ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರವ್‌ ಗಂಗೂಲಿ – ರಿಕಿ ಪಾಂಟಿಂಗ್ ಚಾಂಪಿಯನ್ಸ್‌ ಟ್ರೋಫಿಯ ವೀಕ್ಷಕ ವಿವರಣೆಕಾರರಾಗಿ ಆಯ್ಕೆ

Last Updated 18 ಏಪ್ರಿಲ್ 2017, 11:08 IST
ಅಕ್ಷರ ಗಾತ್ರ

ದುಬೈ: ಜೂನ್‌ 1 ರಿಂದ 18ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿಗೆ ವೀಕ್ಷಕ ವಿವರಣೆಕಾರರಾಗಿ ಭಾರತದ ಕ್ರಿಕೆಟಿಗ ಸೌರವ್‌ ಗಂಗೂಲಿ ಹಾಗೂ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಆಯ್ಕೆ ಮಾಡಿದೆ.

ಕ್ರಿಕೆಟ್‌ ಜಗತ್ತಿನ ಪ್ರಮುಖರಾದ ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್, ಶ್ರೀಲಂಕಾದ ಕುಮಾರ ಸಂಗಕ್ಕರ, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅವರು ವೀಕ್ಷಕ ವಿವರಣೆಕಾರರ ಸ್ಪರ್ಧೆಯಲ್ಲಿದ್ದರು.

‘ನಾನು ಆಟಗಾರನಾಗಿ 2 ಬಾರಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿದ್ದೇನೆ. ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ವೀಕ್ಷಕ ವಿವರಣೆಕಾರರ ತಂಡದಲ್ಲಿ ಅವಕಾಶ ದೊರೆತಿರುವುದು ಸಂತೋಷ ತಂದಿದೆ' ಎಂದು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ತಿಳಿಸಿದ್ದಾರೆ.

3 ವಾರಗಳ ಕಾಲ ನಡೆಯುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಲು ಎಲ್ಲ ತಂಡಗಳಿಗೂ ಉತ್ತಮ ವೇದಿಕೆಯಾಗಲಿದೆ ಎಂದಿದ್ದಾರೆ.

ಭಾರತ ಸೇರಿದಂತೆ ಪ್ರಮುಖ 8 ತಂಡಗಳ ನಡುವೆ ಹಣಾಹಣೆ ನಡೆಯಲಿದ್ದು, ಐಸಿಸಿ ಟಿವಿ ಪಂದ್ಯಾವಳಿಗಳ ಪ್ರಸಾರದ ಹೊಣೆ ನಿರ್ವಹಿಸಲಿದೆ. 

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌– ಬಾಂಗ್ಲಾದೇಶ ತಂಡಗಳು ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT