮ ಕಾರ್ಯಕ್ರಮ ವನ್ನು ಏರ್ಪಡಿಸಿದೆ. ವಿದ್ಯಾರ್ಥಿಗಳು ಬೇಸಿಗೆ ಸಂಭ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
 
ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಲಕ್ಷ್ಮಣಗೌಡ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಸರ್ಕಾರವು ಎಲ್ಲಾ ಸವಲತ್ತು ಗಳನ್ನು ನೀಡಿದ್ದು, ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ವಿಶ್ವಮಟ್ಟ ದಲ್ಲಿ ಸಾಧನೆ ಮಾಡಿದ ಉದಾಹರಣೆಗಳಿವೆ.
 
ಪೋಷಕರು ಸರ್ಕಾರಿ ಶಾಲೆಗಳು ಎಂಬ ತಾತ್ಸರ ಭಾವನೆ ತಾಳದೇ, ಶಾಲೆಯೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡು ಸೂಕ್ತ ವಾಗಿ ತಮ್ಮ ಮಕ್ಕಳ ಕಲಿಕೆಯ ಮೇಲ್ವಿಚ್ಛಾರಣೆ ಮಾಡಿದರೆ ಗುಣಮಟ್ಟದ ಶಿಕ್ಷಣವು ಮಗುವಿಗೆ ದೊರೆಯುತ್ತದೆ’ ಎಂದರು.
 
ಕ್ಷೇತ್ರ ಸಮನ್ವಯಾಧಿಕಾರಿ ಶಿವನಂಜೇಗೌಡ ಮಾತನಾಡಿ, ‘ಪ್ರತಿಯೊಂದು ಮಗುವಿನಲ್ಲೂ ಒಂದಲ್ಲಾ ಒಂದು ಪ್ರತಿಭೆ ಅಡಗಿದ್ದು, ಅವುಗಳನ್ನು ಹೊರ ಹಾಕಲು ಸೂಕ್ತ ವೇದಿಕೆ ಸಿಗದೇ ಪ್ರತಿಭೆಯಿದ್ದರೂ ಗುರುತಿಸಿಕೊಳ್ಳಲಾಗದ ಸ್ಥಿತಿ ಬಂದೊದಗಿದೆ.

ಆದರೆ ಸರ್ಕಾರ ಜಾರಿಗೊಳಿ ಸಿರುವ ಬೇಸಿಗೆ ಸಂಭ್ರಮ ಕಾರ್ಯಕ್ರ ಮವು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಕೂಡ ಸಹಕಾರಿಯಾ ಗುತ್ತದೆ. ಬೇಸಿಗೆ ಸಂಭ್ರಮದಲ್ಲಿ ಶಿಕ್ಷಕರು ಕಲಿಸಲು ಉತ್ಸಾಹಿಗಳಾಗಿದ್ದು, ಪೋಷ ಕರು ತಮ್ಮ ಮಕ್ಕಳು ಬೇಸಿಗೆ ಸಂಭ್ರಮಕ್ಕೆ ತೆರಳುವಂತೆ ಕ್ರಮ ಕೈಗೊಳ್ಳಬೇಕು’ ಎಂದರು.
 
ಈ ಸಂದರ್ಭದಲ್ಲಿ ದೈಹಿಕ ಪರಿ ವೀಕ್ಷಕ ಗಣೇಶಪ್ಪ. ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳಾದ ಆಫ್ತಾಬ್‌ಅಹಮ್ಮದ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್‌, ಮುಖ್ಯ ಶಿಕ್ಷಕಿ ಆಶಾಲತಾ ಮುಂತಾ ದವರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT