ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿಪಿಎಲ್’ ಕ್ರಿಕೆಟ್‌ ಟೂರ್ನಿ: ದುಬೈ ವಾರಿಯರ್ಸ್ ತಂಡಕ್ಕೆ ಪ್ರಶಸ್ತಿ

Last Updated 18 ಏಪ್ರಿಲ್ 2017, 7:20 IST
ಅಕ್ಷರ ಗಾತ್ರ

ಕುಂದಾಪುರ:  ಇಲ್ಲಿನ ಗಾಂಧಿ ಮೈದಾನ ದಲ್ಲಿ ಟಾರ್ಪೆಡೋಸ್ ತಂಡ ಆಯೋಜಿ ಸಿದ್ದ ಮೂರು ದಿನಗಳ ಅಂತರ ರಾಷ್ಟ್ರೀಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ‘ಟಿಪಿಎಲ್-2017’ ಟ್ರೋಫಿಯನ್ನು ದುಬೈ ವಾರಿಯರ್ಸ್ ತಂಡ ತನ್ನದಾಗಿಸಿಕೊಂಡು, ₹ 10 ಲಕ್ಷ ನಗದು ಬಹುಮಾನ ಪಡೆದುಕೊಂಡಿತು. ಉಡುಪಿ ಬಾಯ್ಸ್ ತಂಡ ರನ್ನರ್‌ ಅಪ್‌ ಸ್ಥಾನ ಪಡೆಯಿತು.

ಭಾನುವಾರ ರಾತ್ರಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್, ‘ಇಂದಿನ ಕಾಲಘಟ್ಟದಲ್ಲಿ ಕ್ರೀಡೆಯನ್ನು ಸಜ್ಜುಗೊಳಿಸುವುದೇ ಕಠಿಣ ಸವಾಲು. ಕ್ರೀಡೆ ಹಾಗೂ ಶಿಕ್ಷಣ ಮನು ಷ್ಯನ ಎರಡು ಅವಿಭಾಜ್ಯ ಅಂಗಗ ಳಿದ್ದಂತೆ. ಪ್ರೋತ್ಸಾಹಕರ ನೆರವಿನಿಂದ ನಡೆಯುವ ಕ್ರೀಡೆಗಳನ್ನು ಸ್ಪರ್ಧಿಗಳು ತಮ್ಮ ಯಶಸ್ಸಿನ ಮೆಟ್ಟಿಲನ್ನಾಗಿಸಿ ಬಳಸಿ ಕೊಳ್ಳಬೇಕು’ ಎಂದು ಅಭಿಪ್ರಾಯ ಪಟ್ಟರು.

‘ಸೋಲು ಹಾಗೂ ಗೆಲುವನ್ನು ಸಮಾ ನವಾಗಿ ಸ್ವೀಕರಿಸುವವವೇ ನಿಜವಾದ ಆಟಗಾರ. ಕಠಿಣವಾದ ಹಾಗೂ ನಿರಂ ತರವಾದ ಅಭ್ಯಾಸಗಳಿಂದ ಗುರಿಯನ್ನು ಸಾಧಿಸುವ ಅವಕಾಶ ಮುಕ್ತವಾಗಿರುತ್ತದೆ’ ಎಂದರು.ಮಂಗಳೂರು ಮಹಾ ನಗರಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ, ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ, ಉದ್ಯ ಮಿಗಳಾದ ಗಣೇಶ ಕಿಣಿ ಬೆಳ್ವೆ, ಸದಾ ನಂದ ನಾವುಡ, ಪತ್ರಕರ್ತ ರಾಜೇಶ್ ಕೆ.ಸಿ,  ಟಾರ್ಪೆಡೋಸ್ ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ, ನಿರ್ದೇಶಕರಾದ ಸಬ್ಲಾಡಿ ಜಯರಾಮ್ ಶೆಟ್ಟಿ, ರಮೇಶ್ ಶೆಟ್ಟಿ, ಪ್ರಕಾಶ ಆಚಾರ್, ಹರಿಪ್ರಸನ್ನ ಪಿ. ಭಟ್, ಗೋಪಾಲ್, ನಿತ್ಯಾನಂದ ಕೆ, ಜಯ ಶಂ ಕರ, ರಜಿತ್‌ ಕುಮಾರ ಶೆಟ್ಟಿ, ಅಮರ್, ಸುಧೀಶ್ ಕೆ.ಸಿ, ಸುಬ್ರಹ್ಮಣ್ಯ ಗಾಣಿಗ, ನಿತಿನ್ ಸಾರಂಗ, ಉದಯ್ ಶೆಣೈ, ನಿವೃತ್ತ ಬ್ಯಾಂಕ್‌ ಅಧಿಕಾರಿ ಕುಮಾರ ಹಾಗೂ ಸುರೇಶ್‌ ಶೆಟ್ಟಿ ಬೆಳ್ವೆ ಇದ್ದರು.ಟಾರ್ಪೆಡೋಸ್ ಸಂಸ್ಥೆಯ ಗೌರವಾ ಧ್ಯಕ್ಷ ವಿಜಯನಾಥ್ ಹೆಗ್ಡೆ ಸ್ವಾಗತಿಸಿದರು, ವಿಲಾಸ್ ಹೆಗ್ಡೆ ಬೆಂಗಳೂರು ನಿರೂಪಿ ಸಿದರು. ನಾರಾಯಣ ಶೆಟ್ಟಿ ಮಾರ್ಕೋಡು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT