ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಟೆಲ್‌ನಿಂದ ಆಂಡ್ರಾಯ್ಡ್‌ ಸೆಟ್‌ ಟಾಪ್‌ ಬಾಕ್ಸ್‌

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಭಾರ್ತಿ ಏರ್‌ಟೆಲ್‌ನ ಡಿಟಿಎಚ್ ಸೇವೆಯಾಗಿರುವ ‘ಏರ್‌ಟೆಲ್ ಡಿಜಿಟಲ್‌ ಟಿವಿ ಅಂಡ್ರಾಯ್ಡ್‌ ಆಧಾರಿತ ಸೆಟ್‌ ಟಾಪ್‌ ಬಾಕ್ಸ್‌ನ್ನು (ಎಸ್‌ಟಿಬಿ) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಂಡ್ರಾಯ್ಡ್‌ ಆಧಾರಿತ ಸೆಟ್‌ ಟಾಪ್‌ ಬಾಕ್ಸ್‌ ಸಂಪರ್ಕ ಪಡೆಯುವ ಗ್ರಾಹಕರು ಟಿ.ವಿಯಲ್ಲಿ ವಿವಿಧ ಚಾನೆಲ್‌ ಜತೆ ಅಂತರ್ಜಾಲ(ಇಂಟರ್‌ನೆಟ್‌) ಸಂಪರ್ಕ ಪಡೆಯಬಹುದು.

ಸಾಮಾನ್ಯ ಟಿವಿಗಳಿಗಿಂತ ಏರ್‌ಟೆಲ್‌ ಇಂಟರ್‌ನೆಟ್‌ ಟಿವಿ ಗೆ ಈ ಸೆಟ್‌ಟಾಪ್‌ ಬಾಕ್ಸ್‌ ಅಳವಡಿಸಿದರೆ ತಡೆರಹಿತವಾಗಿ ಈ ಎರಡೂ ಸೌಲಭ್ಯ ಪಡೆಯಬಹುದು ಎಂದು ಭಾರ್ತಿ ಏರ್‌ಟೆಲ್‌ ಡಿಟಿಎಚ್‌ ಸಿಇಒ ಮತ್ತು ನಿರ್ದೇಶಕ ಸುನಿಲ್‌ ತಲ್ದಾರ್‌ ಹೇಳಿದ್ದಾರೆ.

ಆರಂಭದಲ್ಲಿ ದೇಶದ 20 ಪ್ರಮುಖ ನಗರಗಳಲ್ಲಿ ಮಾತ್ರ ಈ ಸೌಲಭ್ಯ ದೊರೆಯಲಿದೆ. ಇ–ಕಾಮರ್ಸ್‌ ಕಂಪೆನಿ  ಅಮೆಜಾನ್‌ನಲ್ಲಿ ಗ್ರಾಹಕರು ಈ ಉತ್ಪನ್ನ ಖರೀದಿಸಬಹುದು. ಗ್ರಾಹಕರು ಗೂಗಲ್‌ ಪ್ಲೇ ಸ್ಟೋರ್‌ನಿಂದ ಆ್ಯಪ್‌ ಡೌನ್‌ಲೋಡ್‌ ಮಾಡಿ ಹಲವು ಆಟ (ಗೇಮ್‌) ಆಡಬಹುದು.

ಮೂವಿ ಅಪ್ಲಿಕೇಷನ್‌ ನೆಟ್‌ಪ್ಲಿಕ್ಸ್‌, ಯೂಟ್ಯೂಬ್‌ ಸಪೋರ್ಟರ್‌ ಅಳವಡಿಸಿದ ಸೆಟ್‌ಟಾಪ್‌ ಬಾಕ್ಸ್‌ ಬೆಲೆ ₹4,999. 500 ಡಿಟಿಎಚ್‌ ಚಾನೆಲ್‌ ಮತ್ತು ಒಂದು ವರ್ಷದ ಸದಸ್ಯತ್ವ ಶುಲ್ಕ ಸಮೇತ ಈ ಬಾಕ್ಸ್‌ ಲಭ್ಯವಿದ್ದು ಅದರ ಬೆಲೆ ₹7,999. ಹಳೆಯ ಗ್ರಾಹಕರು ಒಂದು ತಿಂಗಳ ಸದಸ್ಯತ್ವ ಶುಲ್ಕ ಸೇರಿದಂತೆ ₹3,999  ಈ ಸೆಟ್‌ಟಾಪ್‌ ಖರೀದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT