ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವೇ ಆ ‘ಸಾವಿನ ರಸ್ತೆಗಳು’...

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪಾಕಿಸ್ತಾನದ ಕಾರಾಕೋರಂ ಹೆದ್ದಾರಿ
ಇದಕ್ಕೆ ಪಾಕಿಸ್ತಾನ ಸರ್ಕಾರ ‘ಫ್ರೆಂಡ್‌ಶಿಪ್‌ ಹೈವೇ’ ಎಂದೇ ಹೆಸರಿಟ್ಟಿದೆ. ಇದು ಸಮುದ್ರ ಮಟ್ಟದಿಂದ 4,800 ಮೀಟರ್‌ ಎತ್ತರದಲ್ಲಿದೆ. ಪಾಕಿಸ್ತಾನ ಮತ್ತು ಚೀನಾ ನಡುವಣ ಸಂಪರ್ಕ ಕೊಂಡಿಯಾಗಿರುವ ಬೆಟ್ಟಗಳಿಂದಲೇ ಆವೃತವಾಗಿರುವ ಈ ರಸ್ತೆಯಲ್ಲಿ ಸಂಚರಿಸುವ ಬಸ್‌ಗಳು ಬಂಡೆಗಳನ್ನೇ ಹೊತ್ತು ಸಂಚರಿಸುವಂತೆ ಕಾಣುತ್ತವೆ. ಇದು ಪ್ರೇಕ್ಷಣೀಯ ಸ್ಥಳವಾಗಿಯೂ ಗುರುತಿಸಿಕೊಂಡಿದೆ.

*


ದಿ ಝೋಜಿ ಲಾ ಪಾಸ್‌
ಶ್ರೀನಗರ ಮತ್ತು ಲೇಹ್‌ ನಡುವಿನ ರಾಷ್ಟ್ರೀಯ ಹೆದ್ದಾರಿ ಇದು.  ಇದು ಸಮುದ್ರ ಮಟ್ಟಕ್ಕಿಂತ 3,528 ಮೀಟರ್‌ ಎತ್ತರವಿದೆ. ಚಳಿಗಾಲದಲ್ಲಿ ಈ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ಲಡಾಕ್‌ ಮತ್ತು ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿದು.

*


ಬೊಲಿವಿಯಾದ ಯಂಗಸ್‌ ರಸ್ತೆ
ಪ್ರಪಂಚದ ಅತಿ ಅಪಾಯಕಾರಿ ರಸ್ತೆಗಳಲ್ಲಿ ಇದಕ್ಕೆ ಮೊದಲನೇ ಸ್ಥಾನ. ಈ ರಸ್ತೆಯಲ್ಲಿ ಪ್ರತಿವರ್ಷ ಕಡಿಮೆ ಎಂದರೂ 300 ಮಂದಿ ಸಾಯುತ್ತಾರೆ. ಸ್ಥಳೀಯರು ಇದನ್ನು ‘ಸಾವಿನ ರಸ್ತೆ’ ಎಂದೇ ಕರೆಯುತ್ತಾರೆ. ಎರಡು ವಾಹನಗಳು ಮುಖಾಮುಖಿಯಾದಾಗ ಒಂದು ಟ್ರಕ್ ಅಥವಾ ಬಸ್ ಕಣಿವೆಗೆ ಜಾರುವುದು ಈ ರಸ್ತೆಯಲ್ಲಿ ಸಾಮಾನ್ಯ ವಿದ್ಯಮಾನ ಎನಿಸಿಕೊಂಡಿದೆ.

*


ಸ್ಕಿಪರ್ಸ್‌ ಕ್ಯಾನನ್‌ ರಸ್ತೆ
ಈ ರಸ್ತೆಯ ಚೆಲುವನ್ನು ಕಂಡಾಗ ಒಮ್ಮೆ ಇಲ್ಲಿ ಹೆಜ್ಜೆಯೂರಬೇಕು ಎಂಬ ಆಸೆ ಆಗದೇ ಇರದು. ಕಿರಿದಾದ ದಾರಿಯ ಪಕ್ಕದಲ್ಲಿಯೇ ದೊಡ್ಡ ಬಂಡೆ, ಕೆಳಗೆ ಇಣುಕಿದರೆ ನದಿ. ಈ ರಸ್ತೆಯಲ್ಲಿ ಸಂಚರಿಸಲು ಅನುಮತಿ ಪಡೆಯಬೇಕು, ಅಷ್ಟು ಅಪಾಯಕಾರಿ ಇದು. ಈ ರಸ್ತೆ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಡಿದಾದ ಇಳಿಜಾರು ಮತ್ತು ಅಪಾಯಕಾರಿ ತಿರುವುಗಳನ್ನು ಇದು ಹೊಂದಿದೆ.

*


ಸಿಚುಯಾನ್‌– ಟಿಬೆಟ್‌ ಹೈವೆ
ಟಿಬೆಟ್ ಪೂರ್ವದ ಚೆಂಗ್ಡುಯಿಂದ ಆರಂಭವಾಗುವ ಈ ರಸ್ತೆ  ಟಿಬೆಟ್ ದಕ್ಷಿಣ ಭಾಗದಲ್ಲಿರುವ ಲ್ಹಾಸಾದಲ್ಲಿ ಕೊನೆಗೊಳ್ಳುತ್ತದೆ. ಈ ರಸ್ತೆಯ ಉದ್ದ 2,142 ಕಿ.ಮೀ. ಈ ಹೆದ್ದಾರಿಯು 14 ಎತ್ತರದ ಪರ್ವತಗಳನ್ನು ಬಳಸುತ್ತದೆ. ಇವುಗಳ ಜೊತೆಗೆ ಆಳವಾದ ಕಂದರದ ಸೊಬಗು ನೋಡಬಹುದು. ಟ್ರಕ್‌, ಬಸ್‌ಗಳು ಹೆಚ್ಚಾಗಿ ಸಂಚರಿಸುವ ಈ ರಸ್ತೆಯಲ್ಲಿ ಲೆಕ್ಕವಿಲ್ಲದಷ್ಟು ಜನರು ಸತ್ತಿದ್ದಾರೆ.

*


ಇಟಲಿಯ ಸ್ಟೇಲಿಯೋ ಪಾಸ್‌
ಆಲ್ಪ್ಸ್‌ ಪರ್ವತ ಶ್ರೇಣಿಯನ್ನು ಆವರಿಸಿರುವ ರಸ್ತೆ ಇದು. ಈ ರಸ್ತೆ ಸಮುದ್ರ ಮಟ್ಟಕ್ಕಿಂತ 2,757 ಮೀ. ಎತ್ತರದಲ್ಲಿದೆ.  ನೋಡಲು ಭಯಾನಕ ಎನ್ನಿಸುವ ಈ ರಸ್ತೆಯಲ್ಲಿ ಪ್ರತಿವರ್ಷ ಸುಮಾರು 200 ಜನ ಸಾಯುತ್ತಾರಂತೆ. ಈ ರಸ್ತೆಯ ಅಲ್ಲಲ್ಲಿ ಕಾಂಕ್ರಿಟ್ ರಸ್ತೆಯೂ ಇರುವುದು ವಿಶೇಷ.

*


ಲಾಸ್‌ ಕ್ಯಾರಕೋಲ್ಸ್‌ ಪಾಸ್‌

ಈ ರಸ್ತೆ  ಚಿಲಿ ಮತ್ತು ಅರ್ಜೆಂಟೀನಾ ನಡುವೆ ಇರುವ ಆಂಡ್ರಿಯಾಸ್‌ ಪರ್ವತದ ಮೂಲಕ ಹಾದುಹೋಗುತ್ತದೆ. ಕಡಿದಾದ ಇಳಿಜಾರು ಹೊಂದಿರುವ ಈ ರಸ್ತೆಯಲ್ಲಿ  ಸುರಕ್ಷತೆ ಕ್ರಮಗಳನ್ನು ಅನುಸರಿಸಿಲ್ಲ. ವರ್ಷದ ಎಲ್ಲಾ ದಿನಗಳಲ್ಲಿಯೂ ಈ ರಸ್ತೆ ಹಿಮಭರಿತವಾಗಿರುತ್ತದೆ. ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜಾಗರೂಕತೆಯ ಜೊತೆಗೆ ಪರಿಣತಿ ಪಡೆದ ಚಾಲಕರು ಅವಶ್ಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT